Advertisement

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

11:54 PM Apr 30, 2024 | Team Udayavani |

ಚಂಪಾ: ಮುಸ್ಲಿಮರಿಗೆ ಮಾತ್ರವೇ ಹೆಚ್ಚು ಮಕ್ಕಳಿರುವುದೇ? ನನಗೂ ಐವರು ಮಕ್ಕಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಛತ್ತಿಸ್‌‌ಗಢದ ಜಂಜಿರ್‌-ಚಂಪಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರಲಿದೆ. ಸೋಲಿನ ಭಯದಿಂದ ಮೋದಿ ಅವರು ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ದೂರಿದರು. ಪ್ರಧಾನಿ ಮೋದಿ ಕಾಂಗ್ರೆಸ್‌ನವರು ಆಸ್ತಿ ಕಸಿದುಕೊಂಡು ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತಾರೆ ಎಂದು ಪ್ರಧಾನಿ ಟೀಕೆಗೆ ಈ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ 55 ವರ್ಷಗಳ ಕಾಲ ದೇಶ ವನ್ನು ಆಳಿದೆ. ನಾವು ಎಂದಾದರು ಮಂಗಳಸೂತ್ರ ಕಸಿದುಕೊಂಡಿದ್ದೇವೆಯೇ? ಹೆಚ್ಚುವರಿ ತೆರಿಗೆ ವಿಧಿಸಿದ್ದೇವೆಯೇ? ಇ.ಡಿ., ಸಿಬಿಐ ಬಳಸಿಕೊಂಡು ಜನರನ್ನು ಜೈಲಿಗೆ ಅಟ್ಟಿದ್ದೇವೆಯೇ?’ ಎಂದು ಪ್ರಶ್ನಿಸಿದರು.  “ಬಿಜೆಪಿಯು ಬಡವರ ಬಗ್ಗೆ ಮಾತನಾಡುತ್ತದೆ. ಆದರೆ ಅವರ ಆಡಳಿತದಲ್ಲಿ ಕೇವಲ ಅಂಬಾನಿ ಮತ್ತು ಅದಾನಿ ಅವರ ಆದಾಯ ಏರಿಕೆಯಾಗಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next