Advertisement

ನಗರ ಸುತ್ತಮುತ್ತಲಿನ ಕನ್ನಡೇತರ ನಾಮಫ‌ಲಕ ತೆರವು ಕಾರ್ಯಾಚರಣೆ

12:32 AM Jul 04, 2019 | sudhir |

ಮಡಿಕೇರಿ: ಕುಶಾಲನಗರ ರಸ್ತೆ ಬದಿ ಹಾಗೂ ವಿವಿಧ ಅಂಗಡಿ ಮಳಿಗೆಗಳ ಎದುರು ರಾರಾಜಿಸುತ್ತಿದ್ದ ಕನ್ನಡೇತರ ನಾಮಫ‌ಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯತ್‌ ಮುಂದಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೃಹತ್ತಾದ ಕನ್ನಡೇತರ ನಾಮಫ‌ಲಕಗಳೇ ಹೆಚ್ಚಾಗಿ ರಾರಾಜಿಸುತ್ತಿದ್ದು, ಇದು ರಾಜ್ಯದ ಭಾಷಾ ನೀತಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಇಲ್ಲವೇ ಆ ನಾಮಫ‌ಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ಸಾಗರ್‌ ಅವರು ಕೆಡಿಪಿ ಸಭೆಯಲ್ಲಿ ಗಮನ ಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರ್ವ ಹಣಾಧಿಕಾರಿಗಳು ಆಯಾ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇ ಶಿಸಿದ ಮೇರೆಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಸೋಮವಾರ ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿಯ ಹೊಸಕೋಟೆ ಮತ್ತು ಶುಂಠಿಕೊಪ್ಪ ವ್ಯಾಪ್ತಿಗಳಲ್ಲಿ ರಾರಾಜಿಸುತ್ತಿದ್ದ ಕನ್ನಡೇತರ ಬೃಹತ್‌ ಜಾಹಿರಾತು ನಾಮಫ‌ಲಕಗಳನ್ನು ತೆರವುಗೊಳಿಸಿದ್ದಾರೆ. ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ನಿಮಯ ಉಲ್ಲಂಘಿಸಿ ಅಳವಡಿಸಿದ್ದ ಕನ್ನಡೇತರ ನಾಮಫ‌ಲಕಗಳನ್ನು ತೆರವು ಗೊಳಿಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರು, ಸರ್ಕಾರಿ ಆದೇಶದಂತೆ ನಾಮಫ‌ಲಕಗಳಲ್ಲಿ ಶೇ. 60ರಷ್ಟು ಜಾಗ ಕನ್ನಡ ಭಾಷೆಯಲ್ಲಿರಬೇಕು. ಉಳಿದಂತೆ ಅದರ ಕೆಳಭಾಗದಲ್ಲಿ ಶೇ.40ರಷ್ಟು ಜಾಗದಲ್ಲಿ ಅನ್ಯ ಭಾಷೆಗಳನ್ನು ಬಳಸಬಹುದಾಗಿದೆ ಎಂದು ಸುನಿಲ್ ಅವರು ಹೇಳಿದರು.

ಆದರೆ ಜಾಹೀರಾತು ಸಂಸ್ಥೆಗಳು ಮತ್ತು ಅಂಗಡಿ ಮಾಲಕರು ನಾಮಫ‌ಲಕ ಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡದೆ ಕನ್ನಡೇತರ ಭಾಷೆಗಳಿಗೆ ಆದ್ಯತೆ ನೀಡಿರುವುದು ಗೋಚರಿಸಿದೆ. ಇವುಗಳನ್ನು ತೆರವುಗೊಳಿಸಲು ಆಯಾಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯೋ ನ್ಮುಖರಾಗಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದವರ ಅಂಗಡಿಯ ಪರವಾನಗಿಯನ್ನು ರದ್ದುಪಡಿಸುವಂತೆ ಸೂಚಿಸಲಾಗಿದೆ ಎಂದರು.

Advertisement

ಮುಂದಿನ ದಿನಗಳಲ್ಲಿ ತಾಲೂಕಿ ನಾದ್ಯಂತ ಎಲ್ಲ ಗ್ರಾ. ಪಂ. ಗಳ ವ್ಯಾಪ್ತಿ ಯಲ್ಲಿರುವ ಕನ್ನಡೇತರ ನಾಮ ಫ‌ಲಕ ತೆರವುಗೊಳಿಸುವಂತೆ ಅಭಿವೃದ್ಧಿ ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾ. ಪಂ. ವ್ಯಾಪ್ತಿಗಳಲ್ಲಿ ನಾಮ ಫ‌ಲ ಕಗಳನ್ನು ಅಳವಡಿಸಲು ಒಪ್ಪಿಗೆ ಪತ್ರಕ್ಕೆ ಬರುವ ಸಂದರ್ಭ ಸರ್ಕಾರದ ನಿಯಮ ದಂತೆ ಶೇ.60ರಷ್ಟು ಕನ್ನಡ ಭಾಷೆ ನಾಮಫ‌ಲಕಗಳಿಗೆ ಅವಕಾಶ ನೀಡ ಬೇಕೆಂದು ಸೂಚಿಸಲಾಗಿದೆ ಎಂದರು.

500 ರೂ. ದಂಡ

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದ ಮೇರೆಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಕೂಡ ಆಂಗ್ಲಭಾಷೆಯ ನಾಮಫ‌ಲಕಗಳನ್ನು ತೆರವುಗೊಳಿಸ ಲಾಗುತ್ತಿದೆ. Óಸುಂಟಿಕೊಪ್ಪ ನಗರದಲ್ಲಿ ಕಾನೂನನ್ನು ಉಲ್ಲಂಘಿಸಿ ಹೊಟೇಲು, ಅಂಗಡಿ ಮುಂಗಟ್ಟುಗಳಲ್ಲಿ, ವಿವಿಧ ದೂರವಾಣಿ ಸಂಸ್ಥೆಗಳ ಜಾಹೀರಾತು ಫ‌ಲಕ ಮತ್ತು ಇತರ ವಸತಿ ಗೃಹಗಳ ಮೇಲ್ಭಾಗಗಳಲ್ಲಿ ಎದ್ದು ಕಾಣುವಂತೆ ಅಳವಡಿಸಿದ್ದ ಆಂಗ್ಲ ಭಾಷೆಯ ಬೃಹತ್‌ ಗಾತ್ರದ ನಾಮಫ‌‌ಲಕಗಳನ್ನು ತೆರವುಗೊಳಿಸಲಾಯಿತು. ನಿಯ ಮವನ್ನು ಉಲ್ಲಂಘಿಸಿದ ಅಂಗಡಿ ಮಾಲಕರಿಗೆ 500 ರೂ. ದಂಡ, ಅನಂತರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪಂಚಾ ಯತ್‌ ಅಧ್ಯಕ್ಷರು ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next