ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನ – ಕ್ರೂಸ್ ಹಡಗಿನಲ್ಲಿ ನಿಗದಿಯಾಗಿದ್ದ ರೇವ್ ಪಾರ್ಟಿಯಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು. NCB ತಂಡವು ಗೋವಾಕ್ಕೆ ಹೋಗುವ ಕ್ರೂಸ್ ಮೇಲೆ ಅಕ್ಟೋಬರ್ 2 ರಂದು ಸಂಜೆ ದಾಳಿ ನಡೆಸಿತ್ತು, ಜೊತೆಗೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಸೇರಿದಂತೆ ಹಲವಾರು ಜನರನ್ನು ಬಂಧಿಸಲಾಯಿತು. ಮುಂಬೈನ ಸೆಷನ್ಸ್ ಕೋರ್ಟ್ ಇಂದು ಆರ್ಯನ್ ಖಾನ್ ಜಾಮೀನು ಅರ್ಜಿಯ ಆದೇಶವನ್ನು ಪ್ರಕಟಿಸಿದೆ ಮತ್ತು ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ತನಿಕೆಗಾಗಿ ನ್ಯಾಯಾಂಗ ಬಂಧನ ಮುಂದುವರಿಸಲು ಆದೇಶಿಸಿದೆ.
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಈ ವರ್ಷ ಅಕ್ಟೋಬರ್ ನಲ್ಲಿ ನಡೆದ ಕ್ರೂಸ್ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. ಆದಾಗ್ಯೂ, ಈ ಪ್ರಕರಣಕ್ಕೂ ಮುಂಚೆ, ಹಲವಾರು ಸ್ಟಾರ್ ಗಳ ಮಕ್ಕಳು ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದರು.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸೆಲೆಬ್ರಿಟಿಗಳ ಮೇಲೆ ಕುಣಿಕೆಯನ್ನು ಬಿಗಿಗೊಳಿಸಿದ ನಂತರ ಬಾಲಿವುಡ್ ಮತ್ತು ಡ್ರಗ್ಸ್ ಪ್ರಕರಣ ಗಳು ಹೆಚ್ಚಾಗಿ ಗಮನ ಸೆಳೆಯುತ್ತಿವೆ . ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಈ ವರ್ಷ ಅಕ್ಟೋಬರ್ ನಲ್ಲಿ ನಡೆದ ಕ್ರೂಸ್ ರೇವ್ ಪಾರ್ಟಿಯಲ್ಲಿ ಬಂಧಿಸಲಾಗಿತ್ತು. ಈ ಹಿಂದೆ ಇದೇ ರೀತಿ ಹಡಗಿನಲ್ಲಿ ಮತ್ತು ಇತರ ಕಡೆಗಳಲ್ಲಿ ಹಲವಾರು ಸ್ಟಾರ್ ಗಳ ಮಕ್ಕಳು ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದ ಬಾಲಿವುಡ್‌ನ ಪ್ರಮುಖ ಹೆಸರುಗಳು ಹೀಗಿವೆ
ಪ್ರತೀಕ್ ಬಬ್ಬರ್
ರಾಜ್ ಬಬ್ಬರ್ ಮತ್ತು ದಿವಂಗತ ನಟಿ ಸ್ಮಿತಾ ಪಟೇಲ್ ಅವರ ಪುತ್ರ ಪ್ರತೀಕ್ ಮಾದಕ ವ್ಯಸನದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. “ಟೆಲ್ ಆಲ್ ಕಾಲಮ್ಗನ್ ಫಾರ್ ಮಿಡ್-ಡೇ” (Tell all column for midday) ಎಂಬ ಅಂಕಣದಲ್ಲಿ, ಅವರು ಹೀಗೆ ಬರೆದಿದ್ದಾರೆ “ಡ್ರಗ್‌ಗಳೊಂದಿಗೆ ನನ್ನ ಹೋರಾಟವು ಪ್ರೌ ಢ ಶಾಲೆಗಿಂತ ಮುಂಚೆಯೇ ಪ್ರಾರಂಭವಾಯಿತು. ನನ್ನ ಮೊದಲ ನಿಜವಾದ ಡ್ರಗ್ ನನ್ನ ಮನೋ ವಿಕಲತೆಗಳಾಗಿತ್ತು . ಆಂತರಿಕ ಸಂದಿಗ್ಧತೆಯನ್ನು ನಿರಂತರವಾಗಿ ಎದುರಿಸುತ್ತಿದ್ದೆ,ನನ್ನ ಮನದಲ್ಲಿನ ಧ್ವನಿಗಳು ನಾನು ಎಲ್ಲಿ ಸೇರಿದೆ ಮತ್ತು ನಾನು ಯಾರೆಂದು ಚರ್ಚಿಸುತ್ತಿರುವಂತೆ ಭಾಸವಾಗುತ್ತಿತ್ತು, ಮಾದಕ ದ್ರವ್ಯಗಳು ಈ ತೊಂದರೆಗಲಿಂದ ತಪ್ಪಿಸಿಕೊಳ್ಳುವ ಪರಿಹಾರದ ವೇಷದಲ್ಲಿ ಬಂದವು. ವರ್ಷಗಳು ಕಳೆದಂತೆ, ನಾನು ನಾರ್ಕೋಟಿಕ್ ಅಂಡರ್ ಬೆಲ್ಲಿಯೊಂದಿಗೆ ಪರಿಚಯವಾಯಿತು. ಆ ಮನಸ್ಥಿತಿ ನನ್ನ 13 ನೇ ವಯಸ್ಸಿನಲ್ಲಿ ಮೊದಲ ಡ್ರಗ್ಸ್ ಸೇವನೆಗೆ ಕಾರಣವಾಯಿತು.ʼ ಎಂದು ಬರೆದುಕೊಂಡಿದ್ದರು.
