ಸಿಯೋಲ್: ಅಮೆರಿಕ -ದಕ್ಷಿಣ ಕೊರಿಯಾ ಸಮರಭ್ಯಾಸಗಳನ್ನು ಸಂಭಾವ್ಯ ಬೆದರಿಕೆ ಎಂದು ಪರಿಗಣಿಸಿರುವ ಉತ್ತರ ಕೊರಿಯಾ, ಯಾವುದೇ ಸವಾಲು ಹೆಮ್ಮೆಟ್ಟಿಸಲು ಸಜ್ಜಾಗಿದ್ದು, ಭಾನುವಾರವೂ ಒಂದು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ.
ಇದು ದಕ್ಷಿಣಾ ಕೊರಿಯಾದ ವಿರುದ್ಧದ ಉದ್ದೇಶಿತ ದಾಳಿಗೆ ನಡೆಸುತ್ತಿರುವ ಸಿದ್ಧತೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ.
ಇತ್ತೀಚೆಗೆ ಸಾಲು-ಸಾಲು ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾ ಭಾನುವಾರ, ವಾಯುವ್ಯ ಟೊಂಗಾಂಗ್ರಿ ಪ್ರದೇಶದಿಂದ »ಅಲ್ಪಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಉಡಾವಣೆಗೊಳಿಸಿದೆ.
ದ.ಕೊರಿಯಾ ಮಾರ್ಗವಾಗಿ ಹಾದುಹೋಗಿರುವ ಕ್ಷಿಪಣಿ 800 ಕಿ.ಮೀ. ಕ್ರಮಿಸಿ ಪೂರ್ವ ಕರಾವಳಿ ತಲುಪಿದೆ.
ಕ್ಷಿಪಣಿ ಪರೀಕ್ಷೆ ಬಗ್ಗೆ ದ. ಕೊರಿಯಾ, ಜಪಾನ್ ಹಾಗೂ ಅಮೆರಿಕ ರಕ್ಷಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನೆರೆ ರಾಷ್ಟ್ರಗಳ ಶಾಂತಿ ಕದಡುವ ಕೃತ್ಯ.ಇದರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲೇ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿವೆ ಎಂದು ಮೂಲಗಳು ಹೇಳಿವೆ.