Advertisement

“ಅಪರಾಧಿಗಳ ಅಡಗುತಾಣವಾಗುವ ಉದ್ದೇಶವಿಲ್ಲ”: ಬ್ರಿಟಿಷ್‌ ಭದ್ರತಾ ಸಚಿವರಾದ ಟಾಮ್‌ ತುಗಂಧೆತ್‌

09:26 PM Aug 13, 2023 | Pranav MS |

ಲಂಡನ್‌: ಭಾರತದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳಾದ ನೀರವ್‌ ಮೋದಿ ಹಾಗೂ ವಿಜಯ್‌ ಮಲ್ಯಾ ಅವರ ಹಸ್ತಾಂತರಕ್ಕೆ ಭಾರತ ಒತ್ತಾಯಿಸುತ್ತಿರುವ ನಡುವೆಯೇ. ಯಾವುದೇ ಅಪರಾಧಿಗಳಿಗೆ ಆಶ್ರಯತಾಣವಾಗುವ ಉದ್ದೇಶ ಬ್ರಿಟನ್‌ಗೆ ಇಲ್ಲವೆಂದು ಬ್ರಿಟಿಷ್‌ ಭದ್ರತಾ ಸಚಿವರಾದ ಟಾಮ್‌ ತುಗಂಧೆತ್‌ ಸ್ಪಷ್ಟ ಪಡಿಸಿದ್ದಾರೆ.

Advertisement

ಜಿ-20 ಭ್ರಷ್ಟಾಚಾರ ವಿರೋಧಿ ಸಚಿವರ ಸಭೆಯಲ್ಲಿ ಭಾಗಿಯಾಗಲೆಂದು ಟಾಮ್‌ ಭಾರತಕ್ಕೆ ಬಂದಿದ್ದರು. ಈ ವೇಳೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ರಕ್ಷಣಾ ಸಲಹೆಗಾರರಾದ ಅಜಿತ್‌ ದೋವಲ್‌ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ.

ಭಾರತದ ಆರ್ಥಿಕ ಅಪರಾಧಿಗಳನ್ನು ಹಸ್ತಾಂತರಿಸುವ ಕುರಿತು ಮಾತನಾಡುವಾಗ, ಯಾವುದೇ ಅಪರಾಧಿಗಳಿಗೆ ಆಶ್ರಯ ಒದಗಿಸುವ ಉದ್ದೇಶ ಬ್ರಿಟನ್‌ಗೆ ಇಲ್ಲ. ಆದರೆ, ಉಭಯ ರಾಷ್ಟ್ರಗಳು ತಮ್ಮದೇ ಆದ ಕಾನೂನುಗಳನ್ನು ಹೊಂದಿವೆ. ಆ ಕಾನೂನಿನ ಅನ್ವಯ ಹಸ್ತಾಂತರ ಪ್ರಕ್ರಿಯೆಗಳು ನಡೆಯಬೇಕಿದೆ. ನಾವು ಅವುಗಳಿಗೆ ಮಾನ್ಯತೆ ನೀಡಬೇಕಿದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next