Advertisement
“CMF ಫೋನ್ 1, CMF ವಾಚ್ ಪ್ರೊ 2, ಮತ್ತು CMF ಬಡ್ಸ್ ಪ್ರೊ 2 ಸೃಜನಶೀಲ ವಿನ್ಯಾಸ, ಗುಣಮಟ್ಟ ಹೊಂದಿದ್ದು, ನೀರಸವಾಗಿದ್ದ ಉದ್ಯಮಕ್ಕೆ ಆಹ್ಲಾದ ನೀಡುತ್ತದೆ ಎಂದು ನಥಿಂಗ್ CEO ಕಾರ್ಲ್ ಪೀ ಹೇಳಿದ್ದಾರೆ.
CMF ಫೋನ್ 1 ನೂತನ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ ಹೊಂದಿದೆ. 5000 mAh ಬ್ಯಾಟರಿ, ಎರಡು ದಿನದ ಬಾಳಿಕೆ ಹೊಂದಿದೆ. RAM ಬೂಸ್ಟರ್ ಅನ್ನು ಬಳಸಿಕೊಂಡು 16 GB RAM ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. CMF ಫೋನ್ 1 ಸೋನಿ 50 MP ಹಿಂಬದಿಯ ಕ್ಯಾಮರಾ, 16 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಅಲ್ಟ್ರಾ-ಸ್ಮೂತ್ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ನೊಂದಿಗೆ 6.67″ ಸೂಪರ್ AMOLED ಪರದೆ ಹೊಂದಿದೆ. ಈ ಫೋನು ನಥಿಂಗ್ OS 2.6 ಹೊಂದಿದೆ.
Related Articles
ಪರಸ್ಪರ ಬದಲಾಯಿಸಬಹುದಾದ ಬೆಜೆಲ್ ವಿನ್ಯಾಸದೊಂದಿಗೆ ಸ್ಮಾರ್ಟ್ ವಾಚ್ ಸಿಎಂಎಫ್ ವಾಚ್ ಪ್ರೊ2 . 1.32’’ AMOLED ,ಆನ್ ಡಿಸ್ಪ್ಲೇ ಹೆಚ್ಚಿನ ರೆಸಲ್ಯೂಶನ್ ಮತ್ತು ಕಸ್ಟಮೈಸೇಷನ್ ಆಯ್ಕೆಗಳೊಂದಿಗೆ 100 ಕ್ಕೂ ಹೆಚ್ಚು ವಾಚ್ ಫೇಸ್ಗಳನ್ನು ಹೊಂದಿದೆ.
Advertisement
ಇದು 120 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಹೊಂದಿದ್ದು, ಇದು ಹೃದಯ ಬಡಿತ, ಬ್ಲಡ್ ಆಕ್ಸಿಜನ್ ಮಟ್ಟ, (SpO₂) ಮತ್ತು ಒತ್ತಡದ ಮಟ್ಟಗಳನ್ನು ಅಳೆಯುವ ಆಯ್ಕೆ ಹೊಂದಿದೆ.
ಬ್ಲೂಟೂತ್ ಕರೆಗಳನ್ನು ಮಾಡಬಹುದು, ಸಂಗೀತವನ್ನು ನಿಯಂತ್ರಿಸಬಹುದು ಮತ್ತು ಫೋನ್ ನೊಟಿಫಿಕೇಷನ್ ಸ್ವೀಕರಿಸುವುದು, ಹವಾಮಾನ ವರದಿ ನೀಡುತ್ತದೆ. IP68 ನೀರು ಮತ್ತು ಧೂಳು ನಿರೋಧಕವಾಗಿದ್ದು, 11 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.
