ಬೆಂಗಳೂರು: ‘ಬಿಜೆಪಿಯವರ ‘ಆಪರೇಷನ್ ಕಮಲ’ದ ಹಿನ್ನೆಲೆಯಲ್ಲಿ ನಾನು ಗೋವಾಕ್ಕೆ ಹೋಗುತ್ತಿಲ್ಲ. ನಾನು ಪಕ್ಷ ತೊರೆಯುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೃಷ್ಣಾ ನದಿ ನೀರು ಬರಬೇಕು ಎಂದು ನಾನು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದೇನೆ. ಸದ್ಯಕ್ಕೆ ನನ್ನ ಮುಂದೆ ಇರುವುದು ರಾಜ್ಯಕ್ಕೆ ಕೃಷ್ಣಾ ನದಿ ನೀರು ಹರಿಸುವುದು. ನನ್ನ ಬಗ್ಗೆ ಊಹಾಪೋಹದ ಸುದ್ದಿಗಳನ್ನು ಹರಡಬೇಡಿ. ನನ್ನ ಕ್ಷೇತ್ರದ ಜನರು ಫೋನ್ ಮಾಡಿ ಕೇಳುತ್ತಾರೆ. ನಾನು ಎಲ್ಲಿಯೂ ಹೋಗುವುದಿಲ್ಲ’ ಎಂದು ಹೇಳಿದರು.
Advertisement