Advertisement

ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವುದು ಕೋರ್ಟ್‌ ಕೆಲಸವಲ್ಲ

06:43 PM Aug 09, 2022 | Team Udayavani |

ನವದೆಹಲಿ: ಯಾವ ರಾಜ್ಯಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಿದೆಯೋ ಆ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಘೋಷಿಸಬೇಕು ಎಂಬ ಅರ್ಜಿಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್‌, “ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವುದು ಕೋರ್ಟ್‌ನ ಕೆಲಸವಲ್ಲ’ ಎಂದು ಹೇಳಿದೆ.

Advertisement

ಅಲ್ಪಸಂಖ್ಯಾತ ಸ್ಥಾನಮಾನದ ನಿರ್ಣಯವು ಹಲವಾರು ಪ್ರಾಯೋಗಿಕ ಅಂಶಗಳು ಮತ್ತು ಅಂಕಿಅಂಶಗಳನ್ನು ಅವಲಂಬಿಸಿದೆ.

ಹೀಗಾಗಿ, ಈ ಪ್ರಕ್ರಿಯೆಯು ನ್ಯಾಯಾಂಗದ ವ್ಯಾಪ್ತಿಯಿಂದ ಹೊರಗಿದೆ. ನಿಖರ ಹಾಗೂ ವಿಶ್ವಾಸಾರ್ಹ ದಾಖಲೆಗಳಿಲ್ಲದೇ ಯಾವುದೇ ರಾಜ್ಯದಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ನಾವೇ ನೇರವಾಗಿ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ನ್ಯಾಯಾಲಯದ ಕೆಲಸವೂ ಅಲ್ಲ ಎಂದು ನ್ಯಾ.ಯು.ಯು.ಲಲಿತ್‌ ಮತ್ತು ನ್ಯಾ.ಎಸ್‌.ರವೀಂದ್ರ ಭಟ್‌ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ದೇವಕಿನಂದನ್‌ ಠಾಕೂರ್‌ ಜಿ ಎಂಬ ವ್ಯಕ್ತಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next