Advertisement

ಟ್ರಂಪ್‌ ಜತೆಗೆ ಮೂರನೇ ಬಾರಿ ಮಾತುಕತೆಗೆ ಸಿದ್ಧ : ಉತ್ತರ ಕೊರಿಯ ನಾಯಕ ಕಿಮ್‌

09:26 AM Apr 14, 2019 | Sathish malya |

ಸೋಲ್‌ : ಅಮೆರಿಕ ಒಂದೊಮ್ಮೆ ಸರಿಯಾದ ದೃಷ್ಟಿಕೋನದೊಂದಿಗೆ ಮಾತುಕತೆಯ ಮೇಜಿಗೆ ಬರುವುದಾದಲ್ಲಿ ನಾನು ಮೂರನೇ ಬಾರಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮಾತುಕತೆ ನಡೆಸಲು ಸಿದ್ಧ ಎಂದು ಉತ್ತರ ಕೊರಿಯದ ನಾಯಕ ಕಿಂ ಜಾಂಗ್‌ ಉನ್‌ ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ಇಂದು ಶನಿವಾರ ತಿಳಿಸಿವೆ.

Advertisement

ಟ್ರಂಪ್‌ ಮತ್ತು ಕಿಮ್‌ ನಡುವೆ ಈಚೆಗೆ ವಿಯೆಟ್ನಾಮ್‌ ನಲ್ಲಿ ನಡೆದಿದ್ದ ಎರಡನೇ ಶೃಂಗ ಸಭೆ ವಿಫ‌ಲವಾಗಿತ್ತು.

“ಟ್ರಂಪ್‌ ಜತೆಗಿನ ಮೂರನೇ ಶೃಂಗ ಸಭೆಗೆ ನಾನು ಈ ವರ್ಷಾಂತ್ಯದ ವರೆಗೂ ಕಾಯುತ್ತೇನೆ. ಅಷ್ಟರೊಳಗೆ ಅಮೆರಿಕ ಆ ಬಗ್ಗೆ ದಿಟ್ಟತನದ ಒಂದು ನಿರ್ಧಾರ ಕೈಗೊಳ್ಳುವುದೆಂದು ಹಾರೈಸುತ್ತೇನೆ’ ಎಂದು ಕಿಮ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next