ಪ್ಯೋನ್ ಗ್ಯಾಂಗ್ : ಅಮೆರಿಕ ಮತ್ತು ವಿಶ್ವಸಂಸ್ಥೆಯ ಎಚ್ಚರಿಕೆಗೆ ಬಗ್ಗದ ಉತ್ತರ ಕೊರಿಯಾ ಮತ್ತೆ ಉದ್ಧಟತನ ತೋರಿದ್ದು ಜಪಾನ್ ಮೇಲೆ ಇನ್ನಷ್ಟು ಕ್ಷಿಪಣಿಗಳು ಹಾರಿಸುತ್ತೇವೆ ಎಂದು ಸವಾಲು ಹಾಕಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶ್ವವೇ ಕಾಣದಂತೆ ಸುಟ್ಟು ಬೂದಿಯಾಗುತ್ತೀರಿ ಎನ್ನುವ ದಿಟ್ಟ ಎಚ್ಚರಿಕೆಯ ಬಳಿಕವೂ ಹುಚ್ಚಾಟ ತೋರಿದ್ದ ಉತ್ತರಕೋರಿಯಾ ಮಂಗಳವಾರ ಜಪಾನ್ ಮೇಲೆ ಕ್ಷಿಪಣಿ ಹಾರಾಟ ನಡೆಸಿತ್ತು. ಉತ್ತರ ಕೊರಿಯಾ ರಾಜಧಾನಿ ಪ್ಯೋನ್ ಗ್ಯಾಂಗ್ ನಿಂದ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ, ಜಪಾನ್ ಮೇಲಿಂದ ಹಾದು ಹೋಗಿ, ಉತ್ತರ ಪೆಸಿಫಿಕ್ ಸಮುದ್ರಕ್ಕೆ ಹೋಗಿ ಬಿದ್ದಿತ್ತು.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ಜೊಂಗ್ ಪ್ರತಿಕ್ರಿಯೆ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಖಂಡಾಂತರ್ಗಾಮಿ ಕ್ಷಿಪಣಿಗಳನ್ನು ನಾವು ಜಪಾನ್‌ನತ್ತ ಹಾರಿಸುವುದಾಗಿ ವಿಶ್ವ ನಾಯಕರಿಗೇ ಸವಾಲು ಒಡ್ಡಿದ್ದಾರೆ.
ಕಿಮ್ ಜೊಂಗ್ ಹೇಳಿಕೆಯನ್ನು ಉಲ್ಲೇಖೀಸಿ ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಉತ್ತರ ಕೊರಿಯಾದ ಉದ್ದಟತನದಿಂದ ಯುದ್ಧದ ವಾತಾವರಣ ನಿರ್ಮಾಣವಾಗಿದೆ.