Advertisement

ಧರ್ಮದ ಎಲ್ಲ ಅವಹೇಳನ ಅಪರಾಧವಲ್ಲ: ಸುಪ್ರೀಂ 

03:45 AM Apr 23, 2017 | Harsha Rao |

ನವದೆಹಲಿ: “ಧರ್ಮದ ಬಗ್ಗೆ ಮಾಡುವ ಎಲ್ಲ ಅವಮಾನಗಳೂ ಅಪರಾಧವಲ್ಲ. ಉದ್ದೇಶಪೂರ್ವಕವಲ್ಲದೆ ಮಾಡಿದ ಅವಮಾನವನ್ನು ಅಪರಾಧವೆಂದು ಪರಿಗಣಿಸಿದರೆ, ಅದು ಕಾನೂನಿನ ದುರ್ಬಳಕೆ ಆಗುತ್ತದೆ,’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ಯಕ್ಕಿರುವ ಸಾಂವಿಧಾನಿಕ ರಕ್ಷಣೆಯನ್ನು ನ್ಯಾಯಾಲಯ ಒತ್ತಿಹೇಳಿದೆ.

Advertisement

ಐಪಿಸಿ ಸೆಕ್ಷನ್‌ 295ಎ ಅನ್ವಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು. ಆದರೆ, ಈ ಸೆಕ್ಷನ್‌ನ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾ.ದೀಪಕ್‌ ಮಿಶ್ರಾ, ಎ.ಎಂ. ಖನ್ವಿಲ್ಕರ್‌ ಹಾಗೂ ಎಂ.ಎಂ. ಶಾಂತನಗೌಡರ್‌ ಅವರನ್ನೊಳಗೊಂಡ ಪೀಠ, “ಕೆಟ್ಟ ಉದ್ದೇಶವಿಲ್ಲದೇ ಆಡಿದ ಸಹಜ ಮಾತುಗಳನ್ನು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯೆಂದು ಪರಿಗಣಿ ಸುವುದು ಸರಿಯಲ್ಲ. ಅಂಥದ್ದು ಈ ಸೆಕ್ಷನ್‌ನ ವ್ಯಾಪ್ತಿಗೆ ಬರು ವುದಿಲ್ಲ’ ಎಂದಿದೆ. 2013ರಲ್ಲಿ ನಿಯತಕಾಲಿಕೆಯೊಂದರ ಮುಖಪುಟದಲ್ಲಿ “ವಿಷ್ಣು’ವಿನ ಅವತಾರದಲ್ಲಿ ಕಾಣಿಸಿಕೊಂಡು ವಿವಾದಕ್ಕೀಡಾಗಿದ್ದ ಕ್ರಿಕೆಟಿಗ ಎಂ.ಎಸ್‌.ಧೋನಿ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next