Advertisement

26ಕ್ಕೆ ಬ್ರಿಗೇಡ್‌ ಸಮಾವೇಶ ಅಲ್ಲ, ರಾಯಣ್ಣ ಬಲಿದಾನ ದಿನ

03:45 AM Jan 14, 2017 | Team Udayavani |

ಬಾಗಲಕೋಟೆ: ಜ. 26ಕ್ಕೆ ಕೂಡಲಸಂಗಮದಲ್ಲಿ ರಾಯಣ್ಣ ಬ್ರಿಗೇಡ್‌ ರಾಜ್ಯ ಸಮಾವೇಶ ನಡೆಯತ್ತಿಲ್ಲ. ಅಂದು ಸಂಗೊಳ್ಳಿ ರಾಯಣ್ಣ ಬಲಿದಾನ ದಿನಾಚರಣೆ ನಡೆಸುತ್ತೇವೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

Advertisement

ಕೂಡಲಸಂಗಮದಲ್ಲಿ  ನಡೆಯುವ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ ನಂತರ “ಉದಯವಾಣಿ’ ಜೊತೆಗೆ ಅವರು ಮಾತನಾಡಿದರು. ಬ್ರಿಗೇಡ್‌ ರಾಜ್ಯ ಘಟಕದಿಂದ 26ರಂದು ಕೂಡಲ ಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬಲಿದಾನ ದಿನಾಚರಣೆ ನಡೆಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಆಚರಣೆ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ನನ್ನ ನೇತೃತ್ವ ಇಲ್ಲ:
ರಾಯಣ್ಣ ಬಲಿದಾನ ದಿನಾಚರಣೆ ಕಾರ್ಯಕ್ರಮದ ನೇತೃತ್ವವನ್ನು ತಾವು ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು, ಪಂಚಮಸಾಲಿ ಜಗದ್ಗುರು, ವಾಲ್ಮೀಕಿ ಪೀಠದ ಜಗದ್ಗುರು, ಭೋವಿ ಪೀಠ, ತಿಂಥಣಿಯ ಶ್ರೀಗಳು ಹಾಗೂ ನಾಡಿನ ಹಲವು ಸ್ವಾಮೀಜಿಗಳು ಆಗಮಿಸಲಿದ್ದಾರೆ. ಅಂದಿನ ಕಾರ್ಯಕ್ರಮದ ನೇತೃತ್ವವನ್ನು ಎಲ್ಲ ಶ್ರೀಗಳೇ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಯಾರಿಗೂ ಆಹ್ವಾನ ಇಲ್ಲ:
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಶ್ರೀಗಳನ್ನು ಹೊರತುಪಡಿಸಿದರೆ ಬಿಜೆಪಿ ಸಹಿತ ಯಾವುದೇ ರಾಜಕೀಯ ಪಕ್ಷಗಳ ನಾಯಕರು, ಮುಖಂಡರಿಗೆ ಆಹ್ವಾನ ನೀಡಿಲ್ಲ. ನೀಡುವುದೂ ಇಲ್ಲ. ಜನರಿಗೆ ಮಾತ್ರ ಆಹ್ವಾನ ನೀಡುತ್ತೇವೆ. ರಾಯಣ್ಣ ಬ್ರಿಗೇಡ್‌ನಿಂದ ಜಿಲ್ಲಾ ಮತ್ತು ತಾಲೂಕು ಸಮಾವೇಶ ನಡೆಸಲಾಗಿದೆ ಎಂದು ತಿಳಿಸಿದರು.

50ಕ್ಕೂ ಹೆಚ್ಚು ಸ್ವಾಮೀಜಿಗಳು:
ಈ ವೇಳೆ ರಾಯಣ್ಣ ಬ್ರಿಗೇಡ್‌ನ‌ ಸಂಚಾಲಕ ಕಾಶಿನಾಥ ಹುಡೇದ್‌ ಮಾತನಾಡಿ, ಕಾರ್ಯಕ್ರಮಕ್ಕೆ 50ಕ್ಕೂ ಹೆಚ್ಚು ಸ್ವಾಮೀಜಿಗಳು, 300ಕ್ಕೂ ಹೆಚ್ಚು ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. 3ಲಕ್ಷ ಜನರಿಗೆ ಆಗುವಷ್ಟು ಪೆಂಡಾಲ್‌ ನಿರ್ಮಿಸಿದ್ದು, 200ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಸಮಿತಿಗಳನ್ನೂ ಮಾಡಲಾಗಿದೆ ಎಂದು  ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next