Advertisement

ಜಮ್ಮು-ಕಾಶ್ಮೀರದ ಜನಜೀವನ ಸಹಜ ಸ್ಥಿತಿಯತ್ತ; ಇಂಟರ್ನೆಟ್ ಕಿಯೋಸ್ಕ್ ಸ್ಥಾಪನೆ

09:47 AM Sep 08, 2019 | Team Udayavani |

ಶ್ರೀನಗರ್:ಜಮ್ಮು-ಕಾಶ್ಮೀರ ನೂತನವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಶನಿವಾರ ಎಲ್ಲಾ ಹತ್ತು ಜಿಲ್ಲೆಗಳಲ್ಲಿ ಸಾರ್ವಜನಿಕ ಇಂಟರ್ನೆಟ್ ಕಿಯೋಸ್ಕ್ ಸ್ಥಾಪಿಸಿದ್ದು, ಕಣಿವೆ ರಾಜ್ಯದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ವರದಿ ತಿಳಿಸಿದೆ.

Advertisement

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಒಂದು ತಿಂಗಳ ಬಳಿಕ ಜಮ್ಮು ಕಾಶ್ಮೀರದ ಕುಪ್ವಾರಾ ಮತ್ತು ಹಂದ್ವಾರ ಜಿಲ್ಲೆಗಳಲ್ಲಿನ ಎಲ್ಲಾ ದೂರವಾಣಿ ಮತ್ತು ಮೊಬೈಲ್ ಸಂಪರ್ಕ ಪುನರಾರಂಭಗೊಂಡಿತ್ತು.

ಇದರಿಂದಾಗಿ ಕಣಿವೆ ರಾಜ್ಯದಲ್ಲಿನ ಸರಕಾರಿ ಇಲಾಖೆ, ಗುತ್ತಿಗೆದಾರರು, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಮಾಹಿತಿಯನ್ನು ಇಂಟರ್ನಟ್ ನಲ್ಲಿ ಅಪ್ ಲೋಡ್ ಮಾಡಲು ಸಹಾಯಕವಾಗಿದೆ. ಇ-ಟೆಂಡರ್ಸ್, ಪುಸ್ತಕ ಆರ್ಡರ್ ಮಾಡಲು ಇಂಟರ್ನೆಟ್ ಸೇವೆಯನ್ನು ಜನ ಬಳಕೆ ಮಾಡುತ್ತಿರುವುದಾಗಿ ವರದಿ ವಿವರಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಇಂಟರ್ನೆಟ್ ಸೇವೆಯ ಕಿಯೋಸ್ಕ್ ಸ್ಥಾಪಿಸಲಾಗಿದೆ. ಇದು ಅಧಿಕಾರಿಗಳ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next