Advertisement

ಶಾಸಕರ ಕಾಲಹರಣ ಸೂಕ್ತ ನಡೆಯಲ್ಲ

10:10 PM Aug 24, 2019 | Lakshmi GovindaRaj |

ಎಚ್‌.ಡಿ.ಕೋಟೆ: ಮಳೆ ಹಾಗೂ ನೆರೆಯಿಂದ ತಾಲೂಕಿನ ಜನರು ಸಂಕಷ್ಟದಲ್ಲಿದ್ದಾರೆ. ಜತೆಗೆ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ಆದರೆ ಶಾಸಕ ಅನಿಲ್‌ ಚಿಕ್ಕಮಾದು ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕು ಪತ್ರಕರ್ತ ಸಂಘದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೂಡಲೇ ಶಾಸಕರು ಎಚ್ಚೆತ್ತುಕೊಂಡು, ತಾಲೂಕಿನಾದ್ಯಂತ ನೆರೆಹಾವಳಿಯಿಂದ ಸೃಷ್ಟಿಯಾಗಿರುವ ನಷ್ಟವನ್ನು ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ, ಸರ್ಕಾರದ ಗಮನ ಸೆಳೆದು ಹೆಚ್ಚಿನ ಅನುದಾನ ತರಬೇಕು. ಮನೆ ಮತ್ತು ಬೆಳೆ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಿ, ಸಂತ್ರಸ್ತರ ಕಷ್ಟಕ್ಕೆ ಭಾಗಿಯಾಗಬೇಕು. ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಶಾಸಕರು ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸದೆ. ಮುಂದೆಯೂ ತಾಲೂಕಿನ ಅಭಿವೃದ್ಧಿಗೆ ಶ್ರಮಿಸದೇ ಮೋಜು ಮಸ್ತಿಯಲ್ಲಿ ಕಾಲಹರಣ ಮಾಡುತ್ತಾ, ಮಾನವೀಯತೆ ಇಲ್ಲದಂತೆ ನಡೆದುಕೊಂಡರೇ ಮುಂದಿನ ದಿನಗಳಲ್ಲಿ ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಪ್ರಜಾಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಎಂ.ಸಿ.ಕಾರ್ತಿಕ್‌ ಮಾತನಾಡಿ, ಮಳೆಯಿಂದ ತಾಲೂಕಿನ ಡಿ.ಬಿ.ಕುಪ್ಪೆ, ಹಾದನೂರು, ಬಿದರಹಳ್ಳಿ, ಗಿರಿಜನ ಹಾಡಿಗಳು ಸೇರಿ ಅನೇಕ ಕಡೆ ಮುಚ್ಚಿದ್ದ ಶಾಲೆಗಳನ್ನು ಇನ್ನೂ ತೆರೆದಿಲ್ಲ, ಗಡಿಭಾಗದ ಗಿರಿಜನರು ಒಂದು ಕಡೆ ಕಾಡುಪ್ರಾಣಿಗಳ ಹಾವಳಿ, ಇನ್ನೊಂದು ಕಡೆ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ, ಶಾಸಕರು ಮಾತ್ರ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡದೆ, ತಾಲೂಕಿನ ಅಭಿವೃದ್ದಿಗೂ ಶ್ರಮಿಸದೇ, ಅಮಾನೀಯವಾಗಿ ನಡೆದು ಕೊಳ್ಳುತ್ತಿದ್ದಾರೆ. ಮನೆ ಕಳೆದುಕೊಂಡಿದ್ದ ವೃದ್ಧೆ ಮನೆ ನೋಡಲು ಹೋಗಿ ವಿದ್ಯುತ್‌ ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿ.ಪಂ.ಅಧ್ಯಕ್ಷೆ ಪರಿಮಳಾ ಫೇಲ್‌: ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್‌ ಕ್ಷೇತ್ರದಲ್ಲೇ ಹೆಚ್ಚು ಜನರು ನೆರೆಹಾವಳಿಗೆ ತುತ್ತಾಗಿದ್ದಾರೆ. ಅಧ್ಯಕ್ಷರೂ ಮಾತ್ರ ಸಂತ್ರಸ್ತರ ನೆರವಿಗೆ ನಿಂತಿಲ್ಲ. ಜಿಲ್ಲಾಡಳಿತದಿಂದ ಸೂಕ್ತ ಪರಿಹಾರವನ್ನು ಕೊಡಿಸಿಲ್ಲ. ಇಂತಹ ಬೇಜಾವಬ್ದಾರಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿಯೇ ತಾಲೂಕು ಆಪಾರ ಪ್ರಮಾಣ ಅರಣ್ಯ ಸಂಪತ್ತು, ಭೂ ಸಂಪತ್ತಿನ ಜತೆಗೆ ನಾಲ್ಕು ಜಲಾಶಯಗಳನ್ನು ಹೊಂದಿದ್ದರೂ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಎಂದು ಹೇಳಿದರು.

Advertisement

ಕರ್ನಾಟಕ ಪ್ರಜಾಪಾರ್ಟಿಯ ರಾಜ್ಯ ಉಪಾಧ್ಯಕ್ಷ ರಾಮಚಂದ್ರರಾವ್‌, ಖಜಾಂಚಿ ಆದರ್ಶ, ಮಾದ್ಯಮ ವಕ್ತಾರ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಶಂಕರ್‌, ಜೊಸೇಫ್‌, ಕುಮಾರಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next