Advertisement
ಜೀರಿಗೆ ಸೇವನೆಯ ಆರೋಗ್ಯಕರ ಪ್ರಯೋಜನಗಳು:ಜೀರಿಗೆಯಲ್ಲಿ ಹಲವಾರು ಪ್ರಬಲ ರೋಗ ನಿರೋಧಕ ಇದ್ದು ದೇಹದಿಂದ ಕಲ್ಮಶಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ಮಹತ್ವದ ಸ್ಥಾನವನ್ನು ಹೊಂದಿದೆ. ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿರುವ ಜೀರಿಗೆ ಇಮ್ಮ್ಯುನಿಟ್(ಉಷ್ಣಾಂಶ) ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಜೀರ್ಣದಿಂದಾಗುವ ಹೊಟ್ಟೆ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ.
* ದೇಹದ ತೂಕವನ್ನು ಇಳಿಸುತ್ತದೆ
ದೇಹದ ತೂಕ ಹೆಚ್ಚಾಗಿದ್ದಲ್ಲಿ ಪ್ರತಿದಿನ ಜೀರಿಗೆ ನೀರಿನ ಸೇವನೆ ಮಾಡಬೇಕು. ಜೀರಿಗೆ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸಿ. ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ. * ಗರ್ಭಿಣಿಯರಿಗೆ ಒಳ್ಳೆಯದು
ಜೀರಿಗೆ ನೀರಿನಲ್ಲಿರುವ ಗುಣಗಳು ಗರ್ಭಿಣಿಯರಲ್ಲಿನ ಮಲಬದ್ಧತೆ ಸಮಸ್ಯೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಾಕರಿಕೆ ಮತ್ತು ಮಲಬದ್ಧತೆ ಮುಂತಾದ ಗರ್ಭಾವಸ್ಥೆಯ ಲಕ್ಷಣಗಳನ್ನು ಪರಿಹರಿಸಲು ಜೀರಿಗೆ ಬೀಜಗಳು ಸಹಾಯ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ಇದರ ಸೇವನೆ ಮಾಡುವುದರಿಂದ ಗರ್ಭಿಣಿ ಮತ್ತು ಮಗು ಉತ್ತಮ ಆರೋಗ್ಯವನ್ನು ಪಡೆಯಬಹುದು.
Related Articles
ಜೀರಿಗೆಯ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಇಂಫ್ಲಾಮೇಟರಿ ಗುಣಲಕ್ಷಣಗಳ ಕಾರಣ, ಜೀರಿಗೆ ಬೀಜಗಳು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದಾಗಿದೆ. ಇದು ಕೆಮ್ಮು, ಜ್ವರ, ಶೀತವನ್ನು ಬೇಗನೇ ಕಡಿಮೆ ಮಾಡುತ್ತದೆ.
Advertisement
*ರೋಗನಿರೋಧಕ ಶಕ್ತಿ ಹೆಚ್ಚಳ:ಜೀರಿಗೆಯಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಇದು ರೋಗ ನಿರೋಧಕವಾಗಿ ಕೆಲಸ ಮಾಡುವುದು. ನಿಯಮಿತವಾಗಿ ಜೀರಿಗೆ ನೀರಿನ ಸೇವನೆಯಿಂದ ಹಲವಾರು ರೀತಿಯ ಕಾಯಿಲೆಗಳು ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. *ರಕ್ತಹೀನತೆ ನಿವಾರಣೆ:
ಜೀರಿಗೆಯಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತಹೀನತೆಯ ನಿವಾರಣೆ ಮಾಡುವುದು. ಕಬ್ಬಿಣಾಂಶವು ದೇಹದಲ್ಲಿ ಹಲವಾರು ರೀತಿಯ ಕೆಲಸಗಳನ್ನು ನಿರ್ವಹಿಸುವುದು. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವುದು. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಿದ್ದರೆ ನಿವಾರಣೆ ಮಾಡಿ ರಕ್ತಹೀನತೆ ಸಮಸ್ಯೆ ಬಗೆಹರಿಸಬಹುದು. *ನೆನಪಿನ ಶಕ್ತಿ ಹೆಚ್ಚಳ:
ಜೀರಿಗೆ ನೀರು ಮೆದುಳಿನ ಆರೋಗ್ಯ ವೃದ್ಧಿಸಿ ನೆನಪಿನ ಶಕ್ತಿ ಹೆಚ್ಚಿಸುವುದು. ಬಾಲ್ಯದಿಂದಲೇ ಮಕ್ಕಳಿಗೆ ಜೀರಿಗೆ ನೀರು ಕುಡಿಸುತ್ತಾ ಬಂದರೆ ಅವರ ಜ್ಞಾಪಕ ಶಕ್ತಿಯು ಹೆಚ್ಚುವುದನ್ನು ಕಾಣಬಹುದು.