Advertisement
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜೆಜೆಎಂ ಮೆಡಿಕಲ್ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗ, ಚಿಗಟೇರಿ ಜಿಲ್ಲಾಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಬಾಪೂಜಿಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತೀ¤ಚಿನ ಆಧುನಿಕತೆಯ ನಾಗಲೋಟದ ಜಗತ್ತಿನಲ್ಲಿ ಜನರು ಹಣ, ಸಂಪತ್ತಿನ ಗಳಿಕೆಯಿಂದ ಆರೋಗ್ಯಪೂರ್ಣ, ನೆಮ್ಮದಿಯ ಬದುಕು ನಡೆಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಹಣ ಗಳಿಸಿದವ ಕೇವಲ ಭೋಗ ಭಾಗ್ಯಗಳ ಪಡೆಯುವ ಶ್ರೀಮಂತನಾಗಬಲ್ಲ. ಆದರೆ ವಾಸ್ತವದಲ್ಲಿ ಯಾರು ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಆರೋಗ್ಯ ಹೊಂದಿರುತ್ತಾರೋ ಅವರೇ ನಿಜವಾದ ಶ್ರೀಮಂತರಾಗಿರುತ್ತಾರೆ ಎಂದರು.
Related Articles
Advertisement
ಶುಶ್ರೂಷಕರು ಅವರನ್ನು ತಮ್ಮ ಮನೆಯ ಸದಸ್ಯರೊಬ್ಬರಂತೆ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಸಲಹೆ ನೀಡಿದರು. ಬದಲಾಗುತ್ತಿರುವ ಪ್ರಪಂಚದಲ್ಲಿ ಯುವಜನತೆ ಮತ್ತು ಮಾನಸಿಕ ಆರೋಗ್ಯ ವಿಷಯದ ಕುರಿತು ಹಿರಿಯ ಪ್ರಾಧ್ಯಾಪಕ ಡಾ| ಕೆ. ನಾಗರಾಜರಾವ್ ಉಪನ್ಯಾಸ ನೀಡಿದರು. ಡಾ| ಸಿ.ವೈ. ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಎಸ್.ಬಿ. ಮುರುಗೇಶ್ ಅಧ್ಯಕ್ಷತೆವಹಿಸಿದ್ದರು. ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್.ಡಿ. ನೀಲಾಂಬಿಕೆ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. ಡಾ| ಅನುಪಮಾ ಸ್ವಾಗತಿಸಿದರು. ವಿನ್ಯಾಸ್ ನಿಸರ್ಗ ನಿರೂಪಿಸಿದರು. ಡಾ| ಹರೀಶ್ ಕುಲಕರ್ಣಿ ವಂದಿಸಿದರು.