Advertisement

ಮನೆ ಮನೆಗೂ ಲಗ್ಗೆ ಇಟ್ಟ ನೂಡಲ್ಸ್‌  ಪಾಸ್ತಾ ಮೇಕರ್‌

07:11 AM Mar 16, 2019 | |

ಇನ್ನು ನೂಡಲ್ಸ್‌, ಪಾಸ್ತಾ ತಿನ್ನಲು ಹೊಟೇಲ್‌, ರೆಸ್ಟೋರೆಂಟ್‌ಗೆ ಹೋಗಬೇಕಿಲ್ಲ. ಯಾಕೆಂದರೆ ಮಾರುಕಟ್ಟೆಯಲ್ಲಿ ಈಗ ನೂಡಲ್ಸ್‌, ಪಾಸ್ತಾ ಮೇಕರ್‌ ಗಳು ಲಭ್ಯವಿರುವುದರಿಂದ ಮನೆಗೆ ತಂದು ಬೇಕೆನಿಸಿದಾಗ ಆರೋಗ್ಯಕರವಾದ ನೂಡಲ್ಸ್‌, ಪಾಸ್ತಾ ಮಾಡಿ ಸವಿಯಬಹುದು. ವಿವಿಧ ವೆರೈಟಿಯ, ವೈಶಿಷ್ಟ್ಯ  ಹೊಂದಿರುವ ಬಗೆ ಬಗೆಯ ಮೇಕರ್‌ ಗಳು ಲಭ್ಯವಿದ್ದು, ಹೆಚ್ಚಿನ ಬೇಡಿಕೆಯನ್ನೂ ಹೊಂದಿದೆ. 

Advertisement

ಕಾಲ ಬದಲಾಗಿದೆ. ನಾವು ಎಷ್ಟು ವೇಗವಾಗಿ ಹೆಜ್ಜೆ ಇಡುತ್ತೇವೆಯೋ ಅಷ್ಟು ಒಳಿತು. ಆ ಕಾರಣಕ್ಕಾಗಿಯೇ ಸಕಾಲಕ್ಕೆ ಊಟ ತಿಂಡಿ ಮಾಡಿ ಸೇವಿಸಲು ಸಮಯವಿಲ್ಲದಾಗಿ ದೆ. ದೋಸೆ, ಇಡ್ಲಿ ಅಷ್ಟೇ ಏಕೆ ಅನ್ನ ಸಾಂಬಾರು ಮಾಡಿ ತಿನ್ನಲು ಸಮಯವೇ ಇಲ್ಲ ಎಂಬ ಕಾರಣಕ್ಕೆ ಐದು ನಿಮಿಷಗಳಲ್ಲಿ ಸೇವಿಸಲು ಸಿದ್ಧ ಎನ್ನುವ ಆಹಾರಗಳಿಗೆ ಜೋತು ಬಿದ್ದಿದ್ದೇವೆ. 

ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಚೈನಿಸ್‌ ಫುಡ್‌ ನ್ಯೂಡಲ್ಸ್‌, ಮ್ಯಾಗಿ. ಚಿಕ್ಕ ಮಕ್ಕಳಿನಿಂದ ಹಿಡಿದು ಹಿರಿಯರಿಗೆ ಅಚ್ಚುಮೆಚ್ಚು.  ಯಾರಿಸಲು ಕಡಿಮೆ ಕಾಲಾವಕಾಶವಿದ್ದರೆ ಸಾಕು. ಬೆಳಗ್ಗೆ , ಸಂಜೆ ಎಲ್ಲ ಸಮಯಕ್ಕೂ ಸುಲಭದಲ್ಲಿ ಮಾಡಿ ಸೇವಿಸಬಹುದಾದ ಉತ್ತಮ ಆಹಾರ ಎನ್ನುವ ಕಾರಣಕ್ಕೆ ಎಲ್ಲ ಮನೆಗಳಲ್ಲೂ ಮ್ಯಾಗಿ , ನ್ಯೂಡಲ್ಸ್‌, ಪಾಸ್ತಾ ಪ್ರಮುಖ ಸ್ಥಾನ ಪಡೆದುಕೊಂಡಿದೆ. 

ಮಾರುಕಟ್ಟೆಗಳಲ್ಲಿ ಸಿಗುವ ನ್ಯೂಡಲ್ಸ್‌ ಪ್ಯಾಕೇಟ್‌ ತಂದು ಅಗತ್ಯವಿದ್ದರೆ ತರಕಾರಿಗಳನ್ನು ಸೇರಿಸಿ ಐದು ನಿಮಿಷಗಳ  ಸಿದ್ಧ ಮಾಡಬಹುದಾದರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇದ್ದವರು ಮನೆಯಲ್ಲೇ ಫಾಸ್ಟ್‌ ಫುಡ್‌ಗಳನ್ನು ಮಾಡಲು ಬೇಕಾದ ಸಾಮಗ್ರಿಗಳನ್ನು ತಂದಿಡುತ್ತಾರೆ. ಇವರಿಗೆ  ಸುಲಭವಾಗಲಿ ಎಂದು ಈಗ ಮಾರುಕಟ್ಟೆಯಲ್ಲಿ ನ್ಯೂಡಲ್ಸ್‌, ಪಾಸ್ತಾ ಮೇಕರ್‌ಗಳೂ ಲಭ್ಯವಿವೆ. ಈ ಮೂಲಕ ಮನೆಯಲ್ಲೇ ಬೇಕಾದ ತಿಂಡಿಗಳನ್ನು ತಯಾರಿಸಿ ಸೇವಿಸಬಹುದಾಗಿದೆ.

ಹೆಚ್ಚಿದೆ ಬೇಡಿಕೆ 
ಎಲ್ಲ ವಯೋಮಾನದವರೂ ಹೆಚ್ಚು ಇಷ್ಟ ಪಡುವ ನ್ಯೂಡಲ್ಸ್‌, ಪಾಸ್ತಾಗಳನ್ನು ಮಳಿಗೆಗಳಿಂದ ತಂದು ನಿಮಿಷಗಳಲ್ಲಿ ಸಿದ್ಧಗೊಳಿಸಿ ಸವಿಯುವುದು ಹಳೆಯ ಅಭ್ಯಾಸ. ಈಗ ಮಾರುಕಟ್ಟೆಗಳಲ್ಲೇ ನ್ಯೂಡಲ್ಸ್‌, ಪಾಸ್ತಾ ಮೇಕರ್‌ಗಳು ಲಭಿಸುತ್ತಿದ್ದು, ಅದನ್ನು ಮನೆಗೆ ತಂದು ಬೇಕಾದಾಗ ತಯಾರಿಸಿ ನ್ಯೂಡಲ್ಸ್‌ ಸವಿಯಬಹುದು. ಮಳಿಗೆಗಳಿಂದ ಖರೀದಿಸಿದ ಆಹಾರದ ಗುಣಮಟ್ಟ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಬಹುತೇಕ ಮಂದಿ ಹೋಮ್‌ ಮೇಡ್‌ ಫುಡ್‌ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಅಂಥವರಿಗೆ ನ್ಯೂಡಲ್ಸ್‌ ಪಾಸ್ತಾ ಮೇಕರ್ಹೆ ಹೆಚ್ಚು ಹಿತವೆನಿಸಲಿದೆ.

Advertisement

ಜಗತ್ತಿನ ವಿವಿಧ ಮೂಲೆಗಳಲ್ಲಿ ಕೋಟ್ಯಂತರ ಜನರು ನ್ಯೂಡಲ್ಸ್‌, ಪಾಸ್ತಾ ಸವಿಯುತ್ತಾರೆ ಎಂಬುದನ್ನು ಅರಿತಕೊಂಡ ವಿವಿಧ ಕಂಪೆನಿಗಳು ನ್ಯೂಡಲ್ಸ್‌, ಪಾಸ್ತಾ ಮೇಕರ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಒಂದೊಂದು ಕಂಪೆನಿಗಳು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಮೇಕರ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಜನರಿಗೆ ಅಗತ್ಯವಿರುವ ಸುಲಭ ಎನಿಸುವ ಮೇಕರ್‌ಗಳನ್ನು ಖರೀದಿಸುತ್ತಾರೆ. μಲಿಪ್ಸ್‌, ಕೇಂಟ್‌ ಸಹಿತ ವಿವಿಧ ಕಂಪೆನಿಗಳು ನ್ಯೂಡಲ್ಸ್‌, ಪಾಸ್ತಾ ಮೇಕರ್‌ ಗಳನ್ನು ಸಿ ದ್ಧಗೊಳಿಸಿದೆ. ಸುಮಾರು 4,000 ರೂ. ನಿಂದ ಆರಂಭಗೊಳ್ಳುವ ಮೇಕರ್‌ ಬೆಲೆ 12,000 ರೂ. ವರೆಗೆ ಇದೆ. ಅವುಗಳಲ್ಲಿ ವಿವಿಧ ಮೇಕರ್‌ಗಳು ವಿಶಿಷ್ಟ ಗುಣಲಕ್ಷಗಳನ್ನು ಹೊಂದಿದೆ.

ಬಳಸುವ ಬಗೆ
ಮೊದಲಿಗೆ ನ್ಯೂಡಲ್ಸ್‌, ಪಾಸ್ತಾ ಮೇಕರ್‌ನ್ನು ಸ್ವತ್ಛಗೊಳಿಸಬೇಕು. ಎಲ್ಲ ಭಾಗಗಳನ್ನು ತೆಗೆದು ಶುಚಿಗೊಳಿಸಬೇಕು. ಬಳಿಕ ಗೋಧಿ ಅಥವಾ ಮೈದಾ(ಯಾವುದರಲ್ಲಿ ಮಾಡಬೇಕು ಎಂದು ತೀರ್ಮಾನಿಸಿಕೊಳ್ಳಿ) ಹಾಕಿ ಬಳಿಕ ಅದಕ್ಕೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಬೇಕು. ಹಿಟ್ಟು ಗಟ್ಟಿಯಾದ ಬಳಿಕ ಮೇಕರ್‌ನ ಮುಂಭಾಗದಲ್ಲಿರುವ ಪುಟ್ಟ ಬಾಕ್ಸ್ ನಿಂದ ನ್ಯೂಡಲ್ಸ್‌ ಶೇಪ್‌ನಲ್ಲಿ ಹಿಟ್ಟು ಸಿದ್ಧಗೊಳ್ಳುತ್ತದೆ. ನೂಡಲ್ಸ್‌ ಹಾಗೂ ಪಾಸ್ತಾಕ್ಕೆ ಬೇರೆಯೇ ಪ್ಲೇಟ್  ಇರುವುದರಿಂದ ಅದನ್ನು ಬದಲಾಯಿಸಿಕೊಂಡು ತಯಾರಿಸಬೇಕು. ಸಿದ್ಧಗೊಂಡ ನೂಡಲ್ಸ್‌ ಹಾಗೂ ಪಾಸ್ತಾವನ್ನು ತೆಗೆದು ಬೇಯಿಸಿ ಬೇಕಾದ ಪದಾರ್ಥಗಳನ್ನು ಸೇರಿಸಿ ನೂಡಲ್ಸ್‌ ತಯಾರಿಸಿಕೊಳ್ಳಬಹುದು.

ಆನ್‌ಲೈನ್‌ನಲ್ಲೂ ಲಭ್ಯ
ಪ್ರಸ್ತುತ ಆನ್‌ಲೈನ್‌ ಶಾಂಪಿಂಗ್‌ ಸೈಟ್‌ಗಳಲ್ಲೂ ಮೇಕರ್‌ಗಳು ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಿಕೊಂಡು ಖರೀದಿಸಬಹುದು. ವಾರಂಟಿ, ಗ್ಯಾರಂಟಿ ಕಾರ್ಡ್‌ಗಳು ಲಭಿಸುತ್ತಿದ್ದು, ಅದನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು. ಸೂಕ್ತ ಸಮಯದಲ್ಲಿ ಸರ್ವಿಸ್‌, ಸ್ವಚ್ಚಮಾಡುತ್ತಲೇ ಇದ್ದರೆ ಮೇಕರ್‌ ಹಲವು ಸಮಯಗಳವರೆಗೆ ಬರುತ್ತದೆ. ಇದರೊಂದಿಗೆ ಮೇಕರ್‌ಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಬಳಸುವುದು ಉತ್ತಮ. 

ಪ್ಯಾಕೇಟ್‌ಗಳಲ್ಲಿ ಬರುತ್ತಿದ್ದ ನ್ಯೂಡಲ್ಸ್ ಗಳನ್ನು ಮನೆಗಳಲ್ಲೇ ತಯಾರಿಸುವ ಮೇಕರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿವಿಧ ವೈಶಿಷ್ಟ್ಯಗಳನ್ನು ಇದು ಹೊಂದಿವೆ. ಆ ಕಾರಣದಿಂದಲೇ ಹಲವು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಹೊಸ ಬಗೆಯಲ್ಲಿ ಗ್ರಾಹಕರಿಗೆ ತಲುಪಿಸಲು ಪ್ರಯತ್ನಿಸುತ್ತಿವೆ. ವಿಶಿಷ್ಟ ಜಾಹೀರಾತುಗಳು, ಫ್ಲೆಕ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ನ್ಯೂಡಲ್ಸ್‌ ಮೇಕರ್‌ ಖರೀದಿಸುವಾಗಲೇ ಮಳಿಗೆಯ ಸಿಬಂದಿ ಅದರ ಬಳಕೆ ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡುತ್ತಾರೆ. ಅದರಲ್ಲೂ ಸಂಶಯವಿದ್ದರೆ ಯೂಟ್ಯೂಬ್‌ ಗಳಲ್ಲಿ ಪರಿಶೀಲಿಸಿಕೊಳ್ಳಬಹುದು.

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next