Advertisement

Lok Sabha Polls; ಮಂಡ್ಯದಿಂದ ಸ್ಪರ್ಧಿಸೋದಿಲ್ಲ: ನಿಖಿಲ್‌ ಕುಮಾರಸ್ವಾಮಿ

11:19 PM Mar 20, 2024 | Team Udayavani |

ರಾಮನಗರ: ಮಂಡ್ಯದಿಂದ ನಾನು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿ ಇಲ್ಲ. ಇನ್ನು 35 ದಿನ ಚುನಾವಣೆಗೆ ಸಮಯ ಇದೆ. ಮಂಡ್ಯ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳ ಹೆಸರು ಕುಮಾರಸ್ವಾಮಿ ಅವರ ಮನಸ್ಸಿನಲ್ಲಿದೆ. ನಾವು ರಾಷ್ಟ್ರ ನಾಯಕರ ಅಭಿಪ್ರಾಯದ ಜತೆಗೆ ಸ್ಥಳೀಯ ಕಾರ್ಯಕರ್ತರ ಮಾತಿಗೂ ಮನ್ನಣೆ ನೀಡಬೇಕಾಗುತ್ತದೆ. ಎಲ್ಲವನ್ನೂ ಕ್ರೋಢೀಕರಿಸಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

Advertisement

ಸುಮಲತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಮೈತ್ರಿ ಧರ್ಮಕ್ಕೆ ನಮ್ಮ ಪಕ್ಷ ಬದ್ಧವಾಗಿದ್ದು, ಎರಡೂ ಪಕ್ಷದ ಮುಖಂಡರನ್ನು ಒಗ್ಗೂಡಿಸಿಕೊಂಡು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

10 ಲಕ್ಷ ಕುಕ್ಕರ್‌ ಹಂಚಲು ಕೈ ಸಿದ್ಧತೆ: ನಿಖಿಲ್‌ ಆರೋಪ
ರಾಮನಗರ: ಕಾಂಗ್ರೆಸ್‌ ನವರು ಕಳೆದ 20 ದಿನಗಳಿಂದ ಮತದಾರರಿಗೆ ಗಿಫ್ಟ್ ಗಳನ್ನು ನೀಡುತ್ತಿದ್ದಾರೆ. ಹಾರೋಹಳ್ಳಿಯ ಸ್ಟೌವ್‌ ಕ್ರಾಪ್ಟ್ ಕಾರ್ಖಾನೆಯಲ್ಲಿ 10 ಲಕ್ಷ ಕುಕ್ಕರ್‌, ತವಾಗಳನ್ನು ಸಿದ್ಧಪಡಿಸಿದ್ದು, ಈ ಪೈಕಿ 5 ಲಕ್ಷ ಹಂಚಿಕೆಯಾಗಿವೆ. ಕ್ಷೇತ್ರದಲ್ಲಿ ಚುನಾವಣ ಅಕ್ರಮ ಯಾವ ರೀತಿ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ವಶಪಡಿಸಿಕೊಂಡಿರುವ ಸೀರೆಗಳು ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌ಗೆ ಸೇರಿದ್ದಾಗಿದೆ. ನಗರದ ಗೋದಾಮಿನಲ್ಲಿ 3,600 ಸೀರೆ ಮತ್ತು ಚೂಡಿದಾರ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ಸೂರತ್‌ನಿಂದ ಖರೀದಿಸಿದ್ದು. ಇದನ್ನು ಎ.ಎಂ. ಗ್ರಾನೈಟ್‌ ಕಂಪೆನಿ ಖರೀದಿ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಈ ಗ್ರಾನೈಟ್‌ ಕಂಪೆನಿಯ ಮಾಲಕರು ಇಕ್ಬಾಲ್‌ ಹುಸೇನ್‌ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next