Advertisement

ಭಾರತ ಐದಲ್ಲ, 500 ರಫೇಲ್ ಬೇಕಾದ್ರೂ ಖರೀದಿಸಲಿ: ಪಾಕಿಸ್ತಾನ ಸೇನೆ ಹೇಳಿದ್ದೇನು?

08:54 AM Aug 14, 2020 | Nagendra Trasi |

ನವದೆಹಲಿ:ಭಾರತದ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಪಾಕಿಸ್ತಾನ ಸೇನೆ ಸಿದ್ಧವಾಗಿದೆ. ಅಲ್ಲದೇ ಇತ್ತೀಚೆಗೆ ಭಾರತದ ಸೇನೆಗೆ ರಾಫೆಲ್ ಜೆಟ್ ಸೇರ್ಪಡೆಗೊಂಡಿರುವುದು ನಮಗೇನು ಕಳವಳಕಾರಿಯಾಗಿಲ್ಲ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾನ್ ಪತ್ರಿಕೆಗೆ ತಿಳಿಸಿರುವುದಾಗಿ ಹೇಳಿದೆ.

Advertisement

ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ ಪಿಆರ್)ನ ಮೇಜರ್ ಜನರಲ್ ಬಾಬರ್ ಇಫ್ತಿಖಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೇಳೆ ಪಾಕಿಸ್ತಾನದ ಆಂತರಿಕ ಮತ್ತು ಬಾಹ್ಯ ಭದ್ರತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದರು.

ಈ ಸಂದರ್ಭದಲ್ಲಿ ಭಾರತ ಖರೀದಿಸಿದ ರಫೇಲ್ ಜೆಟ್ ಖರೀದಿ ಪಾಕಿಸ್ತಾನಕ್ಕೆ ದೊಡ್ಡ ಬೆದರಿಕೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಡಿಜಿ ಐಎಸ್ ಪಿಆರ್, ನಮಗೆ ನಮ್ಮ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಅಷ್ಟೇ ಅಲ್ಲ ಯಾವುದೇ ರೀತಿಯ ದಾಳಿಯನ್ನು ನಾವು ಎದುರಿಸಲು ಸಿದ್ದವಾಗಿದ್ದೇವೆ ಎಂದು ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.

ಫ್ರಾನ್ಸ್ ನಿಂದ ಭಾರತ ರಫೇಲ್ ಯುದ್ಧ ವಿಮಾನ ಖರೀದಿಸಿರುವುದನ್ನು ನೋಡಿದರೆ ಇದು ಭಾರತದ ಅಭದ್ರತೆ ಮತ್ತು ಅವಿಶ್ವಾಸದ ಧ್ಯೋತಕವಾಗಿದೆ. ಏನೇ ಇರಲಿ ಭಾರತ ಐದಾಗಲಿ (ರಫೇಲ್) ಅಥವಾ 500 ಖರೀದಿಸಲಿ..ನಮಗೇನೂ ತೊಂದರೆ ಇಲ್ಲ. ನಾವು ಕರಾರುವಕ್ಕಾಗಿ ಎಲ್ಲದಕ್ಕೂ ಸಿದ್ಧವಾಗಿದ್ದೇವೆ. ನಮ್ಮ ಯುದ್ಧ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವೂ ಇಲ್ಲ. ಜೆಟ್ ಕ್ಕಿಂತ ಹೆಚ್ಚು ಸಾಮರ್ಥ್ಯವನ್ನು ನಾವು ತೋರಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next