Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ 125 ಜನರಿಗೆ ಸೋಂಕು-78 ಮಂದಿ ಬಿಡುಗಡೆ

11:52 AM Aug 06, 2020 | sudhir |

ಕಾರವಾರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ ಪೀಡಿತರ ಸಂಖ್ಯೆ ದಿಢೀರನೆ ಏರಿದೆ. ಬುಧವಾರ 125 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದೃಢವಾಗಿವೆ. 78 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 30 ಜನರಿಗೆ ಕೋವಿಡ್‌ ಕಾಣಿಸಿಕೊಂಡಿದೆ. ಅಂಕೋಲಾದಲ್ಲಿ 10, ಕುಮಟಾದಲ್ಲಿ 17, ಹೊನ್ನಾವರ, ಯಲ್ಲಾಪುರದಲ್ಲಿ ಮೂವರು, ಭಟ್ಕಳದಲ್ಲಿ
10, ಶಿರಸಿ, ಸಿದ್ದಾಪುರ, ಜೋಯಿಡಾದಲ್ಲಿ ತಲಾ ಒಬ್ಬರಲ್ಲಿ, ಮುಂಡಗೋಡದಲ್ಲಿ 16, ಹಳಿಯಾಳದಲ್ಲಿ 33 ಜನರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ.

Advertisement

ಗುಣಮುಖ: ಕಾರವಾರದಲ್ಲಿ ಐವರು, ಅಂಕೋಲಾದಲ್ಲಿ 12, ಕುಮಟಾದಲ್ಲಿ ಮೂವರು, ಶಿರಸಿಯಲ್ಲಿ 9, ಮುಂಡಗೋಡದಲ್ಲಿ 25, ಹಳಿಯಾಳದಲ್ಲಿ 24 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಈವರೆಗೆ ಜಿಲ್ಲೆಯ 2,409 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,632 ಮಂದಿ ಗುಣಮುಖರಾಗಿದ್ದಾರೆ. 26 ಮಂದಿ ಸಾವನ್ನಪ್ಪಿದ್ದು, 684 ಸಕ್ರಿಯ ಸೋಂಕಿತರಿಗೆ ವಿವಿಧ
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದರೆ, 68 ಸೋಂಕಿತರು ಹೋಂ ಐಸೋಲೇಶನ್‌ನಲ್ಲಿದ್ದಾರೆ.

ಆರು ಜನರಿಗೆ ಸೋಂಕು; ಮೂವರ ಬಿಡುಗಡೆ
ಹೊನ್ನಾವರ: ಪಟ್ಟಣದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡ ಮೂವರು ಮತ್ತು ಕೆಎಂಸಿ ಮಣಿಪಾಲ ಮತ್ತು ಮಂಗಳೂರು,
ಕಾರವಾರ ಆಸ್ಪತ್ರೆ ಸಹಿತ ಒಟ್ಟು ಆರು ಜನರಿಗೆ ಬುಧವಾರ ಸೋಂಕು ತಗಲಿದ್ದು, ಮೂವರು ಬಿಡುಗಡೆಗೊಂಡಿದ್ದಾರೆ. 15 ಜನ ಮಂಕಿ ಮತ್ತು ಹೊನ್ನಾವರ ಕೇಂದ್ರದಲ್ಲಿದ್ದಾರೆ. ದೆಹಲಿ ಮತ್ತು ದುಬೈಯಿಂದ ಬಂದ ಇಬ್ಬರು ಹೊಟೇಲ್‌ ಕ್ವಾರಂಟೈನ್‌ನಲ್ಲಿ ಉಳಿದುಕೊಂಡಿದ್ದಾರೆ. ಇಂದಿನ ನೆರೆ ಹಲವು ರೋಗಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ಜನ ಅಂತಹ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಆಗಮಿಸಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ| ಉಷಾ ಹಾಸ್ಯಗಾರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next