Advertisement

ಹೆಡ್ ಲೈನ್ ಗಾಗಿ ಅಲ್ಲ, ಡೆಡ್ ಲೈನ್ ಗೆ ಕೆಲಸ ಮಾಡುವವ ನಾನು: ಪ್ರಧಾನಿ ಮೋದಿ

08:23 AM Mar 17, 2024 | |

ಹೊಸದಿಲ್ಲಿ: ನಾನು ಹೈಡ್ ಲೈನ್ ಗಳಿಗಾಗಿ ಅಲ್ಲ, ಡೆಡ್ ಲೈನ್ ಗೆ ಕೆಲಸ ಮಾಡುವ ವ್ಯಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡಿಯಾ ಟುಡೇ ಕಾಂಕ್ಲೇವ್ ನಲ್ಲಿ ಮೋದಿ ಭಾಷಣ ಮಾಡಿದರು.

Advertisement

ನಾನು ಕೇವಲ 2029ರವರೆಗೆ ದೃಷ್ಟಿಯಿಟ್ಟು ಕೆಲಸ ಮಾಡುತ್ತಿಲ್ಲ. ನಾನು 2047ಕ್ಕೆ ಗುರಿಯಿಟ್ಟು ಸಿದ್ದತೆ ಮಾಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.

“ಮೋದಿ ಏನೆಂದು ಕಂಡುಹಿಡಿಯಲು ನಿಮ್ಮ ಇಡೀ ತಂಡವನ್ನು ಇರಿಸಿ. ಅವರು ಅದನ್ನು ಲೆಕ್ಕಾಚಾರ ಮಾಡಲಿ. ನೀವು 2029 ರಲ್ಲಿ ಸಿಲುಕಿಕೊಂಡಿದ್ದೀರಿ, ನಾನು 2047 ಕ್ಕೆ ತಯಾರಿ ನಡೆಸುತ್ತಿದ್ದೇನೆ” ಎಂದು ಸಭಿಕರ ಹರ್ಷೋದ್ಗಾರಗಳ ನಡುವೆ ಪ್ರಧಾನಿ ಹೇಳಿದರು.

“ಇಂದು, ಇಡೀ ಜಗತ್ತು ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿರುವಾಗ, ಒಂದು ವಿಷಯ ನಿಶ್ಚಿತವಾಗಿದೆ. ಭಾರತವು ವೇಗವಾಗಿ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ!” ಎಂದು ಪ್ರಧಾನಿ ಹೇಳಿದರು.

ವಿಕಸಿತ ಭಾರತದ ಕಡೆಗೆ ಮೂಡ್ ಆಫ್ ದಿ ನೇಶನ್ ಇದೆ. ಭಾರತವು 2030 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ತಲೆ ಎತ್ತಲಿದೆ ಎಂದರು.

Advertisement

ಚುನಾವಣೆ ಘೋಷಣೆಯ ಬಗ್ಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಎಂದರು. ಇದು ಚುನಾವಣೆಯ ಸಮಯ. ಈ ಸಮಯದಲ್ಲಿ ವಿರೋಧ ಪಕ್ಷದ ಸ್ನೇಹಿತರು ಕಾಗದದ ಮೇಲೆ ಕನಸುಗಳನ್ನು ಹೆಣೆಯುತ್ತಿದ್ದಾರೆ. ಆದರೆ ಮೋದಿ ಕನಸುಗಳ ಆಚೆಗೆ ಹೋಗಿದ್ದಾರೆ. ಪರಿಹಾರಗಳತ್ತ ಹೋಗುತ್ತಿದ್ದಾರೆ. ನಾನು ಖಚಿತವಾಗಿ ಹೇಳಬಲ್ಲೆ, ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ತೃತೀಯ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಅನಿಶ್ಚಿತ ವಿಶ್ವಕ್ಕೆ ಸ್ಥಿರ, ಸಮರ್ಥ ಮತ್ತು ಬಲಿಷ್ಠ ಭಾರತವು ಭರವಸೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next