Advertisement

ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ: ಬಿ.ಸಿ.ಪಾಟೀಲ್‌

04:33 PM Jan 13, 2021 | Team Udayavani |

ಹೊನ್ನಾಳಿ: ತಾವಾಗಲಿ, ತಮ್ಮ ಜತೆ ಬಿಜೆಪಿಗೆ ಸೇರ್ಪಡೆಯಾದ ಇತರ ಶಾಸಕರಾಗಲಿ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಹೋಗಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಪುನರುತ್ಛರಿಸಿದ್ದಾರೆ.

Advertisement

ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇರುವಷ್ಟು ದಿನ ಮಾತ್ರ ಬಿ.ಸಿ. ಪಾಟೀಲ್‌ ಮತ್ತು ಸಂಗಡಿಗರು ಬಿಜೆಪಿಯಲ್ಲಿರುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮತ್ತೆ ಅವರೆಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಾರೆ ಎಂಬ ಕೆಮತ್ತೆಕಾಂಗ್ರೆಸ್‌ಗೆ ಹೋಗಲ್ಲ: ಬಿ.ಸಿ.ಪಾಟೀಲ್‌
ಹೊನ್ನಾಳಿ: ತಾವಾಗಲಿ, ತಮ್ಮ ಜತೆ ಬಿಜೆಪಿಗೆ ಸೇರ್ಪಡೆಯಾದ ಇತರ ಶಾಸಕರಾಗಲಿ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಹೋಗಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಪುನರುತ್ಛರಿಸಿದ್ದಾರೆ.

ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇರುವಷ್ಟು ದಿನ ಮಾತ್ರ ಬಿ.ಸಿ. ಪಾಟೀಲ್‌ ಮತ್ತು ಸಂಗಡಿಗರು ಬಿಜೆಪಿಯಲ್ಲಿರುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮತ್ತೆ ಅವರೆಲ್ಲರೂ ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಾರೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್‌ನಿಂದ ಯಾರೂ ನಮ್ಮನ್ನು ಉಚ್ಚಾಟಿಸಿಲ್ಲ. ನಾವೇ ಪಕ್ಷ ಬಿಟ್ಟು ಬಂದಿದ್ದೇವೆ. ನಾವೇ ಡೈವೋರ್ಸ್‌ಗೆ ಅರ್ಜಿ ಹಾಕಿ ಡೈವೋರ್ಸ್‌ ಪಡೆದುಕೊಂಡು ಹೊರಬಂದಿದ್ದೇವೆ. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಮತದಾರರ ಆಶೀರ್ವಾದ ಪಡೆದು ಶಾಸಕ-ಸಚಿವರಾಗಿದ್ದೇವೆ. ಹಾಗಾಗಿ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವುದು ಕನಸಿನ ಮಾತು ಎಂದರು.
ಹಿಂದಿನ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ರೈತ ಪರ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂಬ ಆಶಯದಿಂದ ನಾವೆಲ್ಲರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ. ಅದರಂತೆ ಸಿಎಂ ಯಡಿಯೂರಪ್ಪ ಅವರು ರೈತ ಪರ ಸರ್ಕಾರವನ್ನು ನಡೆಸುತ್ತಿದ್ದಾರೆ. ರೈತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಇದರ ಭಾಗವಾಗಿಯೇ ನಾನು ನಾಡಿನಾದ್ಯಂತ ಸಂಚರಿಸಿ ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಕೆಲಸ-ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಅನ್ನದಾತರಲ್ಲಿ ಧೈರ್ಯ ತುಂಬುತ್ತಿದ್ದೇನೆ ಎಂದರು.

ಇದನ್ನೂ ಓದಿ:ಮೈದಾನ ಹಾಳು ಮಾಡಿ ಯಾವ ಸ್ಮಾರ್ಟ್‌ಸಿಟಿ ಕಟ್ಟುತ್ತೀರಿ? : ಪಾಲಿಕೆಗೆ ಹೈಕೋರ್ಟ್‌ ಪ್ರಶ್ನೆ

ಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್‌ನಿಂದ ಯಾರೂ ನಮ್ಮನ್ನು ಉಚ್ಚಾಟಿಸಿಲ್ಲ. ನಾವೇ ಪಕ್ಷ ಬಿಟ್ಟು ಬಂದಿದ್ದೇವೆ. ನಾವೇ ಡೈವೋರ್ಸ್‌ಗೆ ಅರ್ಜಿ ಹಾಕಿ ಡೈವೋರ್ಸ್‌ ಪಡೆದುಕೊಂಡು ಹೊರಬಂದಿದ್ದೇವೆ. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಮತದಾರರ ಆಶೀರ್ವಾದ ಪಡೆದು ಶಾಸಕ-ಸಚಿವರಾಗಿದ್ದೇವೆ. ಹಾಗಾಗಿ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವುದು ಕನಸಿನ ಮಾತು ಎಂದರು.

Advertisement

ಹಿಂದಿನ ಸರ್ಕಾರದ ಜನ ವಿರೋ ಧಿ ನೀತಿ ಖಂಡಿಸಿ ರೈತ ಪರ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂಬ ಆಶಯದಿಂದ ನಾವೆಲ್ಲರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ. ಅದರಂತೆ ಸಿಎಂ ಯಡಿಯೂರಪ್ಪ ಅವರು ರೈತ ಪರ ಸರ್ಕಾರವನ್ನು ನಡೆಸುತ್ತಿದ್ದಾರೆ. ರೈತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. ಇದರ ಭಾಗವಾಗಿಯೇ ನಾನು ನಾಡಿನಾದ್ಯಂತ ಸಂಚರಿಸಿ ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಕೆಲಸ-ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಅನ್ನದಾತರಲ್ಲಿ ಧೈರ್ಯ ತುಂಬುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next