Advertisement

ಎಮ್ಮೆಗಳೊಂದಿಗೆ ಸೇರಲು ಬಿಡದಿದ್ದುದಕ್ಕೆ ಇರಿದ ಕೋಣ; ವ್ಯಕ್ತಿ ಮೃತ್ಯು

10:11 PM Jun 19, 2023 | Team Udayavani |

ಚನ್ನಗಿರಿ: ಕೋಣವೊಂದು ಎಮ್ಮೆಗಳ ಜತೆ ಸೇರಲು ಬಿಡುತ್ತಿಲ್ಲ ಎಂದು ವ್ಯಕ್ತಿಯೋಬ್ಬನನ್ನು ಅಟ್ಟಾಡಿಸಿಕೊಂಡು ಕೊಂಬಿನಿಂದ ಇರಿದು ಕೊಂದು ಹಾಕಿರುವ ಘಟನೆ ತಾಲೂಕಿನ ಎನ್. ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ನೀರಗಂಟಿ ಜಯಣ್ಣ (49) ಕೋಣನ ಆಕ್ರೋಶಕ್ಕೆ ಬಲಿಯಾದ ವ್ಯಕ್ತಿ. ತಾಲೂಕಿನ ಲಿಂಗದಹಳ್ಳಿ ಗ್ರಾಮದ ಉಡಸಲಾಂಬ ದೇವಿಗೆ ಕೋಣವನ್ನು ಹರಕೆಗಾಗಿ ಬೀಡಲಾಗಿತ್ತು ಈ ಕೋಣವು ಪಕ್ಕದ ಬಸವನಹಳ್ಳಿ ಗ್ರಾಮಕ್ಕೆ ಹೋಗಿ ಊರಿನಲ್ಲಿ ಸಾಕಷ್ಟು ದಾಂಧಲೆಯನ್ನು ನಡೆಸುತ್ತಿತ್ತು. ಹಾಗೆಯೇ ಎಮ್ಮೆಗಳನ್ನು ಕಂಡರೇ ಆಟಾಟೋಪ ತೋರುತ್ತಿತ್ತು. ಅದನ್ನು ತೆಡಯಲು ಗ್ರಾಮದ ನೀರಗಂಟಿ ಜಯಣ್ಣ ಕೋಣವನ್ನು ದೊಣ್ಣೆಯಿಂದ ಓಡಿಸುವಂತಹ ಕೆಲಸವನ್ನು ಮಾಡುತ್ತಿದ್ದರು, ಅದರೇ ಕೋಣ ತನ್ನ ದಾರಿಗೆ ಅಡ್ಡಿಯಾಗುತ್ತಿದ್ದಾನೆ ಎಂದು ಆಕ್ರೋಶದಿಂದ ಜಯಣ್ಣ ಸಿಕ್ಕಕಡೆಯಲ್ಲ ಹೋಗಿ ದಾಳಿಯನ್ನು ನಡೆಸುತ್ತಿತ್ತು. ಹಲವು ಬಾರಿ ಕೋಣದ ಹಲ್ಲೆಯಿಂದ ತಪ್ಪಿಸಿಕೊಂಡಿದ್ದರು. ಕೆಲವೊಮ್ಮೆ ಗಾಯಗಳಾಗಿರುವ ಉದಾಹರಣೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಹೊಂಚುಹಾಕಿ ದಾಳಿಗೆ ಯತ್ನ
ಜಯಣ್ಣ ಹೊರಗಡೆ ಬರುವುದನ್ನೇ ಕಾದು ಹೊಂಚು ಹಾಕುತ್ತಿದ್ದ ಕೋಣ ಹೊರಗೆ ಬಂದ ತತ್ ಕ್ಷಣವೇ ದಾಳಿ ಮಾಡಲು ಯತ್ನಿಸುತ್ತಿತ್ತು. ಆಗ ಜಯಣ್ಣ ಕೋಣವನ್ನು ಎದುರಿಸಲು ಸ್ಥಳೀಯರು ಜತೆಗೂಡಿ ಬೇದರಿಸಿ ಓಡಿಸುತ್ತಿದ್ದರು. ಅದರೇ ಕೋಣ ಜಯಣ್ಣ ಒಬ್ಬಂಟಿಯಾಗಿ ಸಿಕ್ಕ ವೇಳೆ ಅಟ್ಟಾಡಿಸಿಕೊಂಡು ಕೋಂಬಿನಿಂದ ಚುಚ್ಚಿ ಸಾಯಿಸಿದೆ.

ಕೋಣನ ಅಟ್ಟಹಾಸಕ್ಕೆ ಬೇಸತ್ತ ಜನತೆ ಈ ಹಿಂದೆ ಪೋಲಿಸ್ ಠಾಣೆಯ ಮೆಟ್ಟಿಲ್ಲೇರಿದ್ದರು. ಕೋಣವು ದಾಂಧಲೆ ನಡೆಸುತ್ತಿದೆ ರಕ್ಷಣೆ ಕೋರುವಂತೆ ಮನವಿ ಕೂಡ ಮಾಡಿದ್ದರು ಎನ್ನಲಾಗಿದೆ.

ದೇವರ ಕೋಣ ಪದೇ ಪದೇ ದಾಳಿ ನಡೆಸುತ್ತಿದ್ದ ಬಗ್ಗೆ ಲಿಂಗದಹಳ್ಳಿ, ಬಸವನಹಳ್ಳಿ ಗ್ರಾಮಸ್ಥರು ದೇವಸ್ಥಾನಕ್ಕೆ ಸೇರಿದಂತೆ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದರು ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ತತ್ ಕ್ಷಣ ಮೃತನ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next