Advertisement
ಎಲ್ಲಿ ನೋಡಿದರೂ ಈಗ ಕೊರೊನಾದ್ದೇ ಸುದ್ದಿ. ಕೊರೊನಾ ವೈರಸ್ ಕುರಿತು, ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಮತ್ತು ಅನಗತ್ಯ ಮಾಹಿತಿಗಳು ಎಗ್ಗಿಲ್ಲದಂತೆ ಪ್ರಸಾರವಾಗುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎಂಬ ಗೊಂದಲ ಸಾರ್ವಜನಿಕರಿಗೆ ಮೂಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಟ್ವಿಟರ್, ತನ್ನ ಬಳಕೆದಾರರಿಗೆ ಈ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಖಚಿತ ಮಾಹಿತಿ ಪಡೆಯಲು ಟ್ವಿಟರ್ ಬಳಕೆದಾರರು ಏನು ಮಾಡಬೇಕು ಎಂದು ವಿವರವಾಗಿ ಹೇಳಿದೆ.ಲಾಕ್‌ಡೌನ್ ಸಮಯದಲ್ಲಿ ನಾವೆಲ್ಲರೂ ದೂರದೂರವೇ ಇದ್ದರೂ, ಮಾನಸಿಕವಾಗಿ ಒಟ್ಟಿಗಿರುವುದಕ್ಕಾಗಿ, ಟ್ವಿಟ್ಟರ್‌ನಲ್ಲಿ ವಿಶ್ವಸನೀಯ ಮಾಹಿತಿಯನ್ನು ಪಡೆಯಲು ಕೆಲವು ಸಲಹೆಗಳನ್ನು ನೀಡಿದೆ. #ThinkBefore YouShare #FlattenTheCurve ಎಂಬ ಹ್ಯಾಶ್
ಟ್ಯಾಗನ್ನು ಇದಕ್ಕಾಗಿ ನೀಡಿದೆ.
Related Articles
Advertisement
ಜವಾಬ್ದಾರಿಯಿಂದ ಟ್ವೀಟ್ ಮತ್ತು ಮರುಟ್ವೀಟ್ ಮಾಡಿ. ನಿಮ್ಮ ಮಾಹಿತಿಯ ಮೂಲವು ವಿಶ್ವಸನೀಯ ಎಂಬುದನ್ನುಖಾತರಿಪಡಿಸಿಕೊಳ್ಳಿ. ಯಾವುದೇ ಸಂದೇಶ ಆಗಿರಲಿ, ಅದು ಅಧಿಕೃತ ಮೂಲದಿಂದ ಬಂದಿರಬೇಕು. ಇಲ್ಲವೇ ಪರಿಶೀಲನೆಗೆ
ಒಳಪಟ್ಟಿರಬೇಕು. ಆಗಮಾತ್ರ ಆ ಸಂದೇಶವನ್ನು ಫಾರ್ವರ್ಡ್ ಮಾಡಿ ಅಥವಾ ಶೇರ್ ಮಾಡಿ. ಅನಧಿಕೃತ ಮೂಲದ ಸಂದೇಶಗಳು ಅಥವಾ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಳ್ಳಲು ಹೋಗಬೇಡಿ. ಅಥವಾ ಇನ್ನೊಬ್ಬರಿಗೆ ಕಳಿಸಬೇಡಿ. ಒಂದು ಮೆಸೇಜ್‌ನ ಕಳಿಸುವ, ಶೇರ್ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. .#ThinkBeforeYouShare ಜಾಗತಿಕ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂದರ್ಭದಲ್ಲಿ, ಕೋವಿಡ್-19 ಸುತ್ತಲಿರುವ ಇತ್ತೀಚಿನ ಮಾಹಿತಿ ಮತ್ತು ಸುದ್ದಿಗಳನ್ನು
ತಿಳಿದುಕೊಂಡಿರಲು ವಿಶ್ವಸನೀಯ ಪತ್ರಿಕೆಗಳ ಖಾತೆಗಳನ್ನು ಅನುಸರಿಸಿ. ಒಂದು ಟ್ವೀಟ್ ಕೋವಿಡ್ -19 ಕುರಿತು ಗಾಳಿಸುದ್ದಿ ಹರಡುತ್ತಿದೆ ಅಥವಾ ಮೂಢನಂಬಿಕೆ ಬೆಳೆಸುತ್ತಿದೆ ಎಂದು ನಿಮಗನಿಸಿದರೆ, ಅಥವಾ ಟ್ವಿಟರ್ ನಿಯಮ ಗಳನ್ನು ಉಲ್ಲಂ ಸುತ್ತಿದೆ ಎನಿಸಿದರೆ ದಯ ವಿಟ್ಟು ಅದನ್ನು ವರದಿ ಮಾಡಿ. ಟ್ವಿಟ್ಟರ್ ಉದ್ಯೋಗಿಗಳು ಅಥವಾ ಟ್ವಿಟ್ಟರ್ ಸಂಸ್ಥೆಯ ಖಾತೆಗಳಿಗೆ ಟ್ಯಾಗ್ ಮಾಡಿ. ಒಂದು ಟ್ವೀಟ್ ಅನ್ನು ವರದಿ ಮಾಡಲು, ಟ್ವೀಟ್‌ನ ಮೇಲ್ಭಾಗದಲ್ಲಿರುವ ಡ್ರಾಪ್‌ಡೌನ್ ಮೆನು
ಮೇಲೆ ಕ್ಲಿಕ್ ಮಾಡಿ. https://tinyurl.com/v5oyg5c ಇಚ್ಛೆಯಿಲ್ಲದ ಖಾತೆಗಳನ್ನು ಅನುಸರಿಸಬೇಡಿ. ಅಂಥ ಖಾತೆಗಳು ನಿಮ್ಮನ್ನು ಅನುಸರಿಸುವುದನ್ನು ಬ್ಲಾಕ್ ಮಾಡಿ. ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಮಾತುಕತೆ ನಡೆಸಿ. ನಿಮ್ಮ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ. ನಿಮ್ಮ ಆಸಕ್ತಿಯನ್ನು ಗಮನಿಸಿ. ನೀವು ಅನುಸರಿಸಲು ಬಯಸುವ ಖಾತೆಗಳ ಪಟ್ಟಿ ಮಾಡಿ. ಪಟ್ಟಿಯ ಸಮಯಸೂಚಿ ನೋಡುವುದರಿಂದ, ನೀವು ಕೇವಲ ಆ ಪಟ್ಟಿಯಲ್ಲಿರುವ ಖಾತೆಗಳಿಗೆ ಮಾತ್ರ ಟ್ವೀಟ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಸಮಯಸೂಚಿಗೆ ಪಟ್ಟಿಯನ್ನು ಪಿನ್
ಮಾಡುವುದರಿಂದ ನಿಮ್ಮ ಸರಿಸಮಾನ ಆಸಕ್ತರು ಅದನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ: https://tinyurl.com/yapws7b6 ನೇರ ಸಂದೇಶಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ ನೋಟಿಫಿಕೇಶನ್‌ಗಳನ್ನು ಫಿಲ್ಟರ್ ಮಾಡಬಹುದು. ಇವುಗಳು ಹಾಗು ಇತರ ಸುರಕ್ಷತಾ ಅಂಶಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ: https://tinyurl.com/so6rpuz ಗೌರಿ