Advertisement

ಕಪ್ಪು ಹಣ ಸುಲಭದಲ್ಲಿ ಬಿಳಿ ಮಾಡಲು ನೋಟು ಅಮಾನ್ಯ: ಲಾಲು

03:30 PM Nov 08, 2017 | Team Udayavani |

ಪಟ್ನಾ : ಕಪ್ಪು ಹಣವನ್ನು ಅತ್ಯಂತ ಸುಲಭದಲ್ಲಿ  ಬಿಳಿ ಮಾಡುವ ಉದ್ದೇಶಕ್ಕಾಗಿ ನೋಟು ಅಮಾನ್ಯ ಕ್ರಮವನ್ನು ಮೋದಿ ಸರಕಾರ ಜಾರಿಗೆ ತಂದಿತು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ. 

Advertisement

ನೋಟು ಅಮಾನ್ಯಕ್ಕೆ ವರ್ಷ ತುಂಬಿದ ದಿನವಾದ ಇಂದು ಲಾಲು ಅವರ ಆರ್‌ಜೆಡಿ ಪಕ್ಷ ಬಿಹಾರ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿತು.  

“ಕಪ್ಪು ಹಣವನ್ನು ಅತ್ಯಂತ ಸುಲಭದಲ್ಲಿ ಬಿಳಿ ಮಾಡಲು ನೋಟು ಅಮಾನ್ಯವನ್ನು ಜಾರಿಗೆ ತರಲಾಯಿತು. ಇದನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ ಎಂದು ಹೇಳುವ ಮೂಲಕ ಸರಕಾರ ಅವರನ್ನು ಮೂರ್ಖರನ್ನಾಗಿ ಮಾಡಿತು’ ಎಂದು ಲಾಲು ಹೇಳಿದರು. 

ನೋಟು ಅಮಾನ್ಯಕ್ಕೆ ವರ್ಷ ತುಂಬಿದ ಇಂದಿನ ದಿನವನ್ನು ಕಾಲಾ ಧನ್‌ ವಿರೋಧಿ ದಿವಸ್‌ ಎಂದು ಆಚರಿಸುತ್ತಿರುವ ಬಿಜೆಪಿಯನ್ನು ಲಾಲು ಲೇವಡಿ ಮಾಡಿದರು. 

ವರ್ಷದ ಹಿಂದೆ ಈ ದಿನ ಪ್ರಧಾನಿ ಮೋದಿ ಅವರು 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರ ಪ್ರಕಟಿಸಿದಾಗ ಇದು ಕಾಳದನವನ್ನು ಹೊರಹಾಕುವ ಅತ್ಯಂತ ಮಹತ್ವದ ಕ್ರಮವೆಂದು ವರ್ಣಿಸಿದ್ದರು. ಆದರೆ ಮೋದಿ ಸರಕಾರ ಈ ದಿನದ ವರೆಗೂ ಎಷ್ಟು ಕಾಳಧನವನ್ನು ಅರ್ಥ ವ್ಯವಸ್ಥೆಯಿಂದ ಹೊರಹಾಕಲಾಯಿತು ಎಂಬ ಲೆಕ್ಕವನ್ನು ಜನಸಾಮಾನ್ಯರಿಗೆ ನೀಡಿಲ್ಲ ಎಂದು ಲಾಲು ಟೀಕಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next