Advertisement

Ram Mandir;ನಮ್ಮದು ಅಹಂಕಾರ ಅಲ್ಲ:ಸಮಾರಂಭದಿಂದ ಹೊರಗುಳಿಯುವ ಕುರಿತು ಪುರಿ ಶಂಕರಾಚಾರ್ಯ ಶ್ರೀ

05:57 PM Jan 15, 2024 | Team Udayavani |

ಪುರಿ: ನಾಲ್ವರು ಶಂಕರಾಚಾರ್ಯರು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ಹೊರಗುಳಿಯಲಿದ್ದಾರೆ ಎಂಬ ವ್ಯಾಪಕ ಚರ್ಚೆಯ ವೇಳೆ ಪುರಿಯ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ್ ಅವರು ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಸಮಯದಲ್ಲಿ ”ನಮ್ಮ ನಿರ್ಧಾರವು ಸ್ಥಾಪಿತ ಸಂಪ್ರದಾಯಗಳಿಂದ ವಿಚಲನವನ್ನು(ಸಾಮಾಜಿಕ ಕ್ರಮ ಮತ್ತು ನಿಯಂತ್ರಣ) ಆಧರಿಸಿದೆ” ಎಂದು ಬಹಿರಂಗಪಡಿಸಿದ್ದಾರೆ.

Advertisement

ಎಎನ್‌ಐ ಜತೆ ಮಾತನಾಡಿದ ಸ್ವಾಮಿ ನಿಶ್ಚಲಾನಂದ ಮಹಾರಾಜ್, ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ನಾಲ್ವರು ಶಂಕರಾಚಾರ್ಯರು ಏಕೆ ಹಾಜರಾಗುತ್ತಿಲ್ಲ ಎಂದು ವಿವರಿಸಿ “ಶಂಕರಾಚಾರ್ಯರು ತಮ್ಮದೇ ಆದ ಘನತೆಯನ್ನು ಎತ್ತಿಹಿಡಿಯುತ್ತಾರೆ. ಇದು ಅಹಂಕಾರವಲ್ಲ. ಪ್ರಧಾನಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ನಾವು ಕೇವಲ ಹೊರಗೆ ಕುಳಿತು ಚಪ್ಪಾಳೆ ತಟ್ಟುವುದನ್ನು ನಿರೀಕ್ಷಿಸುತ್ತೇವೆಯೇ? ‘ಜಾತ್ಯತೀತ’ ಸರಕಾರದ ಉಪಸ್ಥಿತಿಯು ಸಂಪ್ರದಾಯದ ನಿರ್ಮೂಲನೆಯನ್ನು ಸೂಚಿಸುವುದಿಲ್ಲ” ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಏತನ್ಮಧ್ಯೆ, ನಾಲ್ವರು ಶಂಕರಾಚಾರ್ಯರು ಸಮಾರಂಭಕ್ಕೆ ಗೈರುಹಾಜರಾದ ಬಗ್ಗೆ ವಿರೋಧ ಪಕ್ಷದಲ್ಲಿ ಸಾಕಷ್ಟು ಟೀಕಾ ಪ್ರಹಾರ ನಡೆಸುತ್ತಿವೆ. ಅಪೂರ್ಣ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಆಕ್ಷೇಪಿಸಿದ ನಂತರ ಶಂಕರಾಚಾರ್ಯರು ಜನವರಿ 22 ರ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ವಿರೋಧಿಸಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next