ಲಂಡನ್: ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ನಥಿಂಗ್ ಕಂಪೆನಿ ತನ್ನ ಚೊಚ್ಚಲ ಉತ್ಪನ್ನವಾದ ನಥಿಂಗ್ ಇಯರ್ (1) ನ ಕಪ್ಪು ಬಣ್ಣದ ಆವೃತ್ತಿಯನ್ನು ಹೊರತಂದಿದೆ. ಡಿಸೆಂಬರ್ 1 3 ರಿಂದ ಫ್ಲಿಪ್‍ಕಾರ್ಟ್ ನಲ್ಲಿ ಇದು ಲಭ್ಯವಾಗಲಿದೆ.
ಕಾರ್ಲ್ ಪೇ ಸ್ಥಾಪಿತ ನಥಿಂಗ್ ಬ್ರಾಂಡ್ ತನ್ನ ಚೊಚ್ಚಲ ಸಾಧನವಾದ ಇಯರ್ (1) ಬಡ್ಸ್ ಅನ್ನು ಹೊರತಂದು 2.20 ಲಕ್ಷ ಯೂನಿಟ್‍ಗಳು ಮಾರಾಟವಾಗಿ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಅದರ ಕಪ್ಪು ಬಣ್ಣದ ಆವೃತ್ತಿಯನ್ನು ಹೊರತಂದಿದೆ.
ಅದರ ಬಿಳಿಯ ಬಣ್ಣದ ಆವೃತ್ತಿ ಹೊಳಪಾದ ಹೊರಮೈ ಹೊಂದಿದ್ದು, ನೂತನ ಆವೃತ್ತಿ ನುಣುಪು, ಹೊಳಪು ರಹಿತ ಕಪ್ಪು ಬಣ್ಣ ಹೊಂದಿದೆ.
ಇದನ್ನೂ ಓದಿ:ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ
ತನ್ನ ಹಿಂದಿನ ಆವೃತ್ತಿಯಂತೆ ಪಾರದರ್ಶಕ ಕೇಸ್ ಅನ್ನು ಇದು ಹೊಂದಿದೆ. 34 ಗಂಟೆಗಳವರೆಗೆ ಪ್ಲೇ ಟೈಮ್‌ನೊಂದಿಗೆ, ಶಕ್ತಿಯುತ 11.6mm ಡ್ರೈವರ್ ಮತ್ತು ನಾಯ್ಸ್ ಕ್ಯಾನ್ಸಲೇಷನ್ ಹೊಂದಿದೆ. ಇದು ಲಿಮಿಟೆಡ್ ಎಡಿಷನ್ ಆಗಿದ್ದು, 6,999 ರೂ. ಗೆ ಲಭ್ಯವಾಗಲಿದೆ.
ಈ ಇಯರ್ ಬಡ್ ಉತ್ಪಾದನೆ ಕಾರ್ಬನ್ ನ್ಯೂಟ್ರಲ್ ಎಂದು ಸಂಸ್ಥೆ ತಿಳಿಸಿದೆ. ಹೊಸ ಉತ್ಪನ್ನದ ಬಗ್ಗೆ ಮಾತನಾಡಿದ ನಥಿಂಗ್ ಸಹ ಸ್ಥಾಪಕ ಹಾಗೂ ಸಿಇಓ ಕಾರ್ಲ್ ಪೇ, ಇದೊಂದು ಸಕಾರಾತ್ಮಕ ಬದಲಾವಣೆಯಾಗಿದೆ. ಕಾರ್ಬನ್ ನ್ಯೂಟ್ರಾಲಿಟಿಯು, ಸುಸ್ಥಿರತೆಯತ್ತ ನಮ್ಮ ಮೊದಲ ಹೆಜ್ಜೆಯಾಗಿದೆ. ಉದ್ಯಮದಲ್ಲಿ ಕಾರ್ಬನ್ ನ್ಯೂಟ್ರಾಲಿಟಿ ಅಳವಡಿಕೆಯ ಕೊರತೆಯಿದ್ದು, ಮುಂಬರುವ ದಿನಗಳಲ್ಲಿ, ಅನೇಕ ತಂತ್ರಜ್ಞಾನ ಕಂಪೆನಿಗಳು ಇದನ್ನು ಅಳವಡಿಸಿಕೊಳ್ಳಲಿವೆ ಎಂದರು.