ಮಂಗಳೂರು: ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರು 1924ರಲ್ಲಿ ಭಾಗವಹಿಸಿದ್ದು ಕಾಂಗ್ರೆಸ್‌ನ ಸ್ವಾತಂತ್ರÂ ಅಧಿವೇಶನವೇ ಹೊರತು ಕಾಂಗ್ರೆಸ್ ಪಕ್ಷದ ಅಧಿವೇಶನವಲ್ಲ. ಇಂದು ಕಾಂಗ್ರೆಸ್ ಅದನ್ನೇ ತನ್ನ ಪಕ್ಷದ ಅಧಿವೇಶನವಾಗಿ ಆಚರಿಸುತ್ತಿರುವುದು ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭ ಭಾç ಪಾಟೇಲ್, ಆ್ಯನಿಬೆಸೆಂಟ್, ಗಂಗಾಧರ ದೇಶಪಾಂಡೆ, ನಾರಾಯಣ ರಾವ್ ಸೇರಿದಂತೆ ಹಲವು ನಾಯಕರಿದ್ದರು. ಆದ್ದರಿಂದ ಈ ಕಾರ್ಯಕ್ರಮವನ್ನು ಸರ್ವಪಕ್ಷದವರೊಂದಿಗೆ ಸೇರಿ ನಡೆಸಬೇಕಿತ್ತು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸೇರಿಸಿಕೊಳ್ಳಬೇಕಿತ್ತು. ಜನರ ತೆರಿಗೆ ಹಣವನ್ನು ಬಳಸಿ ಪಕ್ಷದ ಕಾರ್ಯಕ್ರಮವನ್ನಾಗಿಸಿದ್ದು ಸರಿಯಲ್ಲ. ದೇಶ ಇರುವ ತನಕ ಗಾಂಧೀಜಿ ಹಾಗೂ ಡಾ| ಅಂಬೇಡ್ಕರ್ ವಿಚಾರಗಳಿರುತ್ತವೆ. ಒಂದೊಮ್ಮೆ ಪಕ್ಷದ ಸಮ್ಮೇಳನವಾಗಿ ಆಚರಿಸುವುದಾದರೆ ಮಹಾತ್ಮಾ ಗಾಂಧಿಯವರ ಸತ್ಯ, ಅಹಿಂಸೆಯ ತಣ್ತೀಗಳನ್ನು ಎಷ್ಟರ ಮಟ್ಟಿಗೆ ಪಾಲಿಸಿದೆ ಎಂಬ ಬಗ್ಗೆ ಚರ್ಚೆಯಾಗಲಿ ಎಂದರು.
ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಗೋಹತ್ಯೆ ರಾಜಾರೋಷವಾಗಿ ನಡೆಯುತ್ತಿದೆ. ಕಾಂಗ್ರೆಸ್ ಎಲ್ಲ ಜನರ ಧ್ವನಿಯಾಗಿಲ್ಲ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಇಂದಿನ ಗಾಂಧಿಗಳು ನಕಲಿ ಗಾಂಧಿಗಳಾಗಿದ್ದು, ಅವರ ವಿಚಾರಧಾರೆಗಳು ಕೂಡ ನಕಲಿ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ
ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕತ್ಲೂರು ಗುತ್ತಿಗೆದಾರರೊಬ್ಬರಲ್ಲಿ 1 ಕೋ.ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಸಚಿವ ಖರ್ಗೆ ರಾಜೀನಾಮೆ ನೀಡಬೇಕು ಎಂದ ಅವರು, ರಾಜ್ಯಪಾಲರನ್ನು ಭೇಟಿಯಾಗಿ ಸಿ.ಟಿ. ರವಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಆಗ್ರಹಿಸಿರುವುದಾಗಿ ತಿಳಿಸಿದರು.