Advertisement

ರಾಜಕೀಯ ಲಾಭಕ್ಕಾಗಿ ಯಾಗ ಮಾಡಿಸಿಲ್ಲ

12:04 PM Jan 16, 2018 | Team Udayavani |

ನಂಜನಗೂಡು: ಶೃಂಗೇರಿಯಲ್ಲಿ ಮಾಡಿಸಿದ್ದ ಯಾಗ ರಾಜಕೀಯ ಲಾಭಕ್ಕಲ್ಲ ಎಂದು ಸುತ್ತೂರಿನ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು ಸ್ಪಷ್ಟಪಡಿಸಿದರು. ಸೋಮವಾರ ತಡರಾತ್ರಿಯಲ್ಲಿ ಸುತ್ತೂರಿನ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಮಾತನಾಡಿದರು.

Advertisement

ತಾವು ಶೃಂಗೇರಿಯಲ್ಲಿ ಮಾಡಿಸಿದ್ದ ಯಾಗದ ಬಗ್ಗೆ ಹಲವು ಆಕ್ಷೇಪಗಳು ವ್ಯಕ್ತವಾಗಬಹುದು ಎಂದ ದೇವೇಗೌಡರು ಅತಿರಥ ಮಹಾಯಾಗ ಸಮಷ್ಠಿಯ ಒಳಿತಿಗಾಗಿ ಮಾಡಿಸುವಂತಹ ಯಾಗವಾಗಿದ್ದು, ರಾಜಕೀಯ ಲಾಭಕ್ಕಾದರೆ ಶತಚಂಡಿಯಾಗ ಮಾಡಿಸಬೇಕಾಗುತ್ತದೆ.

ಆದರೆ, ತಾವು ಅದನ್ನು ಮಾಡಿಸಿಲ್ಲ, ರಾಷ್ಟ್ರದ ಒಳಿತಿಗಾಗಿ ಅತಿ ರುದ್ರಯಾಗ ಮಾಡಿಸಿದ್ದು ನಿಜ ಎಂದರು. ಈ ಯಾಗದಿಂದಾಗಿ ಎಲ್ಲರಂತೆ ನಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಎಂಬ ಆಸೆಯೂ ಇತ್ತು ಎಂದು ನುಡಿದರು. ಶೃಂಗೇರಿಯಲ್ಲಿ ಯಾಗ ಮುಗಿದ ನಂತರ ನೇರವಾಗಿ ತಾವು ಸುತ್ತೂರಿಗೆ ಬಂದು ಮಾತನಾಡುತ್ತಿರುವುದಾಗಿ ತಿಳಿಸಿದರು.

ಅಧಿಕಾರ ಶಾಶ್ವತವಲ್ಲ ,ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಅಧಿಕಾರ ಅನುಭವಿಸಿದ್ದು, ಕೇವಲ 5 ವರ್ಷ ಎಂದರಲ್ಲದೇ, ಅಧಿಕಾರದಲ್ಲಿದ್ದಾಗ ದರ್ಪ ತೋರಿದರೆ ಜನತೆ ಪಾಠಕಲಿಸುತ್ತಾರೆ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.

ಸರ್ವೋಚ್ಚ ನ್ಯಾಯಾಲಯ ಬೀದಿಗೆ ಬರಬಾರದಿತ್ತು: ಸಮಾಜ ವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟಮೇಲೆಯೇ ಸರಿಪಡಿಸಲು ಸಾಧ್ಯ . ಸರ್ವೋಚ್ಚ ನ್ಯಾಯಾಲಯದ ವಿಷಯ ಬೀದಿಗೆ ಬರಬಾರದಿತ್ತು . ಈಗ ಬಂದಾಗಿದೆ ಇದನ್ನು ಸರಿಪಡಿಸುವ ವ್ಯವಸ್ಥೆಯಾಗಬೇಕು, ಕಾಲ ಹಾಗೂ ಆ ಭಗವಂತ ಸೂಕ್ತ ಸಮಯದಲ್ಲಿ ಸರಿಪಡಿಸುತ್ತಾನೆ ಎಂಬ ನಂಬಿಕೆ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Advertisement

ಶ್ರೀಮಠಕ್ಕೆ ಅರ್ಪಣೆಯಾದ ಕುಟುಂಬ ತಮ್ಮದು ಎಂದ ದೇವೇಗೌಡರು. 1965 ರಲ್ಲಿ ತಮ್ಮ ಹೊಳೆನರಸೀಪುರ ತಾಲೂಕಿನ ಬಡ ಕ್ಯಾತನಹಳ್ಳಿಗೆ ಆಗಮಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ತಮ್ಮನ್ನು ಆಶೀರ್ವದಿಸಿದ್ದರಿಂದಾಗಿ ಈ ಮಟ್ಟದ ಬೆಳವಣಿಗೆಯನ್ನು ಕಾಣುವಂತಾಯಿತು ಎಂಬುದನ್ನು ನೆನಪಿಸಿಕೊಂಡು ಅದರಿಂದಾಗಿಯೇ ನಾನೂ ಸೇರಿದಂತೆ ನಮ್ಮ ಕುಟುಂಬವೇ ಶ್ರೀಮಠಕ್ಕೆ ಶರಣಾಗಿದೆ ಎಂದರು.

ಮಠಕ್ಕೆ ಬರುವವರು ಮುಕ್ತ ಮನಸ್ಸಿನಿಂದ ಬರಬೇಕು, ಭಕ್ತಿ ಭಾವವಿಲ್ಲದೇ ಇಲ್ಲಿಗೆ ಬಂದು ಕಾಟಾಚಾರದ ಭಕ್ತಿ ತೋರುವುದು ಸರಿಯಲ್ಲ. ಸುತ್ತೂರಿನ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರರು ದಿವ್ಯ ಸಾನ್ನಿಧ್ಯ ವಹಿಸಿದ್ದ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಹೆಚ್‌.ವಿಶ್ವನಾಥ್‌, ಜೆ.ಟಿ.ದೇವೇಗೌಡ, ಸಂಸದ ಪುಟ್ಟರಾಜು ಮಾತನಾಡಿದರು. ಶಾಸಕ ಸಂದೇಶ್‌ ನಾಗರಾಜು ಮೈಸೂರು ವಿ.ವಿ.ಯ ಮಾಜಿ ಕುಲಪತಿ ಪೊ›. ರಂಗಪ್ಪ ಉಪಸ್ಥಿತರಿದ್ದರು.

ಸುತ್ತೂರಿನ ರಥ ಎಳೆಯುವ ಆಸೆ: ಸುತ್ತೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳವರ ರಥವನ್ನು ಎಳೆದು ಪುನೀತನಾಗುವ ಆಸೆ ತಮ್ಮದಾಗಿದೆ ಎಂದ 84 ವರ್ಷ ವಯಸ್ಸಿನ ಹೆಚ್‌.ಡಿ.ದೇವೇಗೌಡರು ಮುಂದಿನ ಜಾತ್ರೆಯ ರಥೋತ್ಸವದಲ್ಲಿ ಭಾಗಿಯಾಗಿ ರಥವನ್ನು ಎಳೆಯುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next