ಪ್ರತೀಕ್ ತಾನು ಮಾದಕ ವ್ಯಸನಕ್ಕೆ ಒಳಗಾಗಿ ಅನುಭವಿಸಿದ ಯಾತನೆ, ವ್ಯಸನ ಮುಕ್ತ ಶಿಬಿರಗಳು ಇವರಿಗೆ ಮಾಡಿದ ಸಹಾಯದ ಬಗ್ಗೆ ಹೇಳುತ್ತಾ ಈ ಕೂಪಕ್ಕೆ ಬೇರೆ ಯಾರು ಬೀಳದಂತೆ ಎಚ್ಚರಿಸಿದ್ದಾರೆ.
ಕೊಕೇನ್ ಜೊತೆ ಫರ್ದೀನ್ ಖಾನ್ ಬಂಧನ
ಬಾಲಿವುಡ್ ನ ಹಿರಿಯ ನಟ ಫಿರೋಜ್ ಖಾನ್ ಅವರ ಪುತ್ರ ಫರ್ದೀನ್ ಖಾನ್ ಅವರನ್ನು 2001 ರಲ್ಲಿ ಡ್ರಗ್ ಹಗರಣದಲ್ಲಿ ಎನ್ ಸಿಬಿ ಬಂಧಿಸಿತ್ತು. ಕೊಕೇನ್ ಹೊಂದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ನಂತರ, 2012 ರಲ್ಲಿ ಅವರು ವ್ಯಸನಮುಕ್ತ ಪ್ರಕ್ರಿಯೆಗೆ ಒಳಗಾದ ನಂತರ ಅವರಿಗೆ ವಿನಾಯಿತಿ ನೀಡಲಾಯಿತು.
ಡ್ರಗ್ಸ್ ಪ್ರಕರಣದ ತನಿಖೆಗಾಗಿ ಶ್ರದ್ಧಾ ಕಪೂರ್ ಅವರನ್ನು ಎನ್‌ಸಿಬಿ ಕರೆದಿತ್ತು
ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಮತ್ತು ಡ್ರಗ್ಸ್ ಪ್ರಕರಣದ ಹಗರಣದ ನಡುವೆ, ನಟಿ ಶ್ರದ್ಧಾ ಕಪೂರ್ ಅವರನ್ನು ಎನ್‌ಸಿಬಿ ವಿಚಾರಣೆಗೆ ಕರೆಸಿತ್ತು. ತನಿಖೆಯಲ್ಲಿ ಮರು ಪಡೆಯಲಾದ ವಾಟ್ಸಾಪ್ ಚಾಟ್‌ಗಳು ಸಿಬಿಡಿ ಮಾಧಕ ತೈಲಕ್ಕೆ ಸಂಬಂಧಿಸಿದ ಸಂಭಾಷಣೆಯ ಸುಳಿವು ನೀಡಿದ್ದವು.
ಸಾರಾ ಅಲಿ ಖಾನ್ ಅವರನ್ನು ಎನ್‌ಸಿಬಿ ತನಿಖೆ ಮಾಡಿತ್ತು
ಸೈಫ್ ಅಲಿ ಖಾನ್ ಮತ್ತು ಮಾಜಿ ನಟಿಯಾಗಿದ್ದ ಅವರ ಪತ್ನಿ ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್ ಅವರನ್ನು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ತನಿಖೆಗೊಳಪಡಿಸಿತ್ತು. ರಿಯಾ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಸಾರಾ ಮತ್ತು ಅವಳ ಧೂಮಪಾನದ ಬಗ್ಗೆ ಉಲ್ಲೇಖಿಸಿದ್ದಳು.
ಸಂಜಯ್ ದತ್ತ್ ಒಮ್ಮೆ ಡ್ರಗ್ಸ್ ಪ್ರಕರಣದಲ್ಲಿ ತೊಡಗಿದ್ದದ್ದು ಬೆಳಕಿಗೆ ಬಂದಿತ್ತು
ಡ್ರಗ್ಸ್ ಪ್ರಕರಣದಲ್ಲಿ ಹೆಸರಿಸಲಾದ ಅತಿದೊಡ್ಡ ಬಾಲಿವುಡ್ ಸ್ಟಾರ್ ಸಂಜಯ್ ದತ್. ಸಿಮಿ ಗರೆವಾಲ್ ಅವರ ಸಂದರ್ಶನವೊಂದರಲ್ಲಿ, ಅವರು ಕಾಲೇಜಿನಲ್ಲಿ ಡ್ರಗ್ಸ್ ಸೇವನೆ ಮಾಡಲು ಪ್ರಾರಂಭಿಸಿದ್ದರು ಎಂದು ಒಪ್ಪಿಕೊಂಡಿದ್ದರು.