Advertisement

North Korea;ಮದ್ದು ಗುಂಡು ಕೊಟ್ಟ ಕಿಮ್‌ಗೆ ಪುತಿನ್‌ರಿಂದ 24 ಕುದುರೆ ಉಡುಗೊರೆ

01:44 AM Sep 02, 2024 | Team Udayavani |

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರಿಗೆ 24 “ಪ್ಯೂರ್‌ ಬ್ರೆಡ್‌’ ಎಂಬ ತಳಿಯ ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ರಷ್ಯಾಕ್ಕೆ ಮದ್ದುಗುಂಡುಗಳನ್ನು ಪೂರೈಸಿದ್ದು ಉ.ಕೊರಿಯಾದ ಕಿಮ್‌ ಜಾಂಗ್‌ ಅದಕ್ಕೆ ಕೃತಜ್ಞತೆ­ಯಾಗಿ ಕುದುರೆಗಳನ್ನು ಉಡುಗೊರೆ ನೀಡಲಾಗಿದೆ ಎಂದು ಹೇಳಲಾಗಿದೆ. 2 ವರ್ಷಗಳ ಹಿಂದೆಯೂ ಪುತಿನ್‌ “ಒರ್ಲೊವ್‌ ಟ್ರೋಟರ್ಸ್‌’ ಎಂಬ ತಳಿಗೆ ಸೇರಿದ 30 ಕುದುರೆಗಳನ್ನು ನೀಡಿದ್ದರು. ಕಿಮ್‌ ಆ ಕುದುರೆ ಮೇಲೆ ಸಂಚರಿಸುತ್ತಿದ್ದ ಫೋಟೋಗಳೂ ವೈರಲ್‌ ಆಗಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next