Advertisement

ಅಧಿಕಾರವಲ್ಲ; ಜನರ ಪ್ರೀತಿ- ವಿಶ್ವಾಸ ಶಾಶ್ವತ: ಬೇಳೂರು

07:26 PM Oct 05, 2020 | Suhan S |

ರಿಪ್ಪನ್‌ಪೇಟೆ: ಅಭಿವೃದ್ದಿಗಿಂತ ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.

Advertisement

ಪಟ್ಟಣದ ಶ್ರೀ ರಾಮಮಂದಿರದಲ್ಲಿ ಕಾಂಗ್ರೆಸ್‌ ಮತ್ತು ಅಭಿಮಾನಿಗಳ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬವರ್ಗ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ವನಾಶ ಮಾಡುವುದೇ ಗುರಿಯನ್ನಾಗಿಸಿಕೊಂಡಿದ್ದಾರೆ.ಅವರಿಗೆ ಪಕ್ಷಕ್ಕಿಂತ ತಮ್ಮ ಕುಟುಂಬದವರು ಗಂಟು ಮಾಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ಜಿಂದಾಲ್‌ ನಿಂದ ಚೆಕ್‌ ಮೂಲಕ ಹಣ ಹೊಡೆದವರು ಈಗ ಅರ್‌ .ಟಿ.ಜಿ. ಮೂಲಕ ಹಣ ಮಾಡಲು ಹೊರಟಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ ಸುಮಾರು 13 ಸಾವಿರ ಎಕರೆ ಭೂಮಿಯಿದ್ದು ಅದನ್ನು ಭೂ ಕಾಯ್ದೆ ತಿದ್ದುಪಡಿಯ ಮೂಲಕ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಿ ಕೋಟ್ಯಂತರ ಹಣವನ್ನು ಲಪಾಟಾಯಿಸಿ ಚುನಾವಣೆಗೆ ಖರ್ಚು ಮಾಡಲು ಹೊರಟಿದ್ದಾರೆಂದು ಅರೋಪಿಸಿದರು.

ಕೋವಿಡ್‌-19 ಮಾರಕರೋಗದ ಬಗ್ಗೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಬಳಸುವುದು ಹಾಗೂ ಹೊರಬರಬಾರದು ಎಂಬ ನಿಯಮದಡಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂಡಾ| ಸುಧಾಕರ್‌ಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಎಂದು ಪ್ರಶ್ನಿಸಿದ ಅವರು, ಖಾಸಗಿಅಸ್ಪತ್ರೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಮಿಷನ್‌ ದಂಧೆಯಲ್ಲಿ ತೊಡಗಿದ್ದಾರೆಂದು ದೂರಿದರು.

ಕಳೆಮಟ್ಟದಿಂದ ಪಕ್ಷದ ಸಂಘಟನೆ: ರಾಜ್ಯ ಮತ್ತು ಜಿಲ್ಲೆಯಲ್ಲಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಚುರುಕಿನಿಂದ ಕೆಲಸ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೊಸ ಹೊಣೆಗಾರಿಕೆ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಿಸುವ ಜೊತೆಗೆ ರಾಜ್ಯ ಮತ್ತು ಕೇಂದ್ರದ ಜನವಿರೋಧಿ ನೀತಿಯನ್ನು ಮತದಾರರಿಗೆ ಮನಮುಟ್ಟಿಸುವ ಕೆಲಸವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.

Advertisement

ಕಾನೂನು ಸುವವ್ಯವಸ್ಥೆ ವಿಫಲ: ಈಗಾಗಲೇ ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲೆಗಳು ನಡೆದಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು..

ಶಾಸಕ ಹರತಾಳು ಹಾಲಪ್ಪ, ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪನವರಂತೆ ಸಾಗರದ ಗಣಪತಿ ಕರೆಯ ಕಳೆಭಾಗದಲ್ಲಿನ ಜಾಗ ಖರೀದಿಸಿದ್ದು ಆ ಕೆರೆಯೊಂದನ್ನು ದುರಸ್ತಿಗೊಳಿಸುವುದರಲ್ಲಿಯೇ ಕಾಲ ಕಳೆಯುತ್ತಾ ಎರಡೂವರೆ ವರ್ಷ ಕಳೆದಿದ್ದಾರೆ.

ಹಾಗಾದರೆ ಇವರಿಗೆ ಕ್ಷೇತ್ರದ ಬೇರೆ ಕೆರೆಗಳ ಅಭಿವೃದ್ಧಿ ಬಗ್ಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು. ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ. ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next