Advertisement

ಸೇವೆಯಲ್ಲಿ ಮುಂದುವರಿವ ಇಚ್ಛೆ ಇಲ್ಲ: ರೋಹಟಗಿ

02:14 PM Jun 12, 2017 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್‌ ಆಗಿರುವ ಮುಕುಲ್‌ ರೋಹಟಗಿ ಅವರು, ತಮಗೆ ಈ ಹುದ್ದೆಯಲ್ಲಿ ಮುಂದುವರಿಯುವ ಇಚ್ಛೆ ಇಲ್ಲ ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. 2014ರಲ್ಲಿ ನೇಮಕವಾಗಿದ್ದ ರೋಹಟಗಿ ಅವರ ಅವಧಿ ಜೂ.6ರಂದು ಕೊನೆಗೊಂಡಿದೆ. ಜೂ.3ರಂದು ಅವರ ಅಧಿಕಾರಾವಧಿ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು. ‘ಆದರೆ ತಮಗೆ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿ ಇಲ್ಲ, ಖಾಸಗಿಯಾಗಿ ನ್ಯಾಯವಾದಿಯಾಗಿ ಮುಂದುವರಿಯುತ್ತೇನೆ’ ಎಂದವರು ಪತ್ರದಲ್ಲಿ ಹೇಳಿದ್ದಾರೆ. ಅವರ ಪತ್ರದ ಬೆಳವಣಿಗೆಗಳ ಬಗ್ಗೆ ತಮಗಾವುದೇ ಮಾಹಿತಿ ಇಲ್ಲ ಎಂದು ಕಾನೂನು ಸಚಿವಾಲಯದ ಮೂಲಗಳು ಹೇಳಿವೆ. 

Advertisement

‘ಅಟಲ್‌ ಸರಕಾರದ ಅವಧಿಯಲ್ಲಿ 5 ವರ್ಷ, ಮೋದಿ ಅವರ ಕಾರ್ಯಾವಧಿಯಲ್ಲಿ 3 ವರ್ಷ ಅಟಾರ್ನಿಯಾಗಿ ಕೆಲಸ ಮಾಡಿದ್ದೇನೆ. ಸರಕಾರದೊಂದಿಗೆ ಉತ್ತಮ ಸಂಬಂಧವಿದೆೆ. ಆದ್ದರಿಂದಲೇ ಅಧಿಕಾರಾವಧಿ ಮುಂದುವರಿಸದಂತೆ ಕಳೆದ ತಿಂಗಳೇ ಪತ್ರ ಬರೆದಿದ್ದೇನೆ’ ಎಂದಿದ್ದಾರೆ ರೋಹಟಗಿ.

Advertisement

Udayavani is now on Telegram. Click here to join our channel and stay updated with the latest news.

Next