ನವದೆಹಲಿ: ಆನೆಯೊಂದು ಕಬ್ಬು ಸಾಗಿಸುವ ಲಾರಿಗಳನ್ನು ತಡೆದು ನಿಲ್ಲಿಸಿ ಅದರಿಂದ ಸ್ವಲ್ಪ ಕಬ್ಬನ್ನು ತಿನ್ನುತ್ತಿರುವ ಥಾಯ್ಲೆಂಡ್ ನ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಆನೆಯೊಂದು ಯಾರ ಸಹಾಯವೂ ಇಲ್ಲದೇ ಪೈಪ್ ನೀರಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನೆಟ್ಟಿಗರನ್ನು ಪ್ರಭಾವಿತರನ್ನಾಗಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹೋಳಿ ವೇಳೆ ಕಿರುಕುಳ;ಭಾರತವನ್ನು ತೊರೆದ ಜಪಾನ್ ಯುವತಿ: 3 ಮಂದಿ ಬಂಧನ
ವಿಡಿಯೋದಲ್ಲಿ, ಆನೆಯೊಂದು ಸೊಂಡಿಲನ್ನು ಉಪಯೋಗಿಸಿ ನೀರಿನ ಪೈಪ್ ಹಿಡಿದು ಸ್ನಾನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಯಾವುದೇ ಮನುಷ್ಯರ ಸಹಾಯವಿಲ್ಲದೇ ಆನೆ ಪೈಪ್ ಉಪಯೋಗಿಸಿ ಇಡೀ ಮೈಯನ್ನು ನೀರಿನಿಂದ ತೊಳೆದುಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಿಖರವಾದ ದಿನಾಂಕ ಹೊಂದಿಲ್ಲದ ಈ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಸಂತಾ ನಂದಾ ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ನಾನು ವನ್ಯ ಮೃಗಗಳನ್ನು ಬಂಧನದಲ್ಲಿ ಇಡುವುದನ್ನು ಬೆಂಬಲಿಸುವುದಿಲ್ಲ, ಆದರೆ ಆನೆಗಳ ಬುದ್ಧಿವಂತಿಕೆಯನ್ನು ಬೆಂಬಲಿಸುತ್ತೇನೆ. ಅದ್ಭುತ ಪ್ರಾಣಿ ಇಲ್ಲಿ ತಾನೇ ಸ್ವಯಂ ಆಗಿ ಸ್ನಾನ ಮಾಡುತ್ತಿದೆ” ಎಂದು ವಿಡಿಯೋಕ್ಕೆ ಕ್ಯಾಪ್ಶನ್ ನೀಡಿದ್ದಾರೆ.