Advertisement
ವರದಿಯ ಬಗ್ಗೆ X ನಲ್ಲಿ ಸ್ಪಷ್ಟೀಕರಣ ನೀಡಿದ ನಾಗರಿಕ ವಿಮಾನಯಾನ ಸಚಿವಾಲಯ, “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು ಭಾರತೀಯ ಶೆಡ್ಯೂಲ್ಡ್ ಏರ್‌ಕ್ರಾಫ್ಟ್ ಅಥವಾ ನಾನ್ ಶೆಡ್ಯೂಲ್ಡ್ (ಎನ್‌ಎಸ್‌ಒಪಿ)/ಚಾರ್ಟರ್ ವಿಮಾನವಲ್ಲ. ಇದು ಮೊರಾಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ ಎಂದು ಹೇಳಿಕೊಂಡಿದೆ.
Afghanistan
ಭಾರತದಿಂದ ಉಜ್ಬೇಕಿಸ್ತಾನ್ ಮೂಲಕ ಮಾಸ್ಕೋಗೆ ತೆರಳುತ್ತಿದ್ದ ಸಣ್ಣ ಚಾರ್ಟರ್ ಜೆಟ್ ಶನಿವಾರ ಸಂಜೆ ಅಫ್ಘಾನಿಸ್ತಾನದ ರಾಡಾರ್ ನಿಂದ ಕಣ್ಮರೆಯಾಗಿದ್ದು ಇದೀಗ ಅಫ್ಘಾನಿಸ್ತಾನದ ಪರ್ವತ ಪ್ರದೇಶದಲ್ಲಿ ಪತನಗೊಂಡಿರಬಹುದು ಎಂದು ಹೇಳಲಾಗಿದೆ. ವಿಮಾನದ ಹುಡುಕಾಟ ನಡೆಯುತ್ತಿದೆ ಎಂದು ರಷ್ಯಾದ ವಾಯುಯಾನ ಸಂಸ್ಥೆ ರೊಸಾವಿಯಾಟ್ಸಿಯಾ ಭಾನುವಾರ ತಿಳಿಸಿದೆ.Related Articles
Advertisement
ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಬಡಾಕ್ಷನ್‌ನ ದೂರದ ಪರ್ವತ ಪ್ರದೇಶದಲ್ಲಿ ರಾತ್ರಿ ವಿಮಾನ ಪತನಗೊಂಡಿದೆ ಎಂದು ಅಫ್ಘಾನ್ ಪ್ರಾಂತೀಯ ಪೊಲೀಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಪಘಾತದ ಕಾರಣ ಮತ್ತು ಸಾವುನೋವುಗಳ ಬಗ್ಗೆ ಯಾವುದೇ ದೃಢೀಕೃತ ವಿವರಗಳು ಲಭಿಸಿಲ್ಲ ಎಂದು ಅವರು ಹೇಳಿದರು.