Advertisement

ಮರುಪಾವತಿಯಾಗದ ಸಾಲ 71 ಸಾವಿರ ಕೋಟಿ

11:23 PM Jun 03, 2019 | Team Udayavani |

ಹೊಸದಿಲ್ಲಿ: ಮರುಪಾವತಿಯಾಗದ ಸಾಲದ ಪ್ರಮಾಣ 2018-19 ರಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ಮಾಡಿದೆ. ಈ ಅವಧಿಯಲ್ಲಿ ಬ್ಯಾಂಕ್‌ ವಂಚನೆ 71,500 ಕೋಟಿ ರೂ.ಗೆ ತಲುಪಿದ್ದು, ಒಟ್ಟು ಪ್ರಕರಣಗಳು 6,801 ಆಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 73ರಷ್ಟು ಹೆಚ್ಚು ಎಂದು ಆರ್‌ಟಿಐ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಆರ್‌ಬಿಐ ಉತ್ತರಿಸಿದೆ. ಕಳೆದ 11 ವರ್ಷಗಳಲ್ಲಿ ಒಟ್ಟು 53,334 ಪ್ರಕರಣಗಳು ವರದಿಯಾಗಿದ್ದು, ಇದರ ಮೊತ್ತ ಒಟ್ಟು 2.04 ಲಕ್ಷ ಕೋಟಿ ರೂ. ಆಗಿತ್ತು.

Advertisement

ಉದ್ಯಮಿಗಳಾದ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿಯಂತಹವರು ಕೋಟ್ಯಂತರ ರೂ. ಸಾಲ ಪಡೆದು ಮರುಪಾವತಿ ಮಾಡದೇ ವಿದೇಶಕ್ಕೆ ಪಲಾಯನಗೈದ ಹಿನ್ನೆಲೆಯಲ್ಲೇ ವರ್ಷದಿಂದ ವರ್ಷಕ್ಕೆ ಮರುಪಾವತಿಯಾಗದ ಸಾಲದ ಪ್ರಮಾಣವೂ ಹೆಚ್ಚುತ್ತಿರುವುದು ಬ್ಯಾಂಕಿಂಗ್‌ ವ್ಯವಸ್ಥೆಗೆ ಆತಂಕಕಾರಿಯಾಗಿದೆ. ಈ ಪ್ರಮಾಣದಲ್ಲಿ ಅವ್ಯವಹಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರೀಯ ವಿಚಕ್ಷಣಾ ಆಯೋಗವು 100 ಪ್ರಕರಣಗಳ ವಿಶ್ಲೇಷಣೆ ನಡೆಸಿ ವರದಿಯನ್ನೂ ಸಲ್ಲಿಸಿದೆ.

ಆಭರಣ, ಉತ್ಪಾದನೆ ಮತ್ತು ಉದ್ಯಮ, ಕೃಷಿ, ಮಾಧ್ಯಮ, ವಿಮಾನ ಯಾನ, ಸೇವಾ ವಲಯ ಸಹಿತ ಹಲವು ವಿಭಾಗಗಳಲ್ಲಿ ಈ ಮರುಪಾವತಿಯಗದ ಸಾಲದ ಸಮಸ್ಯೆ ವ್ಯಾಪಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next