Advertisement

ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ “ಮಿಸೆಸ್‌ ಕೊರೊನಾ’ಗೆ ಸಮಸ್ಯೆ!

12:18 AM Sep 13, 2020 | mahesh |

ಕೊಟ್ಟಾಯಂ: ಕೇರಳದ ಕೊಟ್ಟಾಯಂನ ಮಹಿಳೆಯೊಬ್ಬರು ಈಗ ತಮ್ಮ ಹೆಸರು ಹೇಳಲು ಮುಜುಗರ ಪಡುವಂತಾಗಿದೆ. ಏಕೆಂದರೆ, ಇವರ ಹೆಸರೇ ಕೊರೊನಾ! ಹಾಗೆಂದು, ಈಗ ಬಂದಿರುವ ಕೊರೊನಾ­ವನ್ನು ನೋಡಿ ಅವರು ಹೆಸರು ಬದಲಿಸಿ­ಕೊಂಡಿಲ್ಲ. ಕೊರೊನಾಕ್ಕಿಂತಲೂ ಮುಂಚೆಯೇ ಅವರು ಕೊರೊನಾ ಆಗಿದ್ದವರು!

Advertisement

“ನನ್ನ ಹೆಸರಿನ ಸಾಂಕ್ರಾಮಿಕವೊಂದು ಹರಡುತ್ತದೆ ಎಂದು ಕನಸು ಮನಸಲ್ಲೂ ಭಾವಿಸಿರಲಿಲ್ಲ. ಬಾಲ್ಯದಲ್ಲಿ ನನ್ನ ಅಪ್ಪ-ಅಮ್ಮ ಬ್ಯಾಪ್ಟಿಸಂ ಮಾಡಿಸಲು ಸ್ಥಳೀಯ ಚರ್ಚ್‌ಗೆ ಕರೆದೊಯ್ದಾಗ ಅಲ್ಲಿನ ಫಾದರ್‌ ನನಗೆ “ಕೊರೊನಾ’ ಎಂದು ನಾಮಕರಣ ಮಾಡಿ­ದ್ದರು. ಕೊರೊನಾ ಅಂದರೆ “ಕಿರೀಟ’ ಅಂತ ಫಾದರ್‌ ಜೇಮ್ಸ್‌ ನನ್ನ ಪೋಷಕರಿಗೆ ಹೇಳಿ­ದ್ದರು’ ಎನ್ನುತ್ತಾರೆ ಮಿಸೆಸ್‌ ಎಸ್‌. ಕೊರೊನಾ.

34 ವರ್ಷದ ಕೊರೊನಾಗೆ ಇಬ್ಬರು ಪುತ್ರರಿದ್ದಾರೆ. ಕೊರೊನಾ ಸೋಂಕು ಬಂದ ಮೇಲೆ ನನ್ನ ಹೆಸರನ್ನು ಉಲ್ಲೇಖೀಸಿ ಅನೇಕರು ವ್ಯಂಗ್ಯವಾಡಿದ್ದೂ ಇದೆ. ಕೆಲವರು ನನ್ನನ್ನು ನೋಡಿ “ಗೋ ಕೊರೊನಾ ಗೋ’ ಎನ್ನುತ್ತಾರೆ. ನನ್ನ ಮಕ್ಕಳೇ ನನ್ನನ್ನು “ವೈರಸ್‌ ಅಮ್ಮಾ’, “ಕೊರೊನಮ್ಮಾ’ ಎಂದೆಲ್ಲ ಕರೆಯು­ತ್ತಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿ­ಕೊಂಡಿಲ್ಲ. ಜನರು ನನ್ನಂಥ ಬಡ ಕೊರೊ­ನಾ­ಳನ್ನು ಬಿಟ್ಟು, ನೈಜ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಂಡರೆ ಅಷ್ಟೇ ಸಾಕು ಎನ್ನುತ್ತಾರೆ ಶ್ರೀಮತಿ ಕೊರೊನಾ.

Advertisement

Udayavani is now on Telegram. Click here to join our channel and stay updated with the latest news.

Next