CMF ಬಡ್ಸ್ ಪ್ರೊ 2:ಸಿಎಂಎಫ್ ಬಡ್ಸ್ ಪ್ರೊ 2, 11 ಎಂಎಂ ಬಾಸ್ ಡ್ರೈವರ್ ಮತ್ತು 6 ಎಂಎಂ ಟ್ವೀಟರ್ ಅನ್ನು ಸಂಯೋಜಿಸುವ ಡ್ಯುಯಲ್ ಡ್ರೈವರ್ಗಳನ್ನು ಹೊಂದಿದೆ. ಹೈ-ರೆಸ್ ಆಡಿಯೊ ವೈರ್ಲೆಸ್ ಮತ್ತು ಡೈರಾಕ್ ಆಪ್ಟಿಯೊಗೆ ಪ್ರಮಾಣೀಕರಿಸಿದ LDAC™ ತಂತ್ರಜ್ಞಾನದೊಂದಿಗೆ, ಹೈಫೈ ಧ್ವನಿಯನ್ನು ನೀಡುತ್ತದೆ. ಯಾವುದೇ ಪರಿಸರದಲ್ಲಿ ಸ್ಪಷ್ಟವಾದ ಕರೆಗಳಿಗಾಗಿ ಕ್ಲಿಯರ್ ವಾಯ್ಸ್ ಟೆಕ್ನಾಲಜಿ 2.0 ಮತ್ತು ವಿಂಡ್-ನಾಯ್ಸ್ ರಿಡಕ್ಷನ್ 2.0, 6 HD ಮೈಕ್ ಹೊಂದಿದ್ದು, ಸ್ಪಷ್ಟ ಕರೆ ಮಾಡಬಹುದಾಗಿದೆ. 43 ಗಂಟೆಗಳ ಒಟ್ಟು ಬ್ಯಾಟರಿ ಹೊಂದಿದ್ದು, 7 ಗಂಟೆಗಳ ಪ್ಲೇಬ್ಯಾಕ್ಗಾಗಿ 10 ನಿಮಿಷ ಚಾರ್ಜ್ ಮಾಡಿದರೆ ಸಾಕು ಎಂದು ಕಂಪೆನಿ ಹೇಳಿದೆ. CMF ಪವರ್ 33W ಫಾಸ್ಟ್ ಚಾರ್ಜರ್:
CMF ಪವರ್ 33W ಫಾಸ್ಟ್ ಚಾರ್ಜರ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಒಂಬತ್ತು ಸುರಕ್ಷತಾ ಪ್ರೋಟೋಕಾಲ್ ಗಳೊಂದಿಗೆ USB-C ಪೋರ್ಟ್ ಅನ್ನು ಹೊಂದಿದೆ. ಇದು CMF ಫೋನ್ 1 ಗೆ ಕೇವಲ 20 ನಿಮಿಷಗಳಲ್ಲಿ 50% ಬ್ಯಾಟರಿ ಮತ್ತು ನಥಿಂಗ್ ಫೋನ್ (2a) ಗೆ 50% ಬ್ಯಾಟರಿಯನ್ನು 23 ನಿಮಿಷಗಳಲ್ಲಿ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಬೆಲೆ ಮತ್ತು ಲಭ್ಯತೆ
CMF ಫೋನ್ 1 ಎರಡು ಮಾದರಿಗಳಲ್ಲಿ ಲಭ್ಯವಿದೆ:
– 6GB + 128GB – ₹15,999
-8GB + 128GB – ₹17,999 ಬಿಡುಗಡೆಯ ಮೊದಲ ದಿನ CMF ಫೋನ್ 1 ನ 6GB + 128GB ಮಾದರಿಯನ್ನು ₹14,999 ಮತ್ತು 8GB + 128GB ಮಾದರಿ ₹16,999 ಗೆ ದೊರಕುತ್ತದೆ. ಸಿಎಂಎಫ್ ವಾಚ್ ಪ್ರೊ 2, 4,999 ರೂ. ಮತ್ತು 5,499 ರೂ. ದರ ಹೊಂದಿದ್ದು, ಸಿಎಂಎಪ್ ಬಡ್ಸ್ ಪ್ರೊ 2, 4,299 ರೂ. ಹಾಗೂ ಪವರ್ 33 ಪವರ್ ಬ್ಯಾಂಕ್ 799 ರೂ. ದರ ಹೊಂದಿದೆ. ಈ ಮೂರೂ ಪ್ರಾಡಕ್ಟ್ ಗಳು ಜುಲೈ 12 ರಿಂದ ಫ್ಲಿಪ್ಕಾರ್ಟ್, ಸಿಎಂಎಫ್.ಟೆಕ್ ಮತ್ತು ರೀಟೇಲ್ ಅಂಗಡಿಗಳಲ್ಲಿ ದೊರೆಯಲಿವೆ.