Advertisement

ವಾ. ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆ ಫಲಿತಾಂಶ ಪ್ರಕಟ

09:58 AM Nov 20, 2020 | keerthan |

ಹುಬ್ಬಳ್ಳಿ: ತೀವ್ರ ಜಟಾಪಟಿಯಿಂದ ಕೂಡಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಕೆಎಸ್ಆರ್ ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಬಣ ಜಯಭೇರಿ ಭಾರಿಸಿದ್ದು, ಎಲ್ಲಾ 19 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪ್ರಸಕ್ತ ಆಡಳಿತ ಮಂಡಳಿಗೆ ತೀವ್ರ ಹಿನ್ನಡೆಯಾಗಿದೆ.

Advertisement

ಸಂಘದ 19 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆಎಸ್ಆರ್ ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಬಣ ಎಲ್ಲಾ 19 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕಳೆದ ಮೂರು ದಶಕಗಳಿಂದ ಸಂಘದ ಚುಕ್ಕಾಣಿ ಹಿಡಿದಿದ್ದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.

ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಕರಾಸಾ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇನ್ನೂ ವಾ.ಕ.ರ.ಸಾ ಮಜ್ದೂರು ಸಂಘದ ಬಣ ಈ ಬಾರಿಯೂ ಖಾತೆ ತೆರೆಯಲಿಲ್ಲ. ಈ ಬಾರಿ ನಾಲ್ಕು ಬಣ ಚುನಾವಣೆಗೆ ಸ್ಪರ್ಧಿಸಿದ್ದರಿಂದ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಇದನ್ನೂ ಓದಿ:ಕಾಲೇಜಿಗೆ ಬರುವ ಮುನ್ನವೇ ವಿದ್ಯಾರ್ಥಿಗಳಿಗೆ ಟೆಸ್ಟ್: 72 ವಿದ್ಯಾರ್ಥಿಗಳಿಗೆ ಸೋಂಕು ದೃಢ

ಗುರುವಾರ ಸಂಜೆ ಆರು ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಮಧ್ಯರಾತ್ರಿ ಮೂರು ಗಂಟೆಯವರೆಗೂ ನಡೆದಿದೆ. ಮತದಾನ ಹಾಗೂ ಎಣಿಕೆ ಕಾರ್ಯ ಶಾಂತಿಯುತವಾಗಿ ಹಾಗೂ ಕ್ರಮಬದ್ಧವಾಗಿ ನಡೆದಿದ್ದು, 19 ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

Advertisement

13 ಸ್ಥಾನ ಸಾಮಾನ್ಯ ವರ್ಗ: ಐ.ಆರ್.ನಾಯ್ಕರ್ (1156), ಎಚ್.ಎಸ್.ನಾಗನೂರ (1089), ಎನ್.ಬಿ.ಭರಮಗೌಡ್ರ (1072), ಎ.ಕೆ.ಜಾವೂರ(1052), ಎ.ವಿ.ಇಟಗಿ (1025), ಎಂ.ಎಸ್. ಕದಂ(1021), ಎಂ.ಎಂ.ಕಟಗೇರಿ(998), ವಿಶ್ವನಾಥ ಹಂಚಾಟೆ(991), ಪರಶುರಾಮ ಬೇಡರ (931), ವೈ.ಡಿ.ಕಾಲವಾಡ (919), ಬಿ.ಎಂ.ಕೆಂದೂರ(904), ಎಂ.ವಿ.ತೋರಗಲ್ಲ (902), ಝಡ್.ಐ.ಕರ್ಜಗಿ (983)

2 ಮಹಿಳಾ ಮೀಸಲು:  ಆರ್.ಎಸ್.ದುರಗಣ್ಣನವರ (1088), ಎಸ್.ಎಂ.ಪತ್ತಾರ (1055)

1 ಓಬಿಸಿ (ಎ): ಎಂ.ಕೆ.ಅಮರಗೋಳ (927)

1 ಒಬಿಸಿ (ಬ): ಎನ್.ವಿ.ಮುಧೋಳ (1088)

1 ಎಸ್ಸಿ ಮೀಸಲು : ಜಿ.ಸಿ.ಕಮಲದಿನ್ನಿ (1375)

1 ಎಸ್ಟಿ ಮೀಸಲು: ಮಂಜುನಾಥ ನಾಯ್ಕರ

Advertisement

Udayavani is now on Telegram. Click here to join our channel and stay updated with the latest news.

Next