Advertisement

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

12:44 AM Nov 16, 2024 | Team Udayavani |

ಸೋಲ್‌: ಅಮೆರಿಕ, ಜಪಾನ್‌ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸದ ಬೆನ್ನಲ್ಲೇ ಉ.ಕೊರಿಯಾವು ತನ್ನ ಗುರಿಯನ್ನು ತಲುಪಿ ಸ್ವಯಂ ಸ್ಫೋಟಿಸುವ ಸಿಡಿಮದ್ದು ಡ್ರೋನ್‌ಗಳನ್ನು ಅಗಾಧ ಪ್ರಮಾಣದಲ್ಲಿ ಉತ್ಪಾದಿಸಲು ಮುಂದಾಗಿದೆ. ಇದಕ್ಕೆ ಕಿಮ್‌ ಜಂಗ್‌ ಉನ್‌ ಆದೇಶ ಮಾಡಿದ್ದಾರೆ.

Advertisement

ತನ್ನ ಸಮುದ್ರ ತೀರ ಪ್ರದೇಶಕ್ಕೆ ಹೊಂದಿಕೊಂಡ ಕರಾವಳಿಯಲ್ಲಿ ಅತ್ಯಾ­ಧು­ನಿಕ ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳೊಂದಿಗೆ ಅಮೆರಿಕ, ಜಪಾನ್‌, ದಕ್ಷಿಣ ಕೊರಿಯಾ ಸಮರಾ­ಭ್ಯಾಸ ನಡೆಸಿದ ಬೆನ್ನಲ್ಲೇ ಕೆರಳಿ ನಿಂತಿ­ರುವ ಕಿಮ್‌ ಜಂಗ್‌ ಉನ್‌, ಸೇನೆಯ ನೂತನ ಡ್ರೋನ್‌ಗಳ ಪರೀಕ್ಷೆಯನ್ನು ವೀಕ್ಷಿಸಿದರು. ಈ ಕುರಿತ ವೀಡಿಯೋ ವನ್ನು ಕೆಸಿಎನ್‌ಎ ನ್ಯೂಸ್‌ ಏಜೆನ್ಸಿ ಬಿಡುಗಡೆ ಮಾಡಿದ್ದು ಕಾರು ಮತ್ತು ಯುದ್ಧ ಟ್ಯಾಂಕ್‌ನ್ನು ಮಾನವ ರಹಿತ ಡ್ರೋನ್‌ ಸ್ಫೋಟಿಸು ವುದನ್ನು ಪ್ರಕಟಿಸ ಲಾ­ಗಿದೆ.

ಈ ರೀತಿಯ ಡ್ರೋನ್‌ಗಳನ್ನು ಆತ್ಮಹತ್ಯಾ ಡ್ರೋನ್‌ಗಳೆಂದು ಕರೆಯಲಾ ಗುತ್ತಿದ್ದು ಉಕ್ರೇನ್‌ ಮೇಲಿನ ಯುದ್ಧ ದಲ್ಲಿ ರಷ್ಯಾ, ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್‌ ವ್ಯಾಪಕವಾಗಿ ಬಳಸುತ್ತಿವೆ. ಹೆಚ್ಚುತ್ತಿರುವ ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆ ಕೊರಿಯಾ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next