Advertisement
ಅನಾಥಾಶ್ರಮ/ವೃದ್ಧಾಶ್ರಮ, ಮಹಿಳಾ ನಿಲಯ, ಪುನರ್ವಸತಿ ಕೇಂದ್ರ, ಮಕ್ಕಳ ರಕ್ಷಣಾ ಘಟಕಗಳಲ್ಲಿ ಬಹುತೇಕ ಮಂದಿ ಆಶ್ರಯ ಪಡೆದಿದ್ದಾರೆ. ಅನಾರೋಗ್ಯ, ಮನೆಯಲ್ಲಿ ಮುನಿಸು, ಉದ್ಯೋಗ ಹುಡುಕಾಟ ಇನ್ನಿತರ ಕಾರಣಗಳಿಂದ ರಸ್ತೆ ಬದಿ, ಅಂಗಡಿ ಬಾಗಿಲುಗಳಲ್ಲಿ ಮಲಗಿ ದಿನ ದೂಡುತ್ತಾರೆ. ಸಾಂಕ್ರಾಮಿಕ ಕಾಯಿಲೆಯಿಂದಲೋ, ಮಾನಸಿಕ ಅಸ್ವಸ್ಥತೆಯಿಂದಲೋ ಬಳಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸುನೀಗುತ್ತಾರೆ. ಇನ್ನು ಕೆಲವರು ಇಲಾಖೆ, ಸಾರ್ವಜನಿಕರಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಡುತ್ತಾರೆ.
Related Articles
Advertisement
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗುವ ಅಸಹಾಯಕರಲ್ಲಿ ಶೇ.80ರಷ್ಟು ಮಂದಿ ಹೊರಜಿಲ್ಲೆ/ರಾಜ್ಯದವರೇ ಅಧಿಕ ಎಂಬುವುದು ಗಮನಿಸಬೇಕಾದ ಅಂಶ. ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ ಸಹಿತ ಹಲವಾರು ಮಂದಿ ಮನನೊಂದು ವಲಸೆ ಬರುತ್ತಿದ್ದಾರೆ. ಮಹಿಳೆಯರಿಗೆ ಸಹಾಯವಾಣಿಯ ಮುಖಾಂತರ, ಮಕ್ಕಳಿಗೆ ಚೈಲ್ಡ್ ಲೈನ್ ಮೂಲಕ, ಹಿರಿಯ ನಾಗರಿಕರಿಗೆ ಕೌನ್ಸೆಲಿಂಗ್ ನಡೆಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುತ್ತದೆ.