Advertisement

ರೈತರ ಬದುಕಿನೊಂದಿಗೆ ಸರ್ಕಾರಗಳ ಚೆಲ್ಲಾಟ

05:10 PM Oct 10, 2018 | |

ಹಾವೇರಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬದುಕಿನೊಂದಿಗೆ ಆಟವಾಡುತ್ತಿವೆ. ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೆ ಮೂಡಿದ್ದರೂ ರೈತರ ಬಗ್ಗೆ ಕಾಳಜಿ ತೊರುತ್ತಿಲ್ಲ. ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಹೋರಾಟದ ಮೂಲಕ ಖಂಡಿಸಲು ಮುಂದಾಗಬೇಕು ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನಮಂತಪ್ಪ ದೀವಿಗಿಹಳ್ಳಿ ಹೇಳಿದರು.

Advertisement

ನಗರದ ಮುರುಘರಾಜೇಂದ್ರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಉತ್ತರ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸತತವಾಗಿ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ, ಅದಕ್ಕೆ ಸ್ಪಷ್ಟವಾದ ನಿಯಮ ಹೇಳುತ್ತಿಲ್ಲ. ಇದರಿಂದ ರೈತರು ಸಾಲಮನ್ನಾ ವಿಚಾರವಾಗಿ ಗೊಂದಲದಲ್ಲಿದ್ದಾರೆ. ಮುಖ್ಯಮಂತ್ರಿಯವರು ರೈತರ ಪರವಾಗಿದ್ದಾರೆ ಎಂಬುವುದಾದರೆ ರೈತರಿಗೆ ಸ್ಪಷ್ಟ ಮಾಹಿತಿ ನೀಡಿ ರೈತರು ನೆಮ್ಮದಿಯ ಬದುಕಿಗೆ ನೆರವಾಗಬೇಕು ಎಂದರು.

ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡವ ಕಾಯಕ ಮಾಡಿದರೆ ರೈತರ ಬಗ್ಗೆ ಕಾಳಜಿ ಇದೆ ಎಂದು ಗೊತ್ತಾಗುತ್ತದೆ. ಪ್ರಧಾನಿಯವರು ಕೇವಲ ಭಾಷಣ ಮಾಡಿದರೇ ಸಾಲದು, ಕೊಡಲೇ ರೈತರ ನೆರವಿಗೆ ಬರಬೇಕು ಎಂದು ಹನಮಂತಪ್ಪ ದೀವಿಗಿಹಳ್ಳಿ ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಘಟಕಗಳನ್ನು ರಚನೆ ಮಾಡಿ ರೈತರಿಗೆ ಅನ್ಯಾಯವಾದರೆ ಹೋರಾಟಕ್ಕೆ ಸಜ್ಜಾಗಬೇಕು. ಅಂದಾಗ ಸರ್ಕಾರಗಳು ಹಾಗೂ ಅಧಿಕಾರಿಗಳು ರೈತರ ನೆರವಿಗೆ ಬರುತ್ತಾರೆ. ಸಂಘಟನೆ ಕೇವಲ ಹುದ್ದೆ ನೀಡುವುದಲ್ಲ, ಅದರಿಂದ ರೈತರಿಗೆ ಅನಕೂಲವಾಗಬೇಕು. ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ನೀವು ನಿಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಮಾಡಬೇಕು ಎಂದರು. ಸಭೆಯಲ್ಲಿ ಫಕ್ಕಿರೇಶ ಕಾಳಿ, ಸರೋಜಮ್ಮ ಕರ್ಜರಿ, ಗಿರಿಜಮ್ಮ ಕಾಸಂಬಿ, ಫಕ್ಕಿರೇಶ ಮಲಗುಂದ, ರಾಮನಗೌಡ ತರ್ಲಗಟ್ಟ, ಜಗದೇಶ ಕುಸಗೂರ ಇನ್ನಿತರರು ಇದ್ದರು.

ನೂತನ ಪದಾಧಿಕಾರಿಗಳು
ಉತ್ತರ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಫಕ್ಕೀರಗೌಡ ಗಾಜಿಗೌಡ್ರ ನೇಮಕಗೊಂಡರು. ಗೌರವಾಧ್ಯಕ್ಷ ಶಿವಾನಂದಪ್ಪ ಮತ್ತಿಹಳ್ಳಿ, ಕಾರ್ಯಾಧ್ಯಕ್ಷ ತೋಟಪ್ಪ ಹೊಸಳ್ಳಿ, ಉಪಾಧ್ಯಕ್ಷ ಬಸಪ್ಪ ಮೂಲಿಮನಿ, ಪ್ರಧಾನ ಕಾರ್ಯದರ್ಶಿ ಮಾಲತೇಶ ಬಡಿಗೇರ, ಸಹಕಾರ್ಯದರ್ಶಿ ನಾಗಪ್ಪ ರಾಮಜ್ಜನವರ, ಕುಮಾರ ಹರಮಗಟ್ಟಿ, ಸದಸ್ಯರಾಗಿ ಮಂಜುನಾಥ ಹಿರೇಮಠ. ಪ್ರಕಾಶ ಬೂಸನಗೌಡ್ರ, ಗದಿಗೆಪ್ಪ ಹಡಪದ, ಮಹೇಶ ಮಲ್ಲಾಡದ, ದುರಗಪ್ಪ ಹರಿಜನಮ ಷಣ್ಮುಖಪ್ಪ ಗಿರ್ಜಿ, ಮಾಲತೇಶ ಮಣ್ಣೂರ, ಜಗದೇಶ ಕೋಳೂರ, ಸಿದ್ದಪ್ಪ ಮಲ್ಲಪ್ಪನವರ ನೇಮಕಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next