Advertisement

ಅಕ್ಷಯ್‌ ಕುಮಾರ್‌-ಮೋಹನ್‌ ಲಾಲ್‌ ಡ್ಯಾನ್ಸ್‌ ವೈರಲ್‌

12:39 AM Feb 12, 2023 | Team Udayavani |

ಭಾರತೀಯ ಚಿತ್ರರಂಗದ ಸ್ಟಾರ್‌ ನಟರನ್ನು ಒಂದೆಡೆ ನೋಡುವುದೇ ಸಂಭ್ರಮ. ಅದರಲ್ಲೂ ಅವರೆಲ್ಲ ಒಟ್ಟಿಗೆ ಕುಣಿದು-ಕುಪ್ಪಳಿಸುವುದನ್ನೂ ಕಂಡರಂತೂ ಅಭಿಮಾನಿಗಳು ಫ‌ುಲ್‌ ಖುಷ್‌. ಈಗ ಜಾಲತಾಣದಲ್ಲಿ ಅಂಥದ್ದೇ ವೀಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿದೆ.

Advertisement

ಡಿಸ್ನಿ ಸಂಸ್ಥೆಯ ಮುಖ್ಯಸ್ಥ ಕೆ.ಮಾಧವನ್‌ ಅವರ ಪುತ್ರನ ವಿವಾಹದಲ್ಲಿ ಭಾರತೀಯ ಸ್ಟಾರ್‌ ನಟರ ಸಂಗಮ ಮೇಳೈಸಿದೆ. ಕಮಲ್‌ ಹಾಸನ್‌, ಮೋಹನ್‌ ಲಾಲ್‌, ಪ್ರಥ್ವಿರಾಜನ್‌ ಸುಕುಮಾರನ್‌, ಅಮೀರ್‌ ಖಾನ್‌, ಕರಣ್‌ ಜೋಹರ್‌, ಅಕ್ಷಯ್‌ ಕುಮಾರ್‌ ಸಹಿತ ಹಲವಾರು ಸೆಲೆಬ್ರಿಟಿಗಳು ಒಟ್ಟಿಗೆ ಸೇರಿರುವ ಫೋಟೋಗಳು ವೈರಲ್‌ ಆಗಿವೆ.


ಅದರಲ್ಲೂ ಮೋಹನ್‌ ಲಾಲ್‌ ಮತ್ತು ಅಕ್ಷಯ್‌ ಡೋಲು ಬಡಿತದ ಸದ್ದಿಗೆ ಸಖತ್‌ಸ್ಟೆಪ್‌ ಹಾಕಿದ್ದು, ವೀಡಿಯೋ ನೋಡಿದ ಅಭಿಮಾನಿಗಳು ಇದು ಭಾರತೀಯ ಚಿತ್ರರಂಗದ ನಿಜವಾದ ಸೌಂದರ್ಯ ಎಂದು ಬಣ್ಣಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next