Advertisement

ಕೆಲಸ ಮಾತ್ರವಲ್ಲ ಆರೋಗ್ಯದತ್ತಲೂ ಇರಲಿ ಗಮನ 

07:48 AM Feb 18, 2019 | |

ಬೆಳಗಾಯಿತೆಂದರೆ ಮನೆ ಕೆಲಸದ ತರಾತುರಿ, ಆಫೀಸ್‌ಗೆ ಬಂದರೆ ಒಂದಷ್ಟು ಅಸಾೖನ್‌ ಮೆಂಟ್‌, ಪ್ರಾಜೆಕ್ಟ್ ವರ್ಕ್‌ಗಳ ಗಡಿಬಿಡಿ, ಸಂಜೆ ಮನೆಗೆ ಹೋದರೆ ಮತ್ತೆ ರಾತ್ರಿ ಮಲಗುವವರೆಗೂ ಬಿಡುವಿಲ್ಲದ ಕೆಲಸ… ಈ ನಡುವೆ ತಮ್ಮ ಆರೋಗ್ಯದ ಕಡೆ ಗಮನಕೊಡುವುದನ್ನೇ ಹೆಚ್ಚಿನ ಮಹಿಳೆಯರು ಮರೆತು ಬಿಡುತ್ತಾರೆ. ಹೀಗಾಗಿ ಆಗಾಗ ಕಾಯಿಲೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಬಿಡುತ್ತದೆ.

Advertisement

ಕೆಲಸ ಮಾಡಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಆದರೆ ಇಂದಿನ ಮಹಿಳೆಯರು ತಮ್ಮ ಒತ್ತಡಗಳಿಂದ ಆರೋಗ್ಯದ ಕುರಿತು ಉದಾಸೀನ ತಾಳುತ್ತಾರೆ. ಇದು ಭವಿಷ್ಯದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮಹಿಳೆ ಕೆಲಸದ ಒತ್ತಡ ಮತ್ತು ಮನೆ ನಿರ್ವಹಣೆಯಲ್ಲಿ ಸಮಾನತೆ ಕಾಯ್ದುಕೊಳ್ಳುವುದರಲ್ಲಿ ಹೆಣಗಾಡುತ್ತಿರುತ್ತಾಳೆ. ಅದಕ್ಕಾಗಿ ತನ್ನ ಮಾನಸಿಕ ಆರೋಗ್ಯ ಕಳೆದುಕೊಳ್ಳುವುದರ ಬದಲು ಜಾಣತನದಿಂದ ಎರಡನ್ನೂ ನಿಭಾಯಿಸುವ ಕೆಲಸ ಮಾಡಬೇಕು. ಮನೆಯ ಸಮಸ್ಯೆ ಕೆಲಸದ ಮೇಲೆ ಪ್ರಭಾವ ಬೀರದಂತೆ ಮತ್ತು ಕೆಲ ಸದ ಸಮಸ್ಯೆಗಳನ್ನು ಮನೆಗೆ ತರದೇ ಅಲ್ಲಲ್ಲಿಯ ಕೆಲಸಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ಎರಡನ್ನೂ ಸುಲಭವಾಗಿ ನಿಭಾಯಿಸಬಹುದು.

 ಹೀಗೆ ಮಾಡಿ
1 ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
2 ಎಣ್ಣೆ ಪದಾರ್ಥಗಳನ್ನು ತಿನ್ನುವ ಬದಲು ಹಣ್ಣು, ಡ್ರೈಫ್ರೂಟ್ಸ್‌ಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು.
3 ಕೆಲಸದ ನಡುವೆ ಊಟ, ತಿಂಡಿಯ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಉತ್ತಮ. ಊಟದ ಸಮಯ ಬದಲಾವಣೆಯಿಂದ ಗ್ಯಾಸ್ಟ್ರಿಕ್‌ ಸಂಬಂಧಿ ತೊಂದರೆ ಉಂಟಾಗುತ್ತದೆ. ಹಾಗಾಗಿ ಸರಿಯಾದ ಸಮಯದಲ್ಲಿ ಊಟ ಮಾಡುವುದು .
4 ಬೇಗ ನಿದ್ದೆ ಮಾಡಿ ಬೇಗ ಏಳುವುದು ಮತ್ತು ಬೆಳಗ್ಗಿನ ಸಮಯದಲ್ಲಿ ಸರಳ ವ್ಯಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದು. 
5 ಕ್ರಮ ಬದ್ಧ ಆಹಾರ ಪದ್ಧತಿ ರೂಪಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. 

ಕುಟುಂಬದವರೊಂದಿಗೆ ಪ್ರವಾಸ
ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು, ಕೆಲಸದ ಒತ್ತಡವನ್ನು ಕಡಿಮೆಗೊಳಿಸಲು ವರ್ಷಕ್ಕೊಮ್ಮೆಯಾದರೂ ಕುಟುಂಬದವರ ಜತೆಗೆ ಪ್ರವಾಸ ಹೋಗುವುದು ಉತ್ತಮ. ಇದರಿಂದ ಮುಂದಿನ ಕೆಲಸಕ್ಕೆ ಉತ್ಸಾಹ ದೊರಕುತ್ತದೆ. ತಿಂಗಳಿಗೊಮ್ಮೆಯಾದರೂ ಮನೆಯವರೊಂದಿಗೆ ಹೊರಗಡೆ ಸುತ್ತಾಡುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಹೊಸ ಚೈತನ್ಯ ದೊರಕುತ್ತದೆ. ಅದಲ್ಲದೆ ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ದೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

Advertisement

 ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next