Advertisement

ಬುಲ್ಡೋಜರ್ ಮುಂದೆ ಯಾವುದೂ ಬರುವುದಿಲ್ಲ: ಬಿಜೆಪಿ ಸಂಸದೆ ಹೇಮಾ ಮಾಲಿನಿ

01:14 PM Mar 10, 2022 | Team Udayavani |

ಮಥುರಾ : ಬುಲ್ಡೋಜರ್ ಮುಂದೆ ಯಾವುದೂ ಬರುವುದಿಲ್ಲ, ಅದು ಸೈಕಲ್ ಆಗಿರಲಿ ಅಥವಾ ಇನ್ನೇನೇ ಇರಲಿ ಎಲ್ಲವನ್ನೂ ಒಂದು ನಿಮಿಷದಲ್ಲಿ ಮುಗಿಸುತ್ತದೆ ಎಂದು ಪ್ರಖ್ಯಾತ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಗೆಲುವಿನ ಸಂಭ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು,ನಾವು ಪ್ರತಿಯೊಂದು ಅಭಿವೃದ್ಧಿಯ ಅಂಶಗಳಿಗಾಗಿ ಕೆಲಸ ಮಾಡಿದ್ದೇವೆ, ಅದಕ್ಕಾಗಿಯೇ ಸಾರ್ವಜನಿಕರು ನಮ್ಮನ್ನು ನಂಬುತ್ತಾರೆ ಎಂದರು.

ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಸರಕಾರ ರಚಿಸುವತ್ತ ದಾಪುಗಾಲು ಹಾಕಿದೆ. ಸ್ಪಷ್ಟ ಬಹುಮತ ಸಿಗುವ ಲಕ್ಷಣ ಕಂಡು ಬಂದ ಬಳಿಕ ರಾಜ್ಯದಲ್ಲಿ ಸಂಸದರು, ಶಾಸಕರು ಮತ್ತು ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next