Advertisement
* “ಮಫ್ತಿ’ ಒಪ್ಪಲು ಕಾರಣ?ಕಥೆಯ ಜಾನರ್ ನನಗೆ ಖೂಷಿ ಕೊಡು¤. ಕಥೆ ಕೇಳಿದಾಗ ಹೊಸ ಫೀಲ್ ಆಯ್ತು. ಅದರಲ್ಲಿ ಎನರ್ಜಿ ಇತ್ತು. ಹೊಸ ತಂಡವಿತ್ತು. ಈ ಎರಡು ಕಾರಣಕ್ಕೆ ಒಪ್ಪಿದೆ.
ಗೊತ್ತಿಲ್ಲ. ಆದರೆ, ಮತ್ತೂಂದು ಪುಟ್ಟ ಪ್ರಯತ್ನ ಮಾಡಿದ್ದೇನೆ. ಎಲ್ಲರೂ ಮತ್ತೂಮ್ಮೆ ಪ್ರೀತಿಯಿಂದ ಕೆಲಸ ಮಾಡಿದ್ದೇವೆ. ಅಂತಿಮವಾಗಿ ಪ್ರೇಕ್ಷಕರೇ ತೀರ್ಪು ಕೊಡಬೇಕಷ್ಟೆ. * ನಿಮ್ಮ ಪ್ರಕಾರ “ಮಫ್ತಿ’ ಹೇಗಿದೆ?
ಫೀಲ್ ಗುಡ್ ಮೂವಿ. ನನಗೆ ತೃಪ್ತಿ ಇದೆ. ನಮ್ಮ ಕೂಸು ಹೊಗಳಲೇಬೇಕು. ಆದರೆ, ಬೇರೆಯವರು ಹೇಳಿದಾಗಲಷ್ಟೇ “ಮಫ್ತಿ’ ಬಗ್ಗೆ ಗೊತ್ತಾಗೋದು.
Related Articles
ಮುಖ್ಯವಾಗಿ ಇಲ್ಲಿ ಎರಡು ವಿಚಾರಗಳಿವೆ. ಮನುಷ್ಯನಿಗಾಗಿ ಬದುಕಬೇಕಾ, ಕರ್ತವ್ಯಕ್ಕಾಗಿ ಬದುಕಬೇಕಾ ಅದೇ ಇಲ್ಲಿ ಹೈಲೈಟ್. ಇಷ್ಟು ಹೇಳಿದ ಮೇಲೆ ಕಥೆ ಸಾರಾಂಶ ಗೊತ್ತಾಗಿರುತ್ತೆ.
Advertisement
* ನಿಮ್ಮದು ರಗಡ್ ಪಾತ್ರನಾ?ಖಡಕ್ ಆಗಿರುತ್ತೋ, ಮುಗ್ಧವಾಗಿರುತ್ತೋ ಅನ್ನೋದನ್ನು ನೀವೇ ನೋಡಿ ಹೇಳಬೇಕು. ರಗಡ್ ಸ್ಟೈಲಿಷ್ ಪಾತ್ರ. ನೀಟ್ ಫರ್‌ಫಾರ್ಮೆನ್ಸ್, ಎಲ್ಲೂ ಎಕ್ಸೆ„ಟ್ ಇಲ್ಲ. ಎಲ್ಲರಿಗೂ ಇಷ್ಟ ಆಗೋ ಪಾತ್ರ. * ವಿಭಿನ್ನತೆಯ ಕಥೆ ಅನ್ನಿ?
ಯಾವುದೇ ಸಿನಿಮಾ ಕಥೆ ಹುಟ್ಟಿದರೂ, ಸಿಂಪಲ್ ಆಗಿರುತ್ತೆ. ಪಾತ್ರ ಮತ್ತು ಮೇಕಿಂಗ್ ವಿಭಿನ್ನವಾಗಿರಬೇಕಷ್ಟೇ. ನನ್ನ ಪ್ರಕಾರ ಡಿಫರೆಂಟ್ ಅನ್ನೋದು ಎಷ್ಟು ಸರಿಯೋ ಗೊತ್ತಿಲ್ಲ. ಎಲ್ಲರೂ ಪ್ರೀತಿಯಿಂದ ಮಾಡಿದಾಗ ಒಳ್ಳೇ ಸಿನಿಮಾ ಆಗುತ್ತೆ ಎಂಬುದಕ್ಕೆ “ಮಫ್ತಿ’ ಸಾಕ್ಷಿ. * ಹೊಸ ನಿರ್ದೇಶಕರ ಜತೆ ಕೆಲಸ ಹೇಗಿತ್ತು?
ತುಂಬಾ ಟೈಮ್ ತೆಗೆದುಕೊಳ್ಳುತ್ತಿದ್ದರು. ಕ್ಲಾರಿಟಿಯಿಂದಲೇ ಕೆಲಸ ಮಾಡುತ್ತಿದ್ದರು. ಸೆಟ್‌ಗೆ ಬರುವ ಮುನ್ನವೇ ಪ್ಲಾನಿಂಗ್ ಮಾಡಿಕೊಂಡು ಬರುತ್ತಿದ್ದರು. ಎಲ್ಲದ್ದಕ್ಕೂ ಪ್ರಾಮುಖ್ಯತೆ ಕೊಡುತ್ತಿದ್ದರು. ಎಲ್ಲವನ್ನೂ ತಿಳಿದಿದ್ದರಿಂದಲೇ ಸಿನಿಮಾ ಚೆನ್ನಾಗಿ ಮಾಡಿದ್ದಾರೆ. * ಶ್ರೀ ಮುರಳಿಗೇನು ಕೆಲಸ ಇಲ್ಲಿ?
ಅದೊಂದು ಒಳ್ಳೆಯ ಪಾತ್ರವಷ್ಟೇ. ಏನಾಗಿರುತ್ತಾನೆ, ಏನ್ಮಾಡ್ತಾನೆ ಅನ್ನೋದಕ್ಕೆ ಸಿನ್ಮಾ ನೋಡಿ. * ಶಿವಣ್ಣನ ಜತೆ ಕೆಲಸ ಹೇಗನ್ನಿಸಿತು?
ಶಿವಣ್ಣ ವಂಡರ್‌ಫುಲ್ ಪರ್ಸನ್, ಚಿತ್ರರಂಗದ ಲೆಜೆಂಡ್, ಗ್ರೇಟ್ ಆ್ಯಕ್ಟರ್, ಸೂಪರ್‌ಸ್ಟಾರ್ ಎಲ್ಲವೂ ಹೌದು. ಅವರ ಜತೆ ಕೆಲಸ ಮಾಡಿದ ಖುಷಿ ಮರೆಯಂಗಿಲ್ಲ. ಅವರ ವರ್ಕಿಂಗ್ ಸ್ಟೈಲ್ ನೋಡಿ ಬೆರಗಾದೆ. ಅವರ ಸ್ಪೀಡ್‌ಗೆ ನಾವಿಲ್ಲ. ಎಲ್ಲೂ ರಿಲ್ಯಾಕ್ಸ್ ಆಗದೆ, ಅದೇ ಎನರ್ಜಿಯಲ್ಲಿ ಕೆಲಸ ಮಾಡ್ತಾರೆ. ಒಂದೊಳ್ಳೆಯ ಅನುಭವ ಆಯ್ತು. ಸಾಕಷ್ಟು ಸಲಹೆಯೂ ಸಿಕು¤. * ಇಲ್ಲೇನಾದ್ರೂ ಹಾಡಿದ್ದೀರಾ?
ಅಂತಹ ಅವಕಾಶವೇ ಸಿಗಲಿಲ್ಲ. ಓನ್ಲಿ ಆ್ಯಕ್ಟಿಂಗ್, ಫೈಟಿಂಗ್ ಅಷ್ಟೇ… * ಅಭಿಮಾನಿಗಳಿಗೆ ಬೇಕಾದ್ದೆಲ್ಲ ಇದೆಯೋ?
ಅಂತಂದುಕೊಂಡು ಮಾಡಿದ್ದೇವೆ. ಬೇಸಿಕಲಿ ಸಿನಿಮಾ ಮಾಡಿರೋದು. ಒಳ್ಳೇ ಪ್ರಕ್ಷಕನಿಗೆ.ಅವರಿಗೆ ಬೇಕಾಗಿರೋದು ಕೊಟ್ಟ ಹಣಕ್ಕೆ ಸಿನಿಮಾ ತೃಪ್ತಿ ಕೊಡ್ತಾ ಅನ್ನೋದು. ಒಟ್ಟಾರೆ ಮನರಂಜನೆ ಬೇಕು. ಅದಕ್ಕೇನೂ ಇಲ್ಲಿ ಬರವಿಲ್ಲ. ಆದರೆ, ಹೇಗೆ ಸ್ವೀಕರಿಸುತ್ತಾರೆ ಎಂಬುದೇ ಪ್ರಶ್ನೆ. * ಇದರೊಳಗಿನ ಹೈಲೈಟ್ ಅನ್ನೋದಾದರೆ?
ರವಿ ಬಸ್ರೂರ್ ಮ್ಯೂಸಿಕ್. ಮತ್ತೂಂದು ಮ್ಯಾಜಿಕ್ ಮಾಡಿದ್ದಾರೆ. ಅವರು ಈ ಚಿತ್ರದ ಬಿಗ್ಗೆಸ್ಟ್ ಲೈಫ್ ಅಂದರೆ ತಪ್ಪಿಲ್ಲ. ನಾವು ಎಷ್ಟೇ ಕೆಲಸ ಮಾಡಿರಬಹುದು. ಅವರ ಪಾತ್ರವೇ ಇಲ್ಲಿ ಬೇರೆ ಇದೆ. ಡಿಓಪಿ ನವೀನ್ ಕೂಡ ಮಫ್ತಿಯನ್ನು ಅಂದಗಾಣಿಸಿದ್ದಾರೆ. ಉಳಿದಂತೆ ಕಥೆ ಮತ್ತು ಮೇಕಿಂಗ್ ಇಲ್ಲಿ ಹೈಲೈಟ್. * ವರ್ಷಕ್ಕೊಂದು ಸಿನ್ಮಾ ಲೇಟ್ ಆಗಲ್ವಾ?
ಕೆಲವೊಮ್ಮೆ ಒಳ್ಳೆಯದ್ದಕ್ಕಾಗಿ ಕಾಯಲೇಬೇಕು. ಒಂದು ಬೇಕಾದರೆ,ಇನ್ನೊಂದು ಬಿಡಬೇಕು. ನನಗೆ ಮತ್ತೂಂದು ಮುಖ್ಯವಾದ ಚಿತ್ರವಿದು. ಬೇರೆ ಕಥೆ ಬಂದರೂ, ಬಿಟ್ಟು ಇದಕ್ಕಾಗಿ ಕೆಲಸ ಮಾಡಿದ್ದೇನೆ. ಲೇಟ್ ಆಗಿದ್ದರೂ, ಇಷ್ಟ ಆಗದೇ ಇರದು. * “ಮಫ್ತಿ’ ನಂತರ?
ಪುನಃ ಜಯಣ್ಣ ಕಂಬೈನ್ಸ್‌ನಲ್ಲಿ ಮತ್ತೂಂದು ಸಿನ್ಮಾ ಮಾಡ್ತೀನಿ. ಅದು ಈ ವರ್ಷವೇ ಸೆಟ್ಟೇರಲಿದೆ. ಮತ್ತೂಂದು ಬಿಗ್ ಸರ್‌ಪ್ರೈಸ್ ಅದು. ನನಗೆ ಒಳ್ಳೇ ಕಥೆವುಳ್ಳ ಸಿನ್ಮಾ ಬೇಕಷ್ಟೇ. ಯಾರ ಜತೆ ಅನ್ನೋದು ಮುಖ್ಯ ಅಲ್ಲ. ಹಳಬರು, ಹೊಸಬರು ಎಂಬುದೂ ಮುಖ್ಯವಲ್ಲ. ಅವರ ತಯಾರಿ ಮುಖ್ಯ. ಫೇಮ್‌ಗಾಗಿ ಸಿನಿಮಾ ಮಾಡಲ್ಲ, ಅರ್ಥಪೂರ್ಣ ಸಿನಿಮಾ ಮೂಲಕ ಜನಮನದಲ್ಲಿ ಉಳಿಯೋ ಸಿನ್ಮಾ ಮಾಡಬೇಕು. * ಹೊಸ ಯೋಜನೆಗಳೇನೋ ಇವೆಯಂತಲ್ವಾ?
“ಮಫ್ತಿ’ ನಂತರ ಆ ಹೊಸ ಯೋಜನೆ ಬಗ್ಗೆ ಹೇಳ್ತೀನಿ. * “ಉಗ್ರಂ 2′ ಏನಾಯ್ತು?
ಅದು 2019 ರಲ್ಲಿ ಶುರುವಾಗಲಿದೆ. ಸದ್ಯಕ್ಕೆ ಪ್ರಶಾಂತ್ ಬಿಜಿ, ನಾನು ಜಯಣ್ಣರ ಜತೆ ಇನ್ನೊಂದು ಸಿನ್ಮಾ ಮಾಡಬೇಕು. ಆ ಬಳಿಕ “ಉಗ್ರಂ 2′