Advertisement

ಚೀನದ ಕೋವಿಡ್ ದಿಗ್ವಿಜಯವನ್ನು ಕೊಂಡಾಡಿದ ಕಿಮ್‌ ಜಾಂಗ್‌ ಉನ್

12:23 AM May 11, 2020 | Hari Prasad |

ಬೀಜಿಂಗ್‌: ಮಾರಣಾಂತಿಕ ಕೋವಿಡ್ ವೈರಸ್‌ ಅನ್ನು ಪವಾಡವೆಂಬಂತೆ ಕಟ್ಟಿಹಾಕಿರುವ ಚೀನದ ಸಾಧನೆಯನ್ನು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಕೊಂಡಾಡಿದ್ದಾರೆ.

Advertisement

ಈ ಬಗ್ಗೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಆಡಿಯೊ ಸಂದೇಶ ಕಳಿಸಿರುವ ಕಿಮ್‌, ‘ಸಾಂಕ್ರಾಮಿಕ ಕೋವಿಡ್ ಸೋಂಕಿನ ವಿರುದ್ಧದ ಯುದ್ಧದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೀರಿ, ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಿ’ ಎಂದು ಹೇಳಿದ್ದಾರೆ ಎಂದು ಉತ್ತರ ಕೊರಿಯಾದ ಸರಕಾರಿ ಅಧಿಕೃತ ಸುದ್ದಿಸಂಸ್ಥೆ  ದೃಢಪಡಿಸಿದೆ.

ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್‌ಗೆ ನೆರವಾಗಲು, ಮಿತ್ರ ರಾಷ್ಟ್ರ ಚೀನ ವೈದ್ಯರ ತಂಡವೊಂದನ್ನು ಕಳುಹಿಸಿತ್ತು. ಅಲ್ಲದೆ, ಕಿಮ್ ಅಂಗರಕ್ಷಕನೊಬ್ಬನಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಈ ಸರ್ವಾಧಿಕಾರಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇದ್ದರು ಎಂದೂ ಹೇಳಲಾಗಿತ್ತು.

ಮೇ 1ರಂದು ರಾಸಾಯನಿಕ ಗೊಬ್ಬರ ಕಾರ್ಖಾನೆ ಉದ್ಘಾಟನೆ ವೇಳೆ, ಕಿಮ್‌ ನಗುಮುಖದೊಂದಿಗೆ ಕಾಣಿಸಿಕೊಂಡು, ತಮ್ಮ ಬಗ್ಗೆ ಜಗತ್ತಿನಲ್ಲೆಡೆ ಹಬ್ಬಿದ್ದ ಸಾವಿನ ಸುದ್ದಿಯನ್ನು ಸುಳ್ಳಾಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next