Advertisement
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ವಿದೇಶಗಳಲ್ಲಿರುವ ಭಾರತೀಯರು, ಕನ್ನಡಿಗರನ್ನು ಸಂಪರ್ಕಿಸಿ ಅವರು ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಲು, ಉತ್ತೇಜಿಸಲು ಅನಿವಾಸಿ ಭಾರತೀಯರ ವೇದಿಕೆ ಆರಂಭಿಸಲಾಗಿದೆ. ಅದರಂತೆ ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್, ಅಟ್ಲಾಂಟಾ, ದಲ್ಲಾಸ್ ಹಾಗೂ ಅಬಿದಾಬಿ, ಶಾರ್ಜಾ, ದುಬೈ ಪ್ರವಾಸ ಕೈಗೊಳ್ಳಲಾಗಿತ್ತು. ಅನಿವಾಸಿ ಭಾರತೀಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಸಭೆಯಲ್ಲಿ 30 ಮಂದಿ ಕನ್ನಡಿಗರು ಪಾಲ್ಗೊಂಡಿದ್ದರು. ಸರ್ಕಾರಿ ಇಲಾಖೆಗಳು, ಹೂಡಿಕೆದಾರರು ಹಾಗೂ ಅಧಿಕಾರಿ ವರ್ಗದ ನಡುವೆ ಸಂಪರ್ಕ ಕೊಂಡಿಯಾಗಿ ಎನ್‌ಆರ್‌ಐ ವೇದಿಕೆ ಕಾರ್ಯ ನಿರ್ವಹಿಸುವುದಾಗಿಯೂ ತಿಳಿಸಲಾಗಿದ್ದು, ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
Related Articles
ಕೈಜೋಡಿಸುವ ಒಡಂಬಡಿಕೆ ಮಾಡಿಕೊಳ್ಳಲಾಯಿತು. ನಂತರ ಯುಎಇಯಲ್ಲಿರುವ ಎನ್‌ಎಂಸಿ ಹೆಲ್ತ್‌ಕೇರ್ ನ ಸ್ಥಾಪಕ ಅಧ್ಯಕ್ಷ ಬಿ.ಆರ್.ಶೆಟ್ಟಿ ಅವರೊಂದಿಗೂ ಸಭೆ ನಡೆಯಿತು. ಬಿ.ಆರ್.ಶೆಟ್ಟಿ ಅವರು ರಾಜ್ಯದಲ್ಲಿ ಹೂಡಿಕೆ ಜತೆಗೆ ಸಂಸ್ಥೆ ಆಯೋಜಿಸಲಿರುವ ಏಷಿಯನ್ ಸಮ್ಮಿಟ್‌ಗೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು.
Advertisement
ಶಾರ್ಜಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಅಬ್ದುಲ್ಲಾ ಸುಲ್ತಾನ್ ಅಲ್ ಓವಾಯಿಸ್ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು. ದುಬೈನಲ್ಲಿ ನಡೆದಸಭೆಯಲ್ಲಿ ಪಾಲ್ಗೊಂಡಿದ್ದ 35 ಅನಿವಾಸಿ ಭಾರತೀಯರು, ಅನಿವಾಸಿ ಕನ್ನಡಿಗರನ್ನು ಹೂಡಿಕೆಗೆ ಆಹ್ವಾನಿಸಲಾಯಿತು. ಬೆಂಗಳೂರಿಗೆ ಬದಲಾಗಿ
ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಲ್ಲಿ ಹೂಡಿಕೆಗೆ ಆಹ್ವಾನಿಸಲಾಗಿದೆ. ಒಟ್ಟು 56 ರಾಷ್ಟ್ರದ ಅನಿವಾಸಿ ಭಾರತೀಯರನ್ನು ಸಂಪರ್ಕಿಸುವ
ಗುರಿಯಿದ್ದು, ಜನವರಿ ಹೊತ್ತಿಗೆ 24 ದೇಶಗಳನ್ನು ತಲುಪುವ ವಿಶ್ವಾಸವಿದೆ ಎಂದು ಹೇಳಿದರು. ಎಫ್ ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸಿ.ಆರ್.ಜನಾರ್ದನ್ ಇತರರು ಉಪಸ್ಥಿತರಿದ್ದರು. ವಿಶ್ವೇಶ್ವರಯ್ಯ ಪ್ರಶಸ್ತಿಗೆ ಬಿ.ಆರ್. ಶೆಟ್ಟಿ ಆಯ್ಕೆ
ಎಫ್ಕೆಸಿಸಿಐ ನೀಡುವ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗೆ ಅನಿವಾಸಿ ಭಾರತೀಯ ಉದ್ಯಮಿ, ಯುಎಇಯಲ್ಲಿನ ಎನ್‌ಎಂಸಿ ಹೆಲ್ತ್ ಕೇರ್‌ನ ಸ್ಥಾಪಕ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸುಧಾಕರ್ ಎಸ್. ಶೆಟ್ಟಿ, ಸೆ.15ರಂದು ಸಂಸ್ಥಾಪಕರ ದಿನಾಚರಣೆ
ನಡೆಯಲಿದ್ದು ಆ ದಿನ ಸಂಜೆ 5 ಗಂಟೆಗೆ ಬಿ.ಆರ್. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇತರರು ಪಾಲ್ಗೊಳ್ಳಲಿದ್ದಾರೆ. ರಾಜ್ಯಸಭಾ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿ, ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ಉಪನ್ಯಾಸ ನೀಡಲಿದ್ದಾರೆ ಎಂದರು. ಪ್ರಧಾನಿ ಮೋದಿ, ಮುಖ್ಯಮಂತ್ರಿಗೆ ಪತ್ರ
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಸಾರ್ವಜನಿಕರು ಸೇರಿ ಕೈಗಾರಿಕೋದ್ಯಮಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ಆದಾಯ ಕಡಿತಗೊಳಿಸಿಕೊಂಡು ಪೆಟ್ರೋಲ್, ಡೀಸೆಲ್ ದರವನ್ನು 9ರಿಂದ 10 ರೂ. ಇಳಿಕೆ ಮಾಡುವಂತೆ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳನ್ನು ಕೋರಿ ಪತ್ರ ಬರೆಯಲಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷರು ಹೇಳಿದರು.