Advertisement

Northern India: 20 ವರ್ಷಗಳಲ್ಲಿ ಅಂತರ್ಜಲ ಭಾರೀ ಮಟ್ಟದಲ್ಲಿ ಇಳಿಕೆ!

11:48 PM Jul 07, 2024 | Team Udayavani |

ನವದೆಹಲಿ: ಉತ್ತರ ಭಾರತದಲ್ಲಿ 2002-2021ರಲ್ಲಿ 450 ಕ್ಯೂಬಿಕ್‌ ಕಿ.ಮೀ. ವ್ಯಾಪ್ತಿಯಲ್ಲಿನ ಅಂತರ್ಜಲ ನಷ್ಟವಾಗಿದೆ. ಹವಾಮಾನದಲ್ಲಿ ಉಂಟಾದ ಬದಲಾ ವಣೆಯ ಪರಿಣಾಮ, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯಲಿದೆ ಎಂದು ಅಧ್ಯಯನವೊಂದು ಹೇಳಿದೆ.

Advertisement

ಗಾಂಧಿನಗರ ಐಐಟಿಯ ಭೂ ವಿಜ್ಞಾನ ಮತ್ತು ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ವಿಮಲ್‌ ಮಿಶ್ರಾ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶ ಕಂಡುಕೊಳ್ಳಲಾಗಿದೆ. ಉತ್ತರ ಭಾರತದಲ್ಲಿ 2 ದಶಕಗಳಲ್ಲಿ ನಷ್ಟವಾದ ನೀರಿನ ಪ್ರಮಾಣ ದೇಶದ ಅತಿದೊಡ್ಡ ಅಣೆಕಟ್ಟು ಮಧ್ಯಪ್ರ ದೇಶದ ಇಂದಿರಾ ಸಾಗರದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕಿಂತ 37 ಪಟ್ಟು ಅಧಿಕ ಎಂದು ಅವರು ಅಂದಾಜಿಸಿದ್ದಾರೆ.1951-2021ರಲ್ಲಿ ಜೂನ್‌-ಸೆಪ್ಟೆಂಬರ್‌ವರೆಗೆ ಶೇ.8.5 ಕಡಿಮೆ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next