Advertisement
ಕೆಲವು ವರ್ಷಗಳ ಹಿಂದೆಯಷ್ಟೇ ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ಅವರ ಕಚೇರಿಗಾಗಿ ಈ ಕಟ್ಟಡ ನಿರ್ಮಾಣವಾಗಿತ್ತು. ಆದರೆ ಮೂಲ್ಕಿ ಠಾಣೆಯು ಮೇಲ್ದರ್ಜೆಗೇರಿದಾಗ ಠಾಣಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಅವರೇ ಕಾರ್ಯನಿರ್ವಹಿಸಬೇಕಾಯಿತು. ಮೂಲ್ಕಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅವರ ಕಚೇರಿಯು ನೂತನವಾಗಿ ನಿರ್ಮಾಣಗೊಂಡು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಈ ಕಚೇರಿಯನ್ನು ಸ್ಥಳಾಂತರಿಸಲಾಯಿತು.
ಅದೆಷ್ಟೋ ಇಲಾಖೆಗಳಿಗೆ ಕಚೇರಿಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಪೊಲೀಸ್ ಇಲಾಖೆಯ ಟ್ರಾಫಿಕ್ ವಿಭಾಗದ ಮೂಲ್ಕಿ ಪರಿಸರದ ಹೋಬಳಿಯ ಜನರು ಟ್ರಾಫಿಕ್ ಪೊಲೀಸ್ ಕೆಲಸಕ್ಕಾಗಿ ದೂರದ ಬೈಕಂಪಾಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅದಲ್ಲದೆ ಬಹಳಷ್ಟು ಟ್ರಾಫಿಕ್ ಪೊಲೀಸ್ ಸಿಬಂದಿ ಈ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿ ಒಂದು ಉಪ ಕಚೇರಿಯಾಗಿ ಈ ಕಟ್ಟಡವನ್ನು ಉಪಯೋಗಿಸಿ ಮೂಲ್ಕಿ ಹೋಬಳಿಯ ಜನರಿಗೆ ಉಪಯೋಗವಾಗುವ ಕೆಲಸವನ್ನು ಇಲಾಖೆ ಮಾಡಿದರೆ ಉತ್ತಮ ಎಂಬುವುದು ಸಾರ್ವಜನಿಕರ ಅಭಿಪ್ರಾಯ. ಟ್ರಾಫಿಕ್ ಉಪಕಚೇರಿಯಾಗಿಸಲಿ
ಮೂಲ್ಕಿ ವ್ಯಾಪ್ತಿಯಲ್ಲಿ ನಡೆಯುವ ವಾಹನ ಅಪಘಾತ ಸಹಿತ ಯಾವುದೇ ಕೇಸ್ ವಿಚಾರಣೆಗಾಗಿ ಬೈಕಂಪಾಡಿಯ ಮಂಗಳೂರು ಉತ್ತರ ಪೊಲೀಸ್ ಟ್ರಾಫಿಕ್ ಠಾಣೆಗೆ ಹೋಗಬೇಕಾಗುತ್ತದೆ. ಮೂಲ್ಕಿ ಹೋಬಳಿಯ ಜನರಿಗೆ ಉಪಯೋಗವಾಗುವಂತೆ ಈ ಕಟ್ಟಡವನ್ನು ಬಳಕೆ ಮಾಡಿ ಟ್ರಾಫಿಕ್ ಉಪಕಚೇರಿಯಾಗಿ ಉಪಯೋಗಿಸಿದರೆ ಬಹಳಷ್ಟು ಜನರಿಗೆ ಉಪಕಾರವಾದೀತು.
-ಮಧು ಆಚಾರ್ಯ
ಅಧ್ಯಕ್ಷರು, ಮೂಲ್ಕಿ ಟೂರಿಸ್ಟ್ ಕಾರು,
ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಮೂಲ್ಕಿ
Related Articles
ಮೂಲ್ಕಿ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿದಾಗ ಅನಿವಾರ್ಯವಾಗಿ ಈ ಕಚೇರಿಯು ಮೂಲ್ಕಿ ಠಾಣೆಗೆ ವರ್ಗಾವಣೆಯಾಗಬೇಕಾಯಿತು. ಈಗ ಅಲ್ಲಿ ಕೆಲವು ದಾಖಲೆ ಪತ್ರಗಳು ಮಾತ್ರ ಇವೆ. ಕಟ್ಟಡವನ್ನು ಸಮೀಪದಲ್ಲಿರುವ ನಮ್ಮ ಸಿಬಂದಿ ವ್ಯಾಯಾಮ, ಯೋಗ ಇತ್ಯಾದಿಗಳಿಗೆ ಉಪಯೋಗಿಸುತ್ತಾರೆ. ಇಲಾಖೆಗೆಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ವಿಭಾಗ ತೆರೆಯಬೇಕೆಂದಿದ್ದರೆ ಅದಕ್ಕೆ ಮೇಲಾಧಿಕಾರಿಗಳ ಅನುಮತಿ ಅಗತ್ಯ.
-ಅನಂತಪದ್ಮನಾಭ
ಇನ್‌ಸ್ಪೆಕ್ಟರ್, ಮೂಲ್ಕಿ ಪೊಲೀಸ್ ಠಾಣೆ
Advertisement