Advertisement

ಜಾಧವ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿಲ್ಲ

12:30 AM Jan 27, 2019 | Team Udayavani |

ಕಲಬುರಗಿ: ಸಮ್ಮಿಶ್ರ ಸರ್ಕಾರದಲ್ಲಿ ಸಮಸ್ಯೆಗಳು ಸಾಮಾನ್ಯ ಆಗಿರುವುದಿಂದ ಕೆಲಸ-ಕಾರ್ಯಗಳಲ್ಲಿ ಸ್ವಲ್ವ ವಿಳಂಬ ಸಹಜ. ಚಿಂಚೋಳಿ ಕ್ಷೇತ್ರದ ಡಾ| ಉಮೇಶ ಜಾಧವ್‌ ಹೇಳಿದ್ದ ಕೆಲಸಗಳನ್ನು ಮಾಡಲಾಗಿದ್ದು, ಅವರನ್ನು ಪಕ್ಷದಿಂದ ಯಾರು
ಹೊರ ಹಾಕುತ್ತಾರೆ ಎಂದು ಸಮಾಜ ಕಲ್ಯಾಣ ಹಾಗೂ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಷ್ಟಾಚಾರದ ಪ್ರಕಾರ ನಾವು ಶಾಸಕರ ಅನುಮತಿ ಪಡೆದೆ ಕ್ಷೇತ್ರಗಳಿಗೆ ಹೋಗಬೇಕಾಗುತ್ತದೆ. ಸೇಡಂ, ಅಫಜಲಪುರಕ್ಕೆ ಕರೆದಿದ್ದರು, ಹೋಗಿದ್ವಿ. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಅವರು ಕೇಳಿದ್ದನ್ನು ನೀಡಲಾಗಿದೆ. ಯಾರ ಆಡಳಿತದಲ್ಲಿಯೂ ಹಸ್ತಕ್ಷೇಪ ಮಾಡದೆ ಎಲ್ಲ ಕೆಲಸಗಳನ್ನು ಮಾಡಲಾಗಿದೆ. ನಾನು ಉಸ್ತುವಾರಿ ಸಚಿವ. ನನ್ನ ಕೆಲಸ ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯೆ ಸಂಪರ್ಕ ಕಲ್ಪಿಸುವುದು ಮಾತ್ರ. ನಾನು ಯಾರ ಬಗ್ಗೆಯೂ ನಿರ್ಲಕ್ಷé ವಹಿಸಿಲ್ಲ. ಜಾಧವ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು.

ಉಮೇಶ ಜಾಧವ್‌ ಸಾಮಾನ್ಯ ಕಾರ್ಯಕರ್ತರಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಹಿಂದೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದರು. ಈಗ ಉಗ್ರಾಣ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅವರ ಕಾರ್ಯಶೈಲಿ ಗುರುತಿಸಿಯೇ ಅವರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಅವರೊಂದಿಗೆ ಮಾತನಾಡಲೆಂದೇ ಜ.24ರ ಅವರ ತಂದೆಯ ಪುಣ್ಯತಿಥಿ ದಿನದಂದು ಸಂಪರ್ಕ ಮಾಡಲಾಗಿತ್ತು. ಅವರ ಅಣ್ಣ ರಾಮಚಂದ್ರ ಜಾಧವ್‌ ಮಾತನಾಡಿದರು. ಆದರೆ,ಮತ್ತೆ ಎರಡು ಸಲ ಸಂಪರ್ಕಕ್ಕೆ ಸಿಗಲಿಲ್ಲ. ಆದ್ದರಿಂದ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಕೆಪಿಸಿಸಿ ಅಧ್ಯಕ ದಿನೇಶ ಗುಂಡೂರಾವ್‌, ಕಾಯಾಧ್ಯಕ್ಷ ಈಶ್ವರ ಖಂಡ್ರೆ,ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಉಮೇಶ ಜಾಧವ್‌ ಅವರೊಂದಿಗೆ ಚರ್ಚಿಸುತ್ತಾರೆ. ಡಾ| ಉಮೇಶ ಜಾಧವ್‌ ಇಂತಹದ್ದೊಂದು ಸಮಸ್ಯೆ ಇದೆ ಎಂದರೆ ಕುಳಿತು ಮಾತನಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next