Advertisement

ಈಶಾನ್ಯ ಚೆಲುವೆಯ ಮುಡಿಗೆ ಕಮಲ

11:22 AM May 24, 2019 | Team Udayavani |

ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ (ಎನ್‌ಸಿಆರ್‌) ಪರಿಷ್ಕರಣೆಯ ವಿವಾದದ ನಡುವೆಯೂ ಅಸ್ಸಾಂನಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.  ಒಂದು ಕಾಲದಲ್ಲಿ ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷಗಳ ಭದ್ರ ಕೋಟೆಯಂತಿದ್ದ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ತಮ್ಮ ಅಸ್ಮಿತೆ  ಹೆಚ್ಚಿಸಿಕೊಂಡಿದ್ದು, 2019ರ ಲೋಕಸಭಾ ಚುನಾವ ಣೆಯಲ್ಲಿ ಈಶಾನ್ಯ ರಾಜ್ಯಗಳ ಒಟ್ಟು 25 ಲೋಕ ‌ಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 14 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿರುವುದು ಗಮನಾರ್ಹ.

Advertisement

ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಅತಿಹೆಚ್ಚು ಅಂದರೆ 14 ಲೋಕಸಭಾ ಕ್ಷೇತ್ರಗಳಿದ್ದು, ಆ ಪೈಕಿ ಬಿಜೆಪಿ 9 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಕಾಂಗ್ರೆಸ್‌ 3 ಹಾಗೂ ಸ್ಥಳೀಯ ಪಕ್ಷಗಳು 2 ಸ್ಥಾನಗಳನ್ನು ಪಡೆದುಕೊಂಡಿವೆ. ಬಿಜೆಪಿಯ ರಾಮೇಶ್ವರ ತೇಲಿ, ಪ್ರಧಾನ ಭೂಷಣ್‌, ಟೋಪೋನ್‌ ಕುಮಾರ್‌ ಗೊಗೋಯ್‌ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ನ ಗೌರವ್‌ ಗೋಗಾಯ್‌, ಅಬ್ದುಲ್‌ ಖಲೇಕ್‌ಗೆ ಗೆಲುವು ಸಿಕ್ಕಿದ್ದರೆ, ಸ್ಟಾರ್‌ ಕ್ಯಾಂಡಿಡೇಟ್‌ಗಳಾದ ಸುಶ್ಮಿತಾ ದೇವ್‌ ಹಾಗೂ ಬಾಬಿತಾ ಶರ್ಮಾ ಸೋಲುಂಡಿದ್ದಾರೆ.

ಅರುಣಾಚಲ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದು, ಕಿರಣ್‌ ರಿಜಿಜು ಗೆಲುವು ಸಾಧಿಸಿದ್ದಾರೆ. ಮಣಿಪುರದ ಎರಡು ಕ್ಷೇತ್ರಗಳನ್ನು ಬಿಜೆಪಿ ಹಾಗೂ ನಾಗಾ ಪೀಪಲ್‌ ಫ್ರಂಟ್‌ ಹಂಚಿಕೊಂಡಿದ್ದು,
ಮೇಫಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಫ್ರಂಟ್‌ನ ಅಗಂತಾ ಎ. ಸಂಗ್ಮಾ ಗೆದಿದ್ದಾರೆ. ಮತ್ತೂಂದು ಸ್ಥಾನದಿಂದ ಕಾಂಗ್ರೆಸ್‌ನ ವಿನ್ಸೆಂಟ್‌ ಎಚ್‌. ಪಲಾ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್‌ ಫ್ರಂಟ್‌ ಗೆಲುವು ಸಾಧಿಸಿದ್ದು, ನಾಗಾಲ್ಯಾಂಡ್‌ನ‌ ಒಂದು ಸ್ಥಾನ ಕಾಂಗ್ರೆಸ್‌ ಪಾಲಾಗಿದೆ. ಸಿಕ್ಕಿಂನ ಒಂದ ಕ್ಷೇತ್ರದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷದ ಪಾಲಾಗಿದೆ.

ಬಿಜೆಪಿ ಪಾಲಾದ ತ್ರಿಪುರ: ಎರಡೂವರೆ ದಶಕಗಳ ಕಾಲ ಸಿಪಿಎಂ ಭದ್ರ ಕೋಟೆಯಾಗಿದ್ದ ತ್ರಿಪುರದ ಎರಡು ಲೋಕಸಭಾ ಕ್ಷೇತ್ರಗಳು ಈ ಬಾರಿ ಬಿಜೆಪಿಯ ಪಾಲಾಗಿವೆ. ರಿಬಾಟಿ ತ್ರಿಪುರ ಹಾಗೂ ಪ್ರತಿಮಾ ಬೌಮಿಕ್‌ ಗೆಲುವು ಸಾಧಿಸಿದ್ದಾರೆ. 1980ರಿಂದೀಚೆಗೆ ಇದೇ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿಗಳು ತ್ರಿಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಬಿಜೆಪಿಯ ಮೇಲೆ ಅನನ್ಯವಾದ ನಂಬಿಕೆ ಇಟ್ಟಿರುವ ಅರುಣಾಚಲ ಪ್ರದೇಶದ ಜನತೆಗೆ ನನ್ನ ಹೃತೂ³ರ್ವಕ ನಮನ. ಅರುಣಾಚಲ ಅಭಿವೃದ್ಧಿಗೆ ಕಿಂಚಿತ್ತೂ ಲೋಪ ಆಗದಂತೆ ಮೋದಿ ಸರ್ಕಾರ ನಡೆದುಕೊಳ್ಳುತ್ತದೆ ಎಂದು ವಾಗ್ಧಾನ ಮಾಡುತ್ತೇನೆ.- ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

Advertisement

ಗೆದ್ದ ಪ್ರಮುಖರು
ಕಿರೆಣ್‌ ರಿಜಿಜು (ಬಿಜೆಪಿ), ಅರುಣಾಚಲ ಪಶ್ಚಿಮ
ಅಗತಾ ಕೆ.ಸಂಗ್ಮಾ (ಎನ್‌ಪಿಪಿ), ತುರ್ರಾ

ಸೋತ ಪ್ರಮುಖರು
ಜಿತೇಂದ್ರ ಚೌಧರಿ (ಸಿಪಿಎಂ), ತ್ರಿಪುರ ಪೂರ್ವ
ಬಬಿತಾ ಶರ್ಮಾ (ಕಾಂಗ್ರೆಸ್‌), ಗುವಾಹಟಿ

 

Advertisement

Udayavani is now on Telegram. Click here to join our channel and stay updated with the latest news.

